For Quick Alerts
ALLOW NOTIFICATIONS  
For Daily Alerts
 

IPL 2022: ಈ 5 ಭಾರತೀಯ ಆಟಗಾರರಿಗೆ ಟೀಂ ಇಂಡಿಯಾ ಕಂಬ್ಯಾಕ್ ಅವಕಾಶ!

IPL 2022: These 5 players Chances Of Team India Comeback

ಇಂಡಿಯನ್ ಪ್ರೀಮಿಯರ್ ಲೀಗ್ ಪ್ರತಿವರ್ಷಗಳಲ್ಲಿ ವಿಭಿನ್ನತೆಯಿಂದ ಗುರುತಿಸಿಕೊಳ್ಳುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಆದ ಹವಾ ಸೃಷ್ಟಿಸಿದ್ದು, ಇದು ಯುವ, ಉದಯೋನ್ಮುಖ ಆಟಗಾರರ ವೃತ್ತಿ ಜೀವನದಲ್ಲಿ ಪರಿಣಾಮಕಾರಿಯಾದ ಬದಲಾವಣೆಯನ್ನು ತಂದೊಡ್ಡಿದೆ. ದಿನ ಕಳೆದಂತೆ ಲೀಗ್‌ನ ಸ್ಪರ್ಧಾತ್ಮಕತೆಯು ಅತ್ಯುತ್ತಮ ಟಿ20 ತಾರೆಗಳೊಂದಿಗೆ ನಿರಂತರವಾಗಿ ಬೆಳೆಯುತ್ತಾ ಸಾಗಿದೆ.

ಐಪಿಎಲ್‌ ದಿನಕಳೆದಂತೆ ಹೊಸ ಆಟಗಾರರನ್ನ ಹುಟ್ಟುಹಾಕುತ್ತಿದೆ. ಹಳೆಯ ಆಟಗಾರರಿಗೆ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಿಸುವ ವೇದಿಕೆಯಾಗಿ ನಿರ್ಮಾಣಗೊಂಡಿದೆ. ಐಪಿಎಲ್ 2022ರ ಸೀಸನ್‌ನಲ್ಲಿ ಸಹ ಉತ್ತಮ ಪ್ರದರ್ಶನದ ಮೂಲಕ ಭಾರತ ತಂಡಕ್ಕೆ ಆಟಗಾರರು ಮರಳುವ ಅವಕಾಶವಿದೆ.

ಐಪಿಎಲ್ ಇತಿಹಾಸವನ್ನ ಗಮನಿಸಿದ್ರೆ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ದೀಪಕ್ ಚಹಾರ್ ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನದ ನಂತರ ರಾಷ್ಟ್ರಿಯ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದರು. ಜೊತೆಗ ಶಿಖರ್ ಧವನ್ ಮತ್ತು ಆಶಿಶ್ ನೆಹ್ರಾ ಅವರಂತಹ ಆಟಗಾರರು ರಾಷ್ಟ್ರೀಯ ತಂಡಕ್ಕೆ ಮರಳಲು ಈ ಪಂದ್ಯಾವಳಿಯು ದಾರಿ ಮಾಡಿಕೊಟ್ಟಿದೆ. ಹೀಗಾಗಿಯೇ ನಿಸ್ಸಂಶಯವಾಗಿ, ಐಪಿಎಲ್ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ರೀತಿಯ ವೇದಿಕೆ ಎಂದು ಸಾಭೀತಾಗಿದೆ.

ಭಾರತೀಯ ಪ್ರತಿಭೆಗಳಿಗೆ ಸಂಬಂಧಿಸಿದಂತೆ ಈ ಆವೃತ್ತಿಯಲ್ಲಿ ಭಾರತ ತಂಡಕ್ಕೆ ಮರಳುವ ರೇಸ್‌ನಲ್ಲಿ ಅನೇಕರು ಇದ್ದು ಅವರಲ್ಲಿ ಶಿವಂ ದುಬೆ, ವರುಣ್ ಚಕ್ರವರ್ತಿ, ಕೃನಾಲ್ ಪಾಂಡ್ಯಾ, ಟಿ. ನಟರಾಜನ್ ಮತ್ತು ಉಮೇಶ ಯಾದವ್‌ ಮುಂಚೂಣಿಯಲ್ಲಿದ್ದಾರೆ. ಈ ಆಟಗಾರರು ಹೇಗೆ ಮತ್ತು ಏಕೆ ರಾಷ್ಟ್ರೀಯ ತಂಡಕ್ಕೆ ಮರಳಬಹುದು ಎಂಬುದನ್ನ ಈ ಕೆಳಗೆ ನೋಡಬಹುದು.

ಶಿವಂ ದುಬೆ:

ಶಿವಂ ದುಬೆ:

ಸತತ ಮೂರು ಸೋಲು ಅನುಭವಿಸಿರುವ ಚನೈ ತಂಡದಲ್ಲಿರುವ ದುಬೆ, ಆಲ್‌ರೌಂಡರ್ ಸ್ಥಾನದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನದಿಂದ ನೀಡುತ್ತಿದ್ದು, ಕಳೆದ ಮೂರು ಪಂದ್ಯಗಳಲ್ಲಿ 109 ರನ್‌ ಕಲೆಹಾಕುವ ಮೂಲಕ ಸಿಎಸ್ ಕೆ ತಂಡದ ಪ್ರಮುಖ ರನ್ ಸ್ಕೋರರ್ ಆಗಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ 3 ರನ್ ಕೆಲೆಹಾಕಿ ಪವಿಲಿಯನ್ ಗೆ ಮರಳಿದ ದುಬೆ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 49 ರನ್‌ಗಳೊಂದಿಗೆ ಫಾರ್ಮ್‌ಗೆ ಮರಳಿದರು.

ಇದಾದ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ 57 ರನ್‌ಗಳಿಸಿದ್ರೂ ಸಹ ತಂಡವನ್ನ ಗೆಲುವಿನ ದಡ ತಲುಪಿಸಲು ಸಾಧ್ಯವಾಗಲಿಲ್ಲ. ಬೌಲಿಂಗ್‌ನಲ್ಲಿ ನಿರೀಕ್ಷಿತ ಮಟ್ಟ ಪ್ರದರ್ಶನ ನೀಡದ ದುಬೆ ಮೂರು ಪಂದ್ಯಗಳಲ್ಲಿ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ. ಅದಲ್ಲೂ 19ನೇ ಓವರ್‌ನಲ್ಲಿ ಬೌಲರ್ ಮಾಡಿ 25ರನ್ ನೀಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.

ಫೆಬ್ರವರಿ 2020 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಬಾರಿಗೆ ಭಾರತೀಯ ತಂಡದಲ್ಲಿ ದುಬೆ ಕಾಣಿಸಿಕೊಂಡಿದ್ದು, ಭಾರತದ ಪರ ಒಟ್ಟು 13 ಟಿ20 ಪಂದ್ಯಗಳಲ್ಲಿ 105ರನ್ ಗಳಿಸಿ, ಐದು ವಿಕೆಟ್ ಪಡೆದಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಬೌಲಿಂಗ್ ಆಲ್‌ರೌಂಡರ್ ಬೇಕಾಗಿರುವುದರಿಂದ ದುಬೆ ಅವರು ಹಾರ್ದಿಕ್ ಪಾಂಡ್ಯ ಮತ್ತು ವೆಂಕಟೇಶ್ ಅಯ್ಯರ್ ಅವರೊಂದಿಗೆ ಸ್ಪರ್ಧಿಸಲಿದ್ದಾರೆ.

ವರುಣ್ ಚಕ್ರವರ್ತಿ

ವರುಣ್ ಚಕ್ರವರ್ತಿ

ಮಿಸ್ಟರಿ ಸ್ಪಿನ್ನರ್ ಎಂದು ಕರೆಯಲ್ಪಡುವ ವರುಣ್ ಚಕ್ರವರ್ತಿ ಅವರು ಐಪಿಎಲ್ ಮೂಲಕ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯಲು ಹುಡುಕಾಟದಲ್ಲಿದ್ದಾರೆ. 2020 ರ ಆವೃತ್ತಿಯಲ್ಲಿ ಅವರು 13 ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಪಡೆದರೆ, ನಂತರದ ಆವೃತ್ತಿಯಲ್ಲಿ ಅವರು 17 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಪಡೆದರು. 2021 ರಲ್ಲಿ, ಅವರು ಶ್ರೀಲಂಕಾ ವಿರುದ್ಧದ ಟಿ20 ಸರಣಿ ಮತ್ತು ನಂತರ ಟಿ20 ವಿಶ್ವಕಪ್ ತಂಡದಲ್ಲಿ ಭಾರತದ ತಂಡದಲ್ಲಿ ಗುರುತಿಸಿಕೊಂಡರು.

ಅಂತರಾಷ್ಟ್ರೀಯ ಮಟ್ಟದ ಪಂದ್ಯದಲ್ಲಿ ಚಕ್ರವರ್ತಿಯ ನಿರಾಶಾದಾಯಕ ಪ್ರದರ್ಶನಗಳಿಂದ ಹೆಚ್ಚು ಕಾಲ ತಂಡದಲ್ಲಿ ಇರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ಅವರು ಆರು ಟಿ20 ಪಂದ್ಯಗಳಲ್ಲಿ ಕೇವಲ ಎರಡು ವಿಕೆಟ್ ಗಳನ್ನು ಪಡೆದಿದ್ದರು. ಚಕ್ರವರ್ತಿ ಸ್ಕಾಟ್ಲೆಂಡ್ ವಿರುದ್ಧ ಭಾರತಕ್ಕಾಗಿ ಆಡಿದ ಕೊನೆಯ ಪಂದ್ಯವಾಗಿತ್ತು. ಕೆಕೆಆರ್ ಪರವಾಗಿ ಈ ಸೀಸನ್‌ನಲ್ಲಿ ನಾಲ್ಕು ಪಂದ್ಯಗಳನ್ನಾಡಿದ್ದು, 3 ವಿಕೆಟ್‌ಗಳನ್ನ ಪಡೆದಿದ್ದಾರೆ.

ಕೃನಾಲ್ ಪಾಂಡ್ಯ

ಕೃನಾಲ್ ಪಾಂಡ್ಯ

ಭಾರತೀಯ ಕ್ರಿಕೆಟ್‌ನ ಉತ್ತಮ ಆಲ್‌ರೌಂಡರ್ ಗಳಲ್ಲಿ ಒಬ್ಬರಾದ ಕೃನಾಲ್ ಪಾಂಡ್ಯ ಸೀಮಿತ ಓವರ್‌ಗಳಲ್ಲಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. 2016 ರ ಆವೃತ್ತಿಯಲ್ಲಿ ಐಪಿಎಲ್ ಪದಾರ್ಪಣೆ ಮಾಡಿದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ ಮುಂಬೈ ಇಂಡಿಯನ್ಸ್ ತಂಡ ವಿಜಯಶಾಲಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕೃನಾಲ್ ಅವರ 2017 ರ ಆವೃತ್ತಿಯಲ್ಲಿನ ಪ್ರದರ್ಶನ , ಟೀಂ ಇಂಡಿಯಾ ಚುಟುಕು ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಯಿತು. ಇವರ ಪ್ರದರ್ಶನ 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಕ್ರಿಕೆಟ್‌ ಪದಾರ್ಪಣೆಗೆ ಸಹಾಯಕವಾಯಿತು.

ಚೊಚ್ಚಲ ಪಂದ್ಯದಲ್ಲಿ 9 ಎಸೆತಗಳಲ್ಲಿ 21ರನ್ ಗಳಿಸಿದ್ದ ಕೃನಾಲ್, ನಾಲ್ಕು ಓವರ್‌ಗಳಲ್ಲಿ 1 ವಿಕೆಟ್ ಪಡೆದು 15ರನ್ ನೀಡಿದರು. ಮಾರ್ಚ್ 2021 ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲ ಏಕದಿನ ಪಂದ್ಯವನ್ನು ಆಡಿದ ಅವರು, 31 ಎಸೆತಗಳಲ್ಲಿ 58 ರನ್‌ಗಳೊಂದಿಗೆ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡವನ್ನು ಗೆಲ್ಲಲು ಸಹಾಯ ಮಾಡಿದರು.

ಐದು ಏಕದಿನ ಪದ್ಯಗಳಲ್ಲಿ ಕೃನಾಲ್ 130 ರನ್ ಗಳಿಸಿದ್ದಾರೆ ಮತ್ತು 19 ಟಿ20 ಗಳಲ್ಲಿ ಅವರು 124 ರನ್ ಕಲೆಹಾಕಿದ್ದಾರೆ. ಐಪಿಎಲ್ 2022 ರಲ್ಲಿ, 4 ಪಂದ್ಯಗಳಲ್ಲಿ 46 ರನ್ ಗಳಿಸಿದ್ದು, ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಟ್ರ್ಯಾಕ್ ರೆಕಾರ್ಡ್ ಮತ್ತು ಪ್ರಸ್ತುತ ಫಾರ್ಮ್‌ನಿಂದಾಗಿ ಮತ್ತೆ ಟೀಂ ಇಂಡಿಯಾಗೆ ಪುನರಾಗಮನ ಮಾಡಬಹುದು.

ಟಿ.ನಟರಾಜನ್

ಟಿ.ನಟರಾಜನ್

ಐಪಿಎಲ್ 2020 ರಲ್ಲಿ ಎಡಗೈ ವೇಗಿ ಟಿ. ನಟರಾಜನ್ ಕಠಿಣ ಪರಿಶ್ರಮವಹಿಸಿ 16 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಉರುಳಿಸಿದ್ದು ಎಸ್‌ಆರ್‌ಎಚ್‌ ಪ್ಲೇಆಫ್ ತಲುಪಲು ಪ್ರಮುಖ ಪ್ಲೇಯರ್‌ ಆಗಿದ್ದಾರೆ. ನಂತರ ಅದೇ ವರ್ಷ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ದೊರೆಯಿತು. ನಟರಾಜನ್ ನಾಲ್ಕು ಟಿ20, ಎರಡು ಏಕದಿನ ಪಂದ್ಯ ಮತ್ತು ಒಂದು ಟೆಸ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 2021 ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಪಂದ್ಯದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು.


ಮೊಣಕಾಲಿನ ಗಾಯದಿಂದಾಗಿ ಐಪಿಎಲ್ 2021 ಆವೃತ್ತಿಯಿಂದ ಹೊರಗುಳಿದಿದ್ದರು. ಜೊತೆಗೆ 2021 ರ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. 2022 ರ ಐಪಿಎಲ್ ಆವೃತ್ತಿಯಲ್ಲಿ, ನಟರಾಜನ್ ಮೈದಾನಕ್ಕೆ ಮರಳಿದ್ದು, ಎರಡು ಪಂದ್ಯಗಳಲ್ಲಿ ನಾಲ್ಕು ವಿಕೆಟ್ಗಳನ್ನು ಪಡೆದಿದ್ದಾರೆ. ಆದರೇ ಎಸ್‌ಆರ್‌ಎಚ್‌ ತಂಡವು ತಮ್ಮ ಎರಡೂ ಪಂದ್ಯಗಳಲ್ಲಿ ಸೋತಿದ್ದರೂ, ಡೆತ್ ಓವರ್‌ಗಳಲ್ಲಿ ಅವರ ಮಾರಕ ಯಾರ್ಕರ್ ಗಳಿಂದ ಮಿಂಚಿದ್ದಾರೆ. ಐಪಿಎಲ್ 2022ರಲ್ಲಿ ಉತ್ತಮ ಪ್ರದರ್ಶನ ನೀಡಿದ್ರೆ, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಗಳಿವೆ.

ಉಮೇಶ ಯಾದವ್‌ :

ಉಮೇಶ ಯಾದವ್‌ :

ವೇಗದ ಬೌಲರ್ ಉಮೇಶ ಯಾದವ್‌ ಅವರು 2010ರಲ್ಲಿ ಪ್ರವೀಣ ಕುಮಾರ ಅವರು ಗಾಯಗೊಂಡ ಹಿನ್ನಲೆಯಲ್ಲಿ ಭಾರತ ಪರ ಮೊದಲ ಟಿ20 ಪಂದ್ಯವನ್ನಾಡಿದರು. ನಂತರದಲ್ಲಿ 2010 ಆವೃತ್ತಿಯ ಐಪಿಎಲ್ ನಲ್ಲಿ ಡೆಲ್ಲಿ ಡೇರ್‌ಡೆವಿಲ್ ಪರ ಅತಿ ಹೆಚ್ಚು ವಿಕೆಟ ಪಡೆದವರ ಪಟ್ಟಿಯಲ್ಲಿ ನಾಲ್ಕನೆ ಸ್ಥಾನದಲ್ಲಿದ್ದರು.

ಕೋಲ್ಕತ್ತಾ ಮತ್ತು ಆರ್‌ಸಿಬಿ ತಂಡಗಳಲ್ಲಿ ಉತ್ತಮ ಪ್ರದರ್ಶನ ಸಹ ಮಾಡಿದರು. ಒಟ್ಟು ಭಾರತದ ಪರ 75 ಏಕದಿನ ಪಂದ್ಯಗಳನ್ನಾಡಿದ್ದು, 106 ವಿಕೆಟ್ ಗಳಿಸಿದ್ದಾರೆ. 155 ಟಿ20ಗಳಲ್ಲಿ 159 ವಿಕೆಟ್‌ ಕಬಳಿಸಿರುವ ಉಮೇಶ ಪ್ರಸಕ್ತ ಸಾಲಿನ ಐಪಿಎಲ್ ಆವೃತ್ತಿಯಲ್ಲಿ 4 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಪಡೆದುಕೊಂಡಿದ್ದು, ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಮುಂಬರುವ ದಿನಗಳಲ್ಲಿ ಸ್ಪರ್ಧೆ ಹೆಚ್ಚಾದಂತೆಲ್ಲಾ ಆಟಗಾರರನ್ನು ತಮ್ಮ ಫಾರ್ಮ್‌ ಅನ್ನು ಸುದಾರಿಸಿಕೊಳ್ಳುವತ್ತ ಗಮನ ಹರಿಸಬೇಕಿದ್ದು, ಈ ಮೇಲ್ಕಂಡ ಆಟಗಾರರಲ್ಲಿ ಯಾರು ಭಾರತ ತಂಡಕ್ಕೆ ಮರಳಲಿದ್ದಾರೆ ಎಂದು ಕಾದು ನೋಡಬೇಕಿದೆ.

Story first published: Friday, April 8, 2022, 16:30 [IST]
Other articles published on Apr 8, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+