
ಗುಜರಾತ್ ಟೈಟನ್ಸ್
ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ಆಡಿರುವ 7 ಪಂದ್ಯಗಳಲ್ಲಿ 6 ಗೆಲುವು ಮತ್ತು ಏಕೈಕ ಪಂದ್ಯ ಸೋಲಿನ ಮೂಲಕ 12 ಪಾಯಿಂಟ್ಸ್‌ಗಳಿಸಿದೆ. ನೆಟ್‌ರನ್‌ರೇಟ್ ಕೂಡ ಉತ್ತಮವಾಗಿರುವ(0.396) ಇರುವುದರಿಂದ ಅಗ್ರಸ್ಥಾನ ಅಲಂಕರಿಸಿದೆ.
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಮಾತ್ರ ಸೋಲನ್ನ ಕಂಡಿದೆ. ಉಳಿದ ಪಂದ್ಯಗಳನ್ನ ಜಯಿಸಿರುವ ಗುಜರಾತ್ ಟೀಂ ಪ್ಲೇ ಆಫ್ ಹಂತಕ್ಕೇರಲು ಶೇಕಡಾ 89ರಷ್ಟು ಅವಕಾಶವಿದೆ.

ಸನ್‌ರೈಸರ್ಸ್ ಹೈದ್ರಾಬಾದ್
ಐಪಿಎಲ್ 2022ರ ಸೀಸನ್‌ನ ಮೊದಲೆರಡು ಪಂದ್ಯಗಳನ್ನ ಸೋತು, ಅದ್ಭುತ ಕಂಬ್ಯಾಕ್ ಮಾಡಿದ ಸನ್‌ರೈಸರ್ಸ್ ಹೈದ್ರಾಬಾದ್ ಸತತ ಐದು ಪಂದ್ಯಗಳನ್ನ ಗೆಲ್ಲುವ ಮೂಲಕ ಅಬ್ಬರದ ಆಟವಾಡಿದೆ. ಕೇನ್ ವಿಲಿಯಮ್ಸನ್ ಟೀಂ ಆಡಿದ 7 ಪಂದ್ಯಗಳಲ್ಲಿ 5 ಗೆಲುವು ಮತ್ತು 2 ಪಂದ್ಯ ಸೋಲಿನೊಂದಿಗೆ 10 ಪಾಯಿಂಟ್ಸ್‌ನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.
ನೆಟ್ ರನ್‌ರೇಟ್ ವಿಚಾರದಲ್ಲಿ ಉಳಿದ ಎಲ್ಲಾ ತಂಡಗಳಿಗಿಂತ ಹೆಚ್ಚಿನ ಪಾಯಿಂಟ್ಸ್ ಹೊಂದಿದ್ದು, ಎಸ್‌ಆರ್‌ಎಚ್ ಪ್ಲೇ ಆಫ್‌ಗೇರುವ ಅವಕಾಶ ಶೇಕಡಾ 70ರಷ್ಟಿದೆ.
IPL 2022: ರಶೀದ್ ಖಾನ್ ಬಹುದೊಡ್ಡ ವಿಕೆಟ್ ಟೇಕರ್ ಅಲ್ಲ ಎಂದ ಬ್ರಿಯಾನ್ ಲಾರಾ

ರಾಜಸ್ತಾನ್ ರಾಯಲ್ಸ್
ಪ್ರಸಕ್ತ ಸೀಸನ್‌ನಲ್ಲಿ ಬೊಂಬಾಟ್ ಪ್ರದರ್ಶನ ನೀಡುತ್ತಿರುವ ರಾಜಸ್ತಾನ್ ರಾಯಲ್ಸ್ ಮೂರು ವಿಭಾಗದಲ್ಲಿ ಬಲಿಷ್ಠ ತಂಡವಾಗಿ ಕಾಣಿಸಿಕೊಂಡಿದೆ. ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ತಾನ್ ತಂಡದಲ್ಲಿ ಓಪನರ್ ಜಾಸ್ ಬಟ್ಲರ್ ಅದ್ಭುತ ಫಾರ್ಮ್‌ನಲ್ಲಿದ್ದು ಮೂರು ಶತಕ ದಾಖಲಿಸಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ.
ಆಡಿದ 7 ಪಂದ್ಯಗಳಲ್ಲಿ 5 ಗೆಲುವು ಮತ್ತು 2 ಪಂದ್ಯ ಸೋಲಿನೊಂದಿಗೆ 10 ಪಾಯಿಂಟ್ಸ್‌ನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆರ್‌ಆರ್, ಆರೆಂಜ್ ಆರ್ಮಿಗಿಂತ ಕೊಂಚ ನೆಟ್ ರನ್‌ರೇಟ್‌ನಲ್ಲಿ ಹಿಂದಿದ್ದಾರೆ. ಆದರೂ ಕೂಡ ರಾಜಸ್ತಾನ್‌ಗೆ ಪ್ಲೇ ಆಫ್‌ಗೇರುವ ಅವಕಾಶ ಶೇಕಡಾ 70ರಷ್ಟಿದೆ.
IPL 2022: ತಂಡಗಳು ಪ್ಲೇ ಆಫ್ ತಲುಪಲು ಎಷ್ಟು ಪಾಯಿಂಟ್ಸ್ ಬೇಕು?

ಲಕ್ನೋ ಸೂಪರ್‌ಜೈಂಟ್ಸ್
ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಬಲಿಷ್ಟ ಬ್ಯಾಟಿಂಗ್ ಲೈನಪ್ ಹೊಂದಿರುವ ತಂಡವಾಗಿದೆ. ಆರಂಭಿಕ ಪಂದ್ಯದಲ್ಲಿ ಸೋಲಿನ ಮೂಲಕ ಟೂರ್ನಿ ಆರಂಭಿಸಿದ ಲಕ್ನೋ, ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ನಾಲ್ಕು ಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಸೂಪರ್‌ಜೈಂಟ್ಸ್ ಆಡಿರುವ 8 ಪಂದ್ಯಗಳಲ್ಲಿ 5 ಗೆಲುವು ಮತ್ತು 3 ಪಂದ್ಯಗಳಲ್ಲಿ ಸೋಲನ್ನ ಕಂಡಿದ್ದು, 10 ಪಾಯಿಂಟ್ಸ್ ಹೊಂದಿದೆ. ನೆಟ್ ರನ್‌ರೇಟ್ 0.0334ನಷ್ಟಿದ್ದು, ಈ ತಂಡದ ಪ್ಲೇ ಆಫ್ ಸಾಧ್ಯತೆ ಶೇಕಡಾ 57ರಷ್ಟಿದೆ.
ವಿಶ್ವಕಪ್ ತಂಡದ ಕನಸು ಕಾಣುತ್ತಿರುವ ಡಿಕೆಗೆ ಐಪಿಎಲ್‌ನಲ್ಲಿ ಅಬ್ಬರಿಸುತ್ತಿರುವ ಈತನೆದುರು ಅವಕಾಶ ಕಷ್ಟ!

ರಾಯಲ್ ಚಾಲೆಂಜರ್ಸ್ ಬೆಂಗಳೂರು
ಅನಿರೀಕ್ಷಿತ ಪ್ರದರ್ಶನ ನೀಡುವುದರಲ್ಲಿ ಎತ್ತಿದ ಕೈ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಳೆದ ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಅತ್ಯಂತ ಹೀನಾಯ ಸೋಲನ್ನ ಕಂಡಿತು. ಆರ್‌ಸಿಬಿ 68 ರನ್‌ಗಳಿಗೆ ಆಲೌಟ್ ಆಗಿದ್ದಲ್ಲದೆ, ಎದುರಾಳಿ ಕೇವಲ 8 ಓವರ್‌ಗಳಲ್ಲಿ ಗುರಿ ತಲುಪುವಂತೆ ಮಾಡಿದೆ.
ಸದ್ಯ ಪಾಯಿಂಟ್ಸ್ ಟೇಬಲ್‌ನಲ್ಲಿ ಐದನೇ ಸ್ಥಾನದಲ್ಲಿರುವ ಆರ್‌ಸಿಬಿ 8 ಪಂದ್ಯಗಳಲ್ಲಿ 5 ಗೆಲುವು ಮತ್ತು 3 ಪಂದ್ಯಗಳಲ್ಲಿ ಸೋಲನ್ನ ಕಂಡಿದ್ದು, 10 ಪಾಯಿಂಟ್ಸ್ ಹೊಂದಿದೆ. ನೆಟ್ ರನ್‌ರೇಟ್ ಮಾತ್ರ -0.472 ಮಟ್ಟಕ್ಕೆ ಕುಸಿದಿದೆ. ಹೀಗಾಗಿ ಆರ್‌ಸಿಬಿಗೆ ಪ್ಲೇ ಆಫ್‌ಗೇರುವ ಅವಕಾಶ ಶೇಕಡಾ 57ರಷ್ಟಿದೆ.

ಪಂಜಾಬ್ ಕಿಂಗ್ಸ್
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಪಂಜಾಬ್ ಕಿಂಗ್ಸ್ ಬಹು ನಿಧಾನವಾಗಿ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಆಡಿರುವ 8 ಪಂದ್ಯಗಳಲ್ಲಿ ತಲಾ 4 ಗೆಲುವು ಮತ್ತು ಸೋಲಿನ ರುಚಿ ನೋಡಿರುವ ಮಯಾಂಕ್ ನಾಯಕತ್ವದ ಟೀಂ ಆರ್‌ಸಿಬಿ ನಂತರದಲ್ಲಿ ಸ್ಥಾನ ಪಡೆದಿದೆ.
8 ಪಾಯಿಂಟ್ಸ್ ಹೊಂದಿರುವ ಪಂಜಾಬ್ ಕಿಂಗ್ಸ್ ಉಳಿದ ಆರು ಪಂದ್ಯಗಳಲ್ಲಿ ಐದು ಪಂದ್ಯಗಳನ್ನಾದ್ರು ಜಯಿಸಿದ್ರೆ ಮಾತ್ರ ಪ್ಲೇ ಆಫ್ ಖಚಿತ ಎನ್ನಬಹುದು. ಹೀಗಾಗಿ ಪಂಜಾಬ್ ಕಿಂಗ್ಸ್ ಪ್ಲೇ ಆಫ್ ಅವಕಾಶ ಶೇಕಡಾ 28ರಷ್ಟು ಅಂದಾಜಿಸಬಹುದು.

ಡೆಲ್ಲಿ ಕ್ಯಾಪಿಟಲ್ಸ್
ಯುವಕರ ತಂಡದಿಂದ ಕೂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿಯ ಐಪಿಎಲ್ ಫೇವರಿಟ್ ತಂಡಗಳಲ್ಲಿ ಒಂದಾಗಿತ್ತು. ಆದ್ರೆ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ ಡೆಲ್ಲಿ ಗೆಲುವಿಗಿಂತ ಸೋಲನ್ನೇ ಹೆಚ್ಚು ನೋಡಿದೆ. ತಂಡದಲ್ಲಿ ಕೋವಿಡ್ ಕೇಸ್ ಜೊತೆಗೆ, ನೀರಸ ಪ್ರದರ್ಶನ ಅಭಿಮಾನಿಗಳಲ್ಲಿ ಬೇಸರ ತರಿಸಿದೆ.
ಆಡಿರುವ 7 ಪಂದ್ಯಗಳಲ್ಲಿ ಡೆಲ್ಲಿ 3 ಗೆದ್ದಿದ್ದು, 4 ಪಂದ್ಯಗಳಲ್ಲಿ ಸೋತಿದೆ. 6 ಪಾಯಿಂಟ್ಸ್‌ನೊಂದಿಗೆ ಏಳನೇ ಸ್ಥಾನದಲ್ಲಿರುವ ಡೆಲ್ಲಿ ಉತ್ತಮ ನೆಟ್‌ರನ್‌ರೇಟ್ (+0.715) ಹೊಂದಿದೆ. ಹೀಗಿದ್ದರೂ ಸಹ ಪ್ರಸ್ತುತ ಸ್ಪರ್ಧೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ತಲುಪುವ ಸಾಧ್ಯತೆ ಶೇಕಡಾ 18ರಷ್ಟಿದೆ.

ಕೆಕೆಆರ್, ಸಿಎಸ್‌ಕೆ, ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಬಹುತೇಕ ಡೌಟ್
ಪಾಯಿಂಟ್ಸ್ ಟೇಬಲ್‌ನಲ್ಲಿ ತಳಭಾಗದಿಂದ ಮೂರು ಸ್ಥಾನ ಪಡೆದಿರುವ ಕೆಕೆಆರ್, ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ತಲುಪುವ ಹಾದಿ ಬಹುತೇಕ ಇಲ್ಲವಾಗಿದೆ. ಅದ್ರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಕನಸು ಈಗಾಗಲೇ ಭಗ್ನಗೊಂಡಿದೆ.
ಹೀಗಾಗಿ ಈ ಮೂರು ತಂಡಗಳ ಪ್ಲೇ ಆಫ್ ತಲುಪುವ ಅವಕಾಶ ಶೇಕಡಾವಾರು ಅಂಶಗಳಲ್ಲಿ ಈ ಕೆಳಗೆ ನೀಡಲಾಗಿದೆ.
ಕೆಕೆಆರ್ : 9%
ಸಿಎಸ್‌ಕೆ: 2%
ಮುಂಬೈ ಇಂಡಿಯನ್ಸ್: 0.0002%


Click it and Unblock the Notifications












