ರೋಹಿತ್‌ಗೆ ಸಾಮಾಜಿಕ ಜಾಲತಾಣದಲ್ಲಿ 'ವಡಾ ಪಾವ್' ಟ್ರೋಲ್: ವೀರೇಂದ್ರ ಸೆಹ್ವಾಗ್ ಸ್ಪಷ್ಟನೆ

ಸತತ ಸೋಲಿನಿಂದ ಕಂಗೆಟ್ಟಿರುವ ರೋಹಿತ್ ಶರ್ಮಾ ಸಂಕಟ ಕೇಳುವವರಿಲ್ಲ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್ 15ನೇ ಸೀಸನ್‌ನಲ್ಲಿ ಆರಂಭಿಕ ಮೂರು ಪಂದ್ಯಗಳಲ್ಲಿ ಸೋಲನ್ನ ಕಾಣುವ ಮೂಲಕ ಮುಗ್ಗರಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ವಿರುದ್ಧ ಸೋಲನ್ನ ಕಂಡಿದ್ದ ಮುಂಬೈ ಇಂಡಿಯನ್ಸ್ ಕಳೆದ ರಾಜಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ಭಾರೀ ಹಿನ್ನಡೆ ಅನುಭವಿಸಿತು. 162ರನ್‌ಗಳ ಗುರಿಯನ್ನ ಕೆಕೆಆರ್ ಕೇವಲ 16 ಓವರ್‌ಗಳಲ್ಲಿ ಗೆಲುವಿನ ಗೆರೆ ದಾಟುವ ಮೂಲಕ ಭಾರೀ ಟೀಕೆಗೆ ಗುರಿಯಾಗಿದೆ. ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಕೆಕೆಆರ್ ಗೆಲುವಿಗೆ ಕಾರಣವಾಗಿದ್ದ ಪ್ಯಾಟ್ ಕಮಿನ್ಸ್‌ರನ್ನ ಹೊಗಳಿ ಟ್ವೀಟ್ ಮಾಡಿದ್ದರು. ಆದ್ರೆ ಆ ಒಂದು ಟ್ವೀಟ್ ಭಾರೀ ಟ್ರೋಲ್‌ಗೆ ಕಾರಣವಾಗಿತ್ತು.

ವಿವಾದಕ್ಕೆ ಕಾರಣವಾಗಿದ್ದ ವೀರೇಂದ್ರ ಸೆಹ್ವಾಗ್ ಟ್ವೀಟ್
ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಟ್ವೀಟ್‌ನಿಂದ ಸದ್ದು ಮಾಡುವ ವೀರೇಂದ್ರ ಸೆಹ್ವಾಗ್ ಕೆಕೆಆರ್ ವರ್ಸಸ್ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಬಹಳ ವಿಭಿನ್ನವಾಗಿ ಟ್ವೀಟ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಪ್ಯಾಟ್ ಕಮಿನ್ಸ್ 15 ಎಸೆತಗಳಲ್ಲಿ 56 ರನ್ ಸಿಡಿಸುವ ಮೂಲಕ ಅಬ್ಬರಿಸಿದ್ದರು. ಅದ್ರಲ್ಲೂ 16ನೇ ಓವರ್‌ನಲ್ಲಿ 35 ರನ್ ಸಿಡಿಸುವ ಮೂಲಕ ತಂಡಕ್ಕೆ ಇನ್ನೂ ನಾಲ್ಕು ಓವರ್ ಬಾಕಿ ಇರುವಂತೆಯೇ ಗೆಲುವು ತಂದುಕೊಟ್ಟರು.
ಡೆಲ್ಲಿ ಕ್ಯಾಪಿಟಲ್ಸ್ ಯಶಸ್ಸಿಗೆ ಆತ ಮತ್ತೆ 'ಲಾರ್ಡ್' ಎನಿಸಿಕೊಳ್ಳಬೇಕು: ಆಕಾಶ್ ಚೋಪ್ರ

ವಡಾ ಪಾವ್ ವಿಚಾರಕ್ಕೆ ಟ್ರೋಲ್ ಆಗಿದ್ದ ರೋಹಿತ್ ಶರ್ಮಾ
ವೀರೇಂದ್ರ ಸೆಹ್ವಾಗ್ ತನ್ನ ವಿಭಿನ್ನ ಟ್ವೀಟ್ ಮೂಲಕ ''ಮೂನ್ ಸೆ ನಿವಾಲಾ ಚೀನ್ ಲಿಯಾ, ಸಾರಿ ವಡಾ ಪಾವ್ ಚೀನ್ ಲಿಯಾ'' ಎಂದು ಟ್ವೀಟ್ ಮಾಡಿದ್ದರು. ಆದ್ರೆ ಈ ಟ್ವೀಟ್‌ನಿಂದ ಸಹಿಸದ ಟ್ವಿಟ್ಟಿಗರು ಸೆಹ್ವಾಗ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಲೆಳೆದರು. ಮತ್ತೆ ಕೆಲವರು ರೋಹಿತ್ ಶರ್ಮಾಗೆ ವಡಾ ಪಾವ್ ಎಂದು ಕರೆದಿದ್ದಾರೆ ಎಂದು, ರೋಹಿತ್‌ಗೆ ವಡಾ ಪಾವ್‌ನಿಂದ ದೂರವಿಡಿ ಎಂದು ರೋಹಿತ್‌ನನ್ನು ಟ್ರೋಲ್ ಮಾಡಿದ್ದಾರೆ.
ಪ್ಯಾಟ್ ಕಮಿನ್ಸ್ ಇಷ್ಟರ ಮಟ್ಟಿಗೆ ಬ್ಯಾಟಿಂಗ್ ಮಾಡ್ತಾರೆ ಅಂದುಕೊಂಡಿರ್ಲಿಲ್ಲ: ರೋಹಿತ್ ಶರ್ಮಾ
ತನ್ನ ಟ್ವೀಟ್‌ಗೆ ಸ್ಪಷ್ಟನೆ ನೀಡಿದ ವೀರೇಂದ್ರ ಸೆಹ್ವಾಗ್
ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮೂಲಕ ವೀರೇಂದ್ರ ಸೆಹ್ವಾಗ್ ಸ್ಪಷ್ಟನೆ ನೀಡಿದ್ದಾರೆ. ವಡಾ ಪಾವ್ ಎಂದು ಮುಂಬೈ ಇಂಡಿಯನ್ಸ್ ತಂಡವನ್ನು ಉಲ್ಲೇಖಿಸಿದ್ದೇನೆ ಹೊರತು ರೋಹಿತ್ ಶರ್ಮಾನನ್ನ ಅವರನ್ನಲ್ಲ. ಸ್ವಲ್ಪ ತಣ್ಣಗಾಗಿ ಚಿಂತಿಸಬೇಡಿ ಎಂದು ರೋಹಿತ್ ಶರ್ಮಾ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇದರ ಜೊತೆಗೆ ನಾನೂ ಕೂಡ ರೋಹಿತ್ ಬ್ಯಾಟಿಂಗ್‌ಗೆ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications