For Quick Alerts
ALLOW NOTIFICATIONS  
For Daily Alerts
 

RCB vs RR: ಆರ್‌ಸಿಬಿ ದಾಂಡಿಗರಿಗೆ ಸಿಂಹಸ್ವಪ್ನವಾದ ಕನ್ನಡಿಗ ವೇಗಿಯನ್ನು ಕೊಂಡಾಡಿದ ಸಚಿನ್ ತೆಂಡೂಲ್ಕರ್

IPL 2022: Sachin Tendulkar praises Prasidh Krishna for impressive show Aagainst RCB in Qualifier 2

ಐಪಿಎಲ್ 15ನೇ ಆವೃತ್ತಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿದೆ. ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ಉತ್ತಮ ಆರಂಭವನ್ನು ಪಡೆದರೂ ದೊಡ್ಡ ಮೊತ್ತವನ್ನು ಗಳಿಸಲು ಸಾಧ್ಯವಾಗಲಿಲ್ಲ. 157 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿತ್ತು ಫಾಫ್ ಡು ಪ್ಲೆಸಿಸ್ ಪಡೆ. ಈ ಮೊತ್ತವನ್ನು ರಾಜಸ್ಥಾನ್ ರಾಯಲ್ಸ್ ಯಾವುದೇ ಆತಂಕವಿಲ್ಲದೆ ಗೆದ್ದು ಬೀಗಿತ್ತು.

ರಾಜಸ್ಥಾನ್ ರಾಯಲ್ಸ್ ತಂಡದ ಈ ಭರ್ಜರಿ ಗೆಲುವಿನಲ್ಲಿ ತಂಡದ ಬೌಲರ್‌ಗಳ ಪಾತ್ರ ಅತ್ಯಂತ ದೊಡ್ಡದು ಎಂದು ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಬಣ್ಣಿಸಿದ್ದಾರೆ. ಈ ಸಂದರ್ಭದಲ್ಲಿ ಆರ್‌ಸಿಬಿ ತಂಡ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗದಂತೆ ಕಟ್ಟಿ ಹಾಕಲು ಯಶಸ್ವಿಯಾದ ಆರ್‌ಸಿಬಿ ತಂಡದ ಇಬ್ಬರು ಬೌಲರ್‌ಗಳನ್ನು ಸಚಿನ್ ತೆಂಡೂಲ್ಕರ್ ಭಾರೀ ಪ್ರಶಂಸಿಸಿದ್ದಾರೆ. ಅದರಲ್ಲಿ ಓರ್ವ ಕನ್ನಡಿಗ ಎಂಬುದು ಗಮನಾರ್ಹ ಅಂಶ.

ಆರ್‌ಸಿಬಿ ತಂಡಕ್ಕೆ ಆಘಾತ ನೀಡಿದ ಕನ್ನಡಿಗ

ಆರ್‌ಸಿಬಿ ತಂಡಕ್ಕೆ ಆಘಾತ ನೀಡಿದ ಕನ್ನಡಿಗ

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಯೂಟ್ಯೂಬ್ ಚಾನೆಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ಮಾತನಾಡಿದ್ದಾರೆ. ಆರಂಭದಿಂದಲೇ ಅದ್ಭುತ ಬೌಲಿಂಗ್ ದಾಳಿ ನಡೆಸಿದ್ದ ಪ್ರಸಿದ್ಧ್ ಕೃಷ್ಣ ಆರ್‌ಸಿಬಿ ತಂಡ 157 ರನ್‌ಗಳಿಗೆ ಸೀಮಿತವಾಗಲು ದೊಡ್ಡ ಕೊಡುಗೆ ನೀಡಿದ್ದಾರೆ. ನಾಲ್ಕು ಓವರ್‌ಗಳ ತಮ್ಮ ಕೋಟಾದಲ್ಲಿ ಪ್ರಸಿದ್ಧ ಕೃಷ್ಣ ಕೇವಲ 23 ರನ್‌ಗಳನ್ನು ಗಳಿಸಿದ್ದು 3 ವಿಕೆಟ್ ಸಂಪಾದಿಸಿದರು.ಆರಂಭದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿ ಆಘಾತ ನೀಡಿದ್ದ ಪ್ರಸಿದ್ಧ್ ಕೃಷ್ಣ ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಹಾಗೂ ವನಿಂದು ಹಸರಂಗ ಅವರನ್ನು ಸತತ ಎರಡು ಎಸೆತಗಳಲ್ಲಿ ಔಟ್ ಮಾಡಿ ಫೆವಿಲಿಯನ್‌ಗೆ ಅಟ್ಟಿದ್ದರು. ಮತ್ತೋರ್ವ ಆರ್‌ಆರ್ ವೇಗಿ ಮೆಕ್ಕಾಯ್ ಪ್ರದರ್ಶನಕ್ಕೆ ಕೂಡ ಸಚಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅವರಿಬ್ಬರು ಆರ್‌ಸಿಬಿಯನ್ನು ಒತ್ತಡಕ್ಕೆ ಸಿಲುಕಿಸಿದರು

ಅವರಿಬ್ಬರು ಆರ್‌ಸಿಬಿಯನ್ನು ಒತ್ತಡಕ್ಕೆ ಸಿಲುಕಿಸಿದರು

ಪ್ರಸಿದ್ಧ್ ಕೃಷ್ಣ ಹಾಗೂ ಮೆಕ್ಕಾಯ್ ಇಬ್ಬರು ಸೇರಿ ಆರ್‌ಸಿಬಿ ತಂಡವನ್ನು ಒತ್ತಡಕ್ಕೆ ತಳ್ಳಿದರು. ಕೆಳ ಕ್ರಮಾಂಕದಲ್ಲಿ ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದು ಅದ್ಭುತ ಸ್ಟ್ರೈಕ್‌ರೇಟ್ ಹೊಂದಿರುವ ದಿನೇಶ್ ಕಾರ್ತಿಕ್ ಅವರನ್ನು ಔಟ್ ಮಾಡಿದ್ದ ಪ್ರಸಿದ್ಧ್ ಕೃಷ್ಣ ಅದ್ಭುತ ಬೌಲಿಂಗ್ ಮೂಲಕ ಹಸರಂಗ ಅವರನ್ನು ಕೂಡ ಔಟ್ ಮಾಡಿದರು. ಇಂಥಾ ಪಿಚ್‌ನಲ್ಲಿ 157 ರನ್ ಉತ್ತಮವಾಗಿ ಮೊತ್ತವಾಗಿರಲಿಲ್ಲ" ಎಂದಿದ್ದಾರೆ ಸಚಿನ್ ತೆಂಡೂಲ್ಕರ್.

ಮತ್ತೊಮ್ಮೆ ಮಿಂಚಿದ ಬಟ್ಲರ್

ಮತ್ತೊಮ್ಮೆ ಮಿಂಚಿದ ಬಟ್ಲರ್

ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮತ್ತೊಮ್ಮೆ ಜೋಸ್ ಬಟ್ಲರ್ ಆಸರೆಯಾದರು. ಆರಂಭಿಕನಾಗಿ ಕಣಕ್ಕಿಳಿದು 60 ಎಸೆತಗಳಲ್ಲಿ ಅಜೇಯ 106 ರನ್‌ಗಳಿಸಿದ ಬಟ್ಲರ್ ತಂಡಕ್ಕೆ ಸುಲಭ ಗೆಲುವನ್ನು ತಂದಿತ್ತರು. ಇನ್ನೂ 11 ಎಸೆತಗಳು ಬಾಕಿಯಿರುವಂತೆಯೇ 7 ವಿಕೆಟ್‌ಗಳ ಅಂತರದಿಂದ ರಾಜಸ್ಥಾನ್ ರಾಯಲ್ಸ್ ಗೆಲುವು ಸಾಧಿಸಿದ್ದು ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಫೈನಲ್ ಸೆಣೆಸಾಟಕ್ಕೆ ತಂಡಗಳು ಸಜ್ಜು

ಫೈನಲ್ ಸೆಣೆಸಾಟಕ್ಕೆ ತಂಡಗಳು ಸಜ್ಜು

ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಈ ಬಾರಿಯ ಐಪಿಎಲ್‌ನಲ್ಲಿ ಫೈನಲ್ ಹಂತಕ್ಕೇರಿದ್ದು ಭಾನುವಾರ ಈ ಅಂತಿಮ ಸೆಣೆಸಾಟ ನಡೆಯಲಿದೆ. ಗುಜರಾತ್ ಟೈಟನ್ಸ್ ಚೊಚ್ಚಲ ಆವೃತ್ತಿಯಲ್ಲಿಯೇ ಅತ್ಯುತ್ತಮ ಪ್ರದರ್ಶನ ನೀಡಿ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದರೆ ಐಪಿಎಲ್ ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಎನಿಸಿಕೊಂಡಿರುವ ರಾಜಸ್ಥಾನ್ ರಾಯಲ್ಸ್ 13 ವರ್ಷಗಳ ಬಳಿಕ ಮತ್ತೊಮ್ಮೆ ಫೈನಲ್‌ಗೆ ಪ್ರವೇಶ ಪಡೆದ್ದು ಮತ್ತೊಮ್ಮೆ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ.

Story first published: Saturday, May 28, 2022, 17:51 [IST]
Other articles published on May 28, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+