Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022: ಸಿಡಿದೆದ್ದ ಚಹಾಲ್‌ಗೆ ಸಮಾಧಾನ ಮಾಡಿದ ಸೂರ್ಯಕುಮಾರ್ ಯಾದವ್

Suryakumar yadav vs Chahal

ಶನಿವಾರ (ಏ.30) ನಡೆದ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಟೀಮ್ ಈ ಸೀಸನ್‌ನ ಮೊದಲ ಗೆಲುವು ದಾಖಲಿಸಿತು. ಸೂರ್ಯಕುಮಾರ್ ಯಾದವ್ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ಕೊನೆಗೂ ಗೆಲುವಿನ ಖಾತೆ ತೆರದಿದೆ.

39 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 51 ದಾಖಲಿಸಿದ ಸೂರ್ಯಕುಮಾರ್ ಯಾದವ್‌ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿರು. ಈ ವೇಳೆಯಲ್ಲಿ ಬೇಸರಗೊಂಡಿದ್ದ ಚಹಾಲ್‌ನನ್ನ ಸಮಾಧಾನ ಪಡಿಸಿರುವ ಸೂರ್ಯಕುಮಾರ್ ಯಾದವ್ ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಜಗಳ ಆಗಿಲ್ಲ ಎಂದು ತಿಳಿಸಿದ್ದಾರೆ.

ಸೂರ್ಯಕುಮಾರ್ ಯಾದವ್ 27 ರನ್ ಗಳಿಸಿದ್ದಾಗ ಚಹಾಲ್ 8ನೇ ಓವರನ್‌ನಲ್ಲಿ ಬೌಲ್ ಮಾಡಿದರು. ತಮ್ಮ ಬೌಲಿಂಗ್‌ನೊಂದಿಗೆ ಓವರ್‌ನ ಕೊನೆಯ ಎಸೆತಕ್ಕೆ ಸೂರ್ಯಕುಮಾರ್ ವಿರುದ್ಧ ಎಲ್‌ಬಿಡಬ್ಲ್ಯೂ ಮನವಿ ಮಾಡಿದರೂ ಅಂಪೈರ್ ನಾಟ್ ಔಟ್ ನೀಡಿದರು. ಆದರೆ ಟೀಂ ಇಂಡಿಯಾ ನಾಯಕ ಸಂಜು ಸ್ಯಾಮ್ಸನ್ ಗೆ ರಿವೀವ್ ತೆಗೆದುಕೊಳ್ಳುವಂತೆ ಚಹಾಲ್ ಒತ್ತಾಯಿಸಿದ ಬಳಿಕ ಸ್ಯಾಮ್ಸನ್ ರಿವೀವ್ ತೆಗೆದುಕೊಂಡರು.

ಥರ್ಡ್ ಅಂಪೈರ್ ರಿವೀವ್‌ನಲ್ಲಿ ಸ್ವೀಪ್ ಶಾಟ್ ಆಡುವಾಗ ಸೂರ್ಯ ಕುಮಾರ್ ಬ್ಯಾಟ್ ಅನ್ನು ಮುಟ್ಟದೆ ಚೆಂಡು ಪ್ಯಾಡ್‌ಗಳನ್ನು ಹೊಡೆಯುತ್ತಿರುವಂತೆ ತೋರುತ್ತಿದೆ. ಇದರೊಂದಿಗೆ ಅಂಪೈರ್ ಬಾಲ್ ಟ್ರ್ಯಾಕಿಂಗ್ ಗೆ ತೆರಳಿದರು.

ಬಾಲ್ ಟ್ರ್ಯಾಕಿಂಗ್‌ನಲ್ಲಿ, ಚೆಂಡು ಸಾಲಿನಲ್ಲಿ ಬಿದ್ದು ವಿಕೆಟ್‌ಗಳನ್ನು ತೆಗೆದುಕೊಳ್ಳುವುದನ್ನು ತೋರಿಸಿದರೂ ಸಹ, ಅಂಪೈರ್ ನಾಟ್ ಔಟ್ ನೀಡಿದ್ದರಿಂದ ನಾಟೌಟ್ ಆಯಿತು. ಚಹಾಲ್ ತೀವ್ರ ನಿರಾಶೆಗೊಂಡರು. ಸೂರ್ಯ ಕುಮಾರ್ ಯಾದವ್ ಇನ್ನೊಂದು ತುದಿಯಲ್ಲಿ ಚಾಹಲ್ ಅವರ ಕುತ್ತಿಗೆಯ ಮೇಲೆ ಕೈಯಿಟ್ಟು ತಬ್ಬಿಕೊಂಡು ಆತನನ್ನ ಸಮಾಧಾನಪಡಿಸಿದರು.

ಈ ನಿಟ್ಟಿನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಸೂರ್ಯಕುಮಾರ್ ಮಾತನಾಡಿದ್ದು ''ನಾನು ಚಾಹಲ್‌ನನ್ನು ತಬ್ಬಿ ಸಮಾಧಾನಪಡಿಸಿದೆ .ಆ ಸಮಯದಲ್ಲಿ ನಾನು ಅವನಿಗೆ ಏನೂ ಹೇಳಲಿಲ್ಲ. ನಮ್ಮಿಬ್ಬರ ನಡುವೆ ತಮಾಷೆಯಾಗಿತ್ತು ಆದರೆ ಗಂಭೀರವಾದದ್ದೇನೂ ಆಗಲಿಲ್ಲ. ಮುಂದೆ ಅಂಪೈರ್ ತೀರ್ಪಿನಿಂದಾಗಿ ನಾನು ತಪ್ಪಿಸಿಕೊಂಡೆ. ಆ ನಂತರ ನಾನು, ತಿಲಕ್ ಜೊತೆಯಾಗಿ ಇನ್ನಿಂಗ್ಸ್ ಕಟ್ಟುತ್ತಿದ್ದೆವು ಮತ್ತು ಕೊನೆಯಲ್ಲಿ ನಮ್ಮ ಆಟಗಾರರು ಮಿಂಚಿದ್ದರಿಂದ ಗೆಲುವಿನ ಖುಷಿ ಕಾಣುತ್ತಿದೆ. ಚಾಹಲ್‌ನ ಬಗ್ಗೆ ಹೇಳುವುದಾದರೆ, ಅವರೊಬ್ಬ ಶ್ರೇಷ್ಠ ಬೌಲರ್. ಅವರ ಬೌಲಿಂಗ್‌ನಲ್ಲಿ ಆಡುವುದನ್ನು ನಾನು ಆನಂದಿಸುತ್ತೇನೆ, "ಎಂದು ಸೂರ್ಯಕುಮಾರ್ ಹೇಳಿದರು.

Shabaz Ahmed ಅವರ ಒಂದೇ ಓವರ್‌ನಲ್ಲಿ ಏನೆಲ್ಲಾ ನಡೆದುಹೋಯಿತು | Oneindia Kannada

ಸೂರ್ಯಕುಮಾರ್ 51 ರನ್ ಗಳಿಸಿದ್ದಾಗ ಚಹಾಲ್ ಬೌಲಿಂಗ್ ನಲ್ಲಿ ರಿಯಾನ್ ಪರಾಗ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ವೇಳೆಯಲ್ಲಿ ತಿಲಕ್ ವರ್ಮಾ ಅವರೊಂದಿಗೆ 81 ರನ್ ಗಳ ಜೊತೆಯಾಟ ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Story first published: Sunday, May 1, 2022, 16:48 [IST]
Other articles published on May 1, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+