Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸ್ವಿಗ್ಗಿ ಅನ್ನು ಖರೀದಿ ಮಾಡಿ ಎಂದು ಎಲೋನ್ ಮಸ್ಕ್‌ಗೆ ಶುಭಮನ್ ಗಿಲ್‌ ಟ್ವೀಟ್: ತಕ್ಷಣವೇ ಉತ್ತರ

Shubman gill

ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಅನ್ನು ಖರೀದಿಸಿದ ವಿಶ್ವದ ನಂಬರ್ ಒನ್ ಶ್ರೀಮಂತ ಎಲೋನ್ ಮಸ್ಕ್‌ ಟ್ವಿಟ್ಟರ್‌ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದು, ಬಳಕೆದಾರರು ಒಂದಿಲ್ಲೊಂದು ಟ್ವೀಟ್ ಮಾಡುತ್ತಲೇ ಇರುತ್ತಾರೆ. ಎಲೋನ್‌ ಮಸ್ಕ್‌ಗೆ ತಮಾಷೆಗೆಂದು ಖರೀದಿಯ ಆಫರ್ ನೀಡುತ್ತಿರುತ್ತಾರೆ.

ಭಾರತದ ಯುವ ಕ್ರಿಕೆಟಿಗ, ಐಪಿಎಲ್ 2022ರ ಸೀಸನ್‌ನಲ್ಲಿ ಗುಜರಾತ್ ಟೈಟನ್ಸ್ ಪರ ಬ್ಯಾಟ್‌ ಬೀಸುತ್ತಿರುವ ಶುಭಮನ್ ಗಿಲ್‌ ಸಹ ಎಲೋನ್ ಮಸ್ಕ್‌ಗೆ ಟ್ವೀಟ್ ಮಾಡಿದ್ದಾರೆ. ಗಿಲ್ ಟ್ವೀಟ್ ಮಾಡುತ್ತಿದ್ದಂತೆ ತಕ್ಷಣವೇ ಉತ್ತರ ಕೂಡ ಸಿಕ್ಕಿದೆ.

ಶುಭಮನ್ ಗಿಲ್‌ ಕಳೆದ ರಾತ್ರಿ (ಏ.29) ರಾತ್ರಿ 11.1 ನಿಮಿಷಕ್ಕೆ ಟ್ವೀಟ್ ಮಾಡಿದ್ದು, ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್‌ಗೆ ಟ್ಯಾಗ್ ಮಾಡಿದ್ದಾರೆ. ಟ್ವೀಟ್‌ನಲ್ಲಿ ಎಲೋನ್‌ ಮಸ್ಕ್‌ ದಯವಿಟ್ಟು ಸ್ವಿಗ್ಗಿಯನ್ನು ಖರೀದಿ ಮಾಡಿ, ಆಗಲಾದ್ರೂ ಸರಿಯಾದ ಸಮಯಕ್ಕೆ ಡೆಲಿವರಿ ಸಿಗಲಿದೆ'' ಎಂದು ಟ್ವೀಟ್ ಮಾಡಿದ್ರು.

ಎಲೋನ್ ಮಸ್ಕ್‌ ಇದನ್ನ ಓದಲು ಸಮಯ ಇತ್ತೇ ಗೊತ್ತಿಲ್ಲ, ಆದ್ರೆ ಶುಭಮನ್ ಗಿಲ್‌ ಟ್ವೀಟ್‌ಗೆ ಸ್ವಿಗ್ಗಿಯ ಅಧಿಕೃತ ಅಕೌಂಟ್‌ನಿಂದ ಉತ್ತರ ಮಾತ್ರ ತಕ್ಷಣವೇ ಸಿಕ್ಕಿದೆ.

ಸ್ವಿಗ್ಗಿಯ ಟ್ವಿಟ್ಟರ್ ಖಾತೆಯಿಂದ ಗಿಲ್‌ಗೆ ಪ್ರತಿಕ್ರಿಯೆಯಾಗಿ, ಅವರು ಬರೆದಿದ್ದಾರೆ, "ಹಾಯ್ ಶುಭ್‌ಮನ್, ಟ್ವಿಟರ್ ಅಥವಾ ಟ್ವಿಟರ್ ಇಲ್ಲ, ನಿಮ್ಮ ಆರ್ಡರ್‌ನೊಂದಿಗೆ ಎಲ್ಲವೂ ಪರಿಪೂರ್ಣವಾಗಿರಬೇಕು ಎಂದು ನಾವು ಬಯಸುತ್ತೇವೆ (ನೀವು ಆರ್ಡರ್ ಮಾಡಿದ್ದರೆ). ನಿಮ್ಮ ವಿವರಗಳೊಂದಿಗೆ DM ನಲ್ಲಿ ನಮ್ಮನ್ನು ಸಂಪರ್ಕಿಸಿ, ನಾವು ವೇಗವಾಗಿ ಕಾರ್ಯನಿರ್ವಹಿಸುತ್ತೇವೆ'' ಎಂದು ಸ್ವಿಗ್ಗಿ ಕೇರ್ಸ್ ಟ್ವೀಟ್ ಮಾಡಿದೆ.

ಸ್ವಲ್ಪ ಸಮಯದ ನಂತರ ಮತ್ತೊಂದು ಟ್ವೀಟ್ ಬಂದಿದ್ದು, ಅದರಲ್ಲಿ ನಿಮ್ಮ ಸಂದೇಶವನ್ನು ನಾವು ಸ್ವೀಕರಿಸಿದ್ದೇವೆ ಎಂದು ಬರೆಯಲಾಗಿದೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇವೆ ಎನ್ನಲಾಗಿದೆ.

ಎಲೋನ್ ಮಸ್ಕ್‌ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣ ದೈತ್ಯ ಟ್ವಿಟ್ಟರ್ ಅನ್ನು 44 ಬಿಲಿಯನ್ ಡಾಲರ್‌ಗೆ ಖರೀದಿ ಮಾಡಿದ್ದಾರೆ.

Story first published: Saturday, April 30, 2022, 10:33 [IST]
Other articles published on Apr 30, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+