9 ಎಸೆತಕ್ಕೆ 31 ರನ್ ಚಚ್ಚಿದ ರಾಜಪಕ್ಸೆ; ಕೊಹ್ಲಿ, ರೈನಾ ಸೇರಿದಂತೆ 11 ಆಟಗಾರರು ಇದಕ್ಕಿಂತಲೂ ಅಬ್ಬರಿಸಿದ್ದರು!

ಸದ್ಯ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದ್ದು, ಈ ಬಾರಿಯ ಟೂರ್ನಿಯಲ್ಲಿ ಟ್ರೋಫಿಗಾಗಿ ಒಟ್ಟು ಹತ್ತು ತಂಡಗಳ ನಡುವೆ ಸೆಣಸಾಟ ನಡೆಯುತ್ತಿದೆ. ಇನ್ನು ಕಳೆದೆರಡು ಟೂರ್ನಿಗಳಿಗೆ ಹೋಲಿಸಿದರೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಹೆಚ್ಚು ಮನರಂಜನೆಯನ್ನು ನೀಡುತ್ತಿದ್ದು, ಕಳೆದ ಆವೃತ್ತಿಗಳಲ್ಲಿ ಅಲ್ಪ ಮೊತ್ತ ಕಲೆಹಾಕಿ ಬೇಸರ ಮೂಡಿಸಿದ್ದ ತಂಡಗಳು ಈ ಬಾರಿ ದೊಡ್ಡ ಮೊತ್ತಗಳನ್ನು ಕಲೆಹಾಕುತ್ತಿವೆ.
ಇನ್ನು ಟೂರ್ನಿಯಲ್ಲಿ ಇಲ್ಲಿಯವರೆಗೂ ( ಏಪ್ರಿಲ್ 1 ) ನಡೆದಿರುವ ಒಟ್ಟು 7 ಪಂದ್ಯಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 200ಕ್ಕೂ ಹೆಚ್ಚಿನ ಗುರಿಯನ್ನು ನೀಡಿದ್ದು, ಈ ಬೃಹತ್ ಗುರಿಯನ್ನು ಬೆನ್ನತ್ತಿದ ತಂಡಗಳು ಯಶಸ್ವಿಯಾಗಿ ಗುರಿಯನ್ನು ತಲುಪಿ ಜಯಭೇರಿ ಬಾರಿಸಿವೆ. ಹೀಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ ವಾರದ ಪಂದ್ಯಗಳು ದೊಡ್ಡ ಮೊತ್ತಗಳಿಂದ ಕೂಡಿದ್ದು, ವೀಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡಿವೆ.
ಹೀಗೆ ಈ ಬಾರಿ ಬ್ಯಾಟ್ಸ್‌ಮನ್‌ಗಳು ರನ್ ಹೊಳೆ ಹರಿಸಿ ಅಬ್ಬರಿಸುತ್ತಿದ್ದು, ಇಂದು ( ಏಪ್ರಿಲ್ 1 ) ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಪಂಜಾನ್ ಕಿಂಗ್ಸ್ ತಂಡದ ಭಾನುಕಾ ರಾಜಪಕ್ಸೆ 9 ಎಸೆತಗಳಿಗೆ 31 ರನ್ ಚಚ್ಚಿ ಅಬ್ಬರಿಸಿದ್ದಾರೆ. ತಂಡದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಔಟ್ ಆದ ಬಳಿಕ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾನುಕಾ ರಾಜಪಕ್ಸೆ ಬೌಂಡರಿ, ಸಿಕ್ಸರ್ ಸಿಡಿಸಿ ಅಬ್ಬರಿಸಿ ಬೇಗನೇ ಔಟ್ ಕೂಡ ಆದರು. ಹೀಗೆ ಅಬ್ಬರಿಸಿ ಔಟ್ ಆದ ಭಾನುಕಾ ರಾಜಪಕ್ಸೆ ಬರೋಬ್ಬರಿ 344.4 ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಬೀಸಿದ್ದು ವೀಕ್ಷಕರನ್ನು ಬೆರಗಾಗಿಸಿದ್ದಾರೆ. ಇನ್ನು ರಾಜಪಕ್ಸೆ ಈ ಪಂದ್ಯದಲ್ಲಿ ಗಳಿಸಿರುವ ಸ್ಟ್ರೈಕ್ ರೇಟ್ ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ, ಐಪಿಎಲ್ ಅಂಕಿಅಂಶವನ್ನು ಗಮನಿಸಿದರೆ ಇದಕ್ಕೂ ಮುನ್ನ ಹನ್ನೊಂದು ಬಾರಿ ಭಾನುಕಾ ರಾಜಪಕ್ಸೆಯ ಈ ದೊಡ್ಡ ಸ್ಟ್ರೈಕ್ ರೇಟ್‌ನ್ನು ಮೀರಿಸಿದ ಉದಾಹರಣೆಗಳಿವೆ. ಅಂತಹ ಸ್ಟ್ರೈಕ್ ರೇಟ್ ಕುರಿತಾದ ಪಟ್ಟಿ ಈ ಕೆಳಕಂಡಂತಿದೆ.

ಐಪಿಎಲ್‌ನ ಇನ್ನಿಂಗ್ಸ್‌ವೊಂದರಲ್ಲಿ ಅತಿಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಟಾಪ್ 10 ಆಟಗಾರರು
1. 2017ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಕಣಕ್ಕಿಳಿದಿದ್ದ ಕ್ರಿಸ್ ಮೊರಿಸ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 9 ಎಸೆತಗಳಲ್ಲಿ ಅಜೇಯ 38 ರನ್ ಬಾರಿಸಿ ಬರೋಬ್ಬರಿ 422.22 ಸ್ಟ್ರೈಕ್ ರೇಟ್‌ನ್ನು ಹೊಂದಿದ್ದರು. ಇದು ಐಪಿಎಲ್ ಇತಿಹಾಸದ ಅತಿಹೆಚ್ಚು ಸ್ಟ್ರೈಕ್ ರೇಟ್‌ನ್ನು ಎನಿಸಿಕೊಂಡಿದೆ.
2. 2012ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಆಲ್ಬೆ ಮೊರ್ಕೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 7 ಎಸೆತಗಳಲ್ಲಿ 28 ರನ್ ಚಚ್ಚಿ 400.00 ಸ್ಟ್ರೈಕ್ ರೇಟ್‌ನ್ನು ಹೊಂದಿದ್ದರು.
3. 2013ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ಎಬಿ ಡಿವಿಲಿಯರ್ಸ್ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ 8 ಎಸೆತಗಳಲ್ಲಿ 31 ರನ್ ಚಚ್ಚಿ 387.50 ಸ್ಟ್ರೈಕ್ ರೇಟ್‌ನ್ನು ಹೊಂದಿದ್ದರು.
4. 2008ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ಬಾಲಚಂದ್ರ ಅಖಿಲ್ ಡೆಕ್ಕನ್ ಚಾರ್ಜರ್ಸ್ ವಿರುದ್ಧದ ಪಂದ್ಯದಲ್ಲಿ 7 ಎಸೆತಗಳಲ್ಲಿ ಅಜೇಯ 27 ರನ್ ಬಾರಿಸಿ 387.71 ಸ್ಟ್ರೈಕ್ ರೇಟ್‌ನ್ನು ಹೊಂದಿದ್ದರು.
5. 2015ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ಎಬಿ ಡಿವಿಲಿಯರ್ಸ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 11 ಎಸೆತಗಳಲ್ಲಿ 41 ರನ್ ಬಾರಿಸಿ 372.72 ಸ್ಟ್ರೈಕ್ ರೇಟ್‌ನ್ನು ಹೊಂದಿದ್ದರು.
6. 2019ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿದಿದ್ದ ಆಂಡ್ರೆ ರಸೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 13 ಎಸೆತಗಳಲ್ಲಿ ಅಜೇಯ 48 ರನ್ ಬಾರಿಸಿ 369.23 ಸ್ಟ್ರೈಕ್ ರೇಟ್‌ನ್ನು ಹೊಂದಿದ್ದರು.
7. 2019ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 7 ಎಸೆತಗಳಲ್ಲಿ 25 ರನ್ ಬಾರಿಸಿ 357.14 ಸ್ಟ್ರೈಕ್ ರೇಟ್‌ನ್ನು ಹೊಂದಿದ್ದರು.
8. 2015ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ಕ್ರಿಸ್ ಗೇಲ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 10 ಎಸೆತಗಳಲ್ಲಿ 35 ರನ್ ಬಾರಿಸಿ 350.0೦ ಸ್ಟ್ರೈಕ್ ರೇಟ್‌ನ್ನು ಹೊಂದಿದ್ದರು.
9. 2014ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಸರ್ಫರಾಜ್ ಖಾನ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 10 ಎಸೆತಗಳಲ್ಲಿ ಅಜೇಯ 35 ರನ್ ಬಾರಿಸಿ 350.0೦ ಸ್ಟ್ರೈಕ್ ರೇಟ್‌ನ್ನು ಹೊಂದಿದ್ದರು.
10. 2014ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಮಿಸ್ಟರ್ ಐಪಿಎಲ್ ಸುರೇಶ್ ರೈನಾ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 25 ಎಸೆತಗಳಲ್ಲಿ ಅಜೇಯ 87 ರನ್ ಬಾರಿಸಿ 348.00 ಸ್ಟ್ರೈಕ್ ರೇಟ್‌ನ್ನು ಹೊಂದಿದ್ದರು.
ಹೀಗೆ ಈ ಮೇಲಿನ ಆಟಗಾರರು ಈ ಬಾರಿ ಅಬ್ಬರಿಸಿ 344.4 ಸ್ಟ್ರೈಕ್ ರೇಟ್ ಹೊಂದಿರುವ ಭಾನುಕಾ ರಾಜಪಕ್ಸೆಗಿಂತಲೂ ಅಧಿಕ ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಹನ್ನೆರಡನೇ ಸ್ಥಾನ ಪಡೆದ ರಾಜಪಕ್ಸೆ
ಇನ್ನು ಇದೀಗ 9 ಎಸೆತಗಳಿಗೆ 31 ರನ್ ಚಚ್ಚಿ ಅಬ್ಬರಿಸಿರುವ ಭಾನುಕಾ ರಾಜಪಕ್ಸೆ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಹನ್ನೆರಡನೇ ಸ್ಥಾನಕ್ಕೇರಿದ್ದಾರೆ. ಹಾಗೂ 2010 ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದ ಕೀರನ್ ಪೊಲಾರ್ಡ್ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ 13 ಎಸೆತಗಳಲ್ಲಿ ಅಜೇಯ 45 ರನ್ ಬಾರಿಸಿ 346.15 ಸ್ಟ್ರೈಕ್ ರೇಟ್ ಸಂಪಾದಿಸಿದ್ದರು.

ಶಿವಮ್ ಮಾವಿ ಓವರ್‌ನಲ್ಲಿ ಅಬ್ಬರಿಸಿದ ರಾಜಪಕ್ಸೆ
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿದ ಪಂಜಾಬ್ ಕಿಂಗ್ಸ್ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾನುಕಾ ರಾಜಪಕ್ಸೆ 9 ಎಸೆತಗಳಿಗೆ 31 ರನ್ ಚಚ್ಚಿದರು. ಎರಡನೇ ಓವರ್‌ನ ಅಂತಿಮ ಎಸೆತದಲ್ಲಿ ಟಿಮ್ ಸೌಥಿಗೆ ಬೌಂಡರಿ ಬಾರಿಸಿದರು, ಮೂರನೇ ಓವರ್ ಮಾಡಿದ ಉಮೇಶ್ ಯಾದವ್‌ಗೂ ಬೌಂಡರಿ ಬಾರಿಸಿದರು ಹಾಗೂ ಪಂದ್ಯದ ನಾಲ್ಕನೇ ಓವರ್ ಬೌಲಿಂಗ್ ಮಾಡಿದ ಶಿವಮ್ ಮಾವಿಗೆ ಒಂದು ಬೌಂಡರಿ ಮತ್ತು ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಓವರ್‌ನ ಐದನೇ ಎಸೆತದಲ್ಲಿ ಟಿಮ್ ಸೌಥಿಗೆ ಕ್ಯಾಚ್ ನೀಡುವ ಮೂಲಕ ಔಟ್ ಆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications