For Quick Alerts
ALLOW NOTIFICATIONS  
For Daily Alerts
 

IPL 2022: ವಿಶಿಷ್ಟ ದಾಖಲೆ ಬೆನ್ನು ಹತ್ತಿದ ಕಿಂಗ್ ಕೊಹ್ಲಿ

IPL 2022: Virat Kohli needs one four to complete 550 fours and achieve rare feat

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರಲ್ಲಿ ರಾಯಲ್ಸ್ ಕದನಕ್ಕೆ ವೇದಿಕೆ ಸಜ್ಜಾಗಿದೆ. ಬೆಂಗ‌ಳೂರು, ರಾಜಸ್ಥಾನ ರಾಯಲ್ಸ್ ತ‌ಂಡದ ಸಮರವನ್ನು ಏಪ್ರಿಲ್ 5ರಂದು ವಾಂಖೆಡೆ ಕ್ರೀಡಾಂಗಣ ಇಂದು ರಾತ್ರಿ 7:30 ಗಂಟೆ ನಂತರ ಕಾಣಬಹುದು. ಸತತ ಜಯದಿಂದ ರಾಜಸ್ಥಾನ್ ರಾಯಲ್ಸ್ ಗೆಲುವಿನ್ ಓಟ ಮುಂದುವರೆಸಲು ಮುಂದಾಗಿದ್ದರೆ, ಒಂದು ಸೋತು, ಒಂದು ಗೆದ್ದಿರುವ ಬೆಂಗಳೂರು ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಎಲ್ಲಾ ರೀತಿ ಯೋಜನೆ ಹಾಕಿಕೊಂಡಿದೆ. ಪ್ರತಿ ಪಂದ್ಯದಂತೆ ಈ ಪಂದ್ಯದಲ್ಲೂ ಮಾಜಿ ನಾಯಕ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ.

ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಒಂದು ಬೌಂಡರಿ ಬಾರಿಸಿದರೆ ಸಾಕು, ಐಪಿಎಲ್‌ನಲ್ಲಿ ವಿಶಿಷ್ಟ ದಾಖಲೆ ಬರೆಯಲಿದ್ದಾರೆ. ಒಂದು ಬೌಂಡರಿ ಗಳಿಸಿದರೆ ಒಟ್ಟಾರೆ 550 ಫೋರ್‌ಗಳನ್ನು ಪೂರ್ಣಗೊಳಿಸಲಿದ್ದಾರೆ. ಜೊತೆಗೆ ಐಪಿಎಲ್‌ನಲ್ಲಿ 550 ಫೋರ್‌ಗಳು, 200 ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿರುವ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಳ್ಳಲಿದ್ದಾರೆ.

ಐಪಿಎಲ್ 2022 ವಿಶೇಷ ಪುಟ

ವಿರಾಟ್ ಕೊಹ್ಲಿ ಈವರೆಗೂ 549 ಬೌಂಡರಿ ಹಾಗೂ 212 ಸಿಕ್ಸ್ ಬಾರಿಸಿದ್ದಾರೆ. 2008ರಿಂದ ಐಷಾರಾಮಿ ಲೀಗ್ ಐಪಿಎಲ್ ನಲ್ಲಿ ಆಡುತ್ತಿರುವ ಕೊಹ್ಲಿ 209 ಪಂದ್ಯಗಳಲ್ಲಿ 6336 ರನ್ (32 ಬಾರಿ ನಾಟೌಟ್), 37.49 ರನ್ ಸರಾಸರಿ, 130. 08 ಸ್ಟ್ರೈಕ್ ರೇಟ್ ನಂತೆ ಗಳಿಸಿದ್ದಾರೆ. 42 ಅರ್ಧಶತಕ, 5 ಶತಕ ಬಾರಿಸಿದ್ದಾರೆ. 113 ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

2016ರ ಐಪಿಎಲ್ ನಲ್ಲಿ 16 ಪಂದ್ಯಗಳಿಂದ ಕೊಹ್ಲಿ ದಾಖಲೆಯ 973 ಕಲೆ ಹಾಕಿದ್ದು ಇನ್ನೂ ದಾಖಲೆಯಾಗಿ ಉಳಿದಿದೆ. ಆ ಸೀಸನ್ ನಲ್ಲೇ 83 ಬೌಂಡರಿ, 38 ಸಿಕ್ಸರ್ ಸಿಡಿಸಿದ್ದರು.

ಕೊಹ್ಲಿ ಈ ಬಾರಿ ಇನ್ನು 3 ಸಿಕ್ಸರ್ ಸಿಡಿಸಿದರೆ, ಕಿರಾನ್ ಪೊಲ್ಲಾರ್ಡ್ ಅವರ 214 ಸಿಕ್ಸರ್ ದಾಖಲೆ ಹಿಂದಿಕ್ಕಿ ಸಾರ್ವಕಾಲಿಕ ಅತಿ ಹೆಚ್ಚು ಸಿಕ್ಸ್ ಗಳಿಕೆ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಲಿದ್ದಾರೆ.

ಐಪಿಎಲ್ ನಲ್ಲಿ ಕೊಹ್ಲಿ 42 ಅರ್ಧಶತಕ ಗಳಿಸಿದ್ದು, ಅತಿ ಹೆಚ್ಚು ಅರ್ಧಶತಕ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಡೇವಿಡ್ ವಾರ್ನರ್ (49) ಹಾಗೂ ಶಿಖರ್ ಧವನ್ (44) ಕೊಹ್ಲಿ ಗಿಂತ ಮುಂದಿದ್ದಾರೆ.

ವೆಬ್ ಸ್ಟೋರಿಸ್: ಮೊದಲ ಶತಕ ಗಳಿಸಿದ ಬ್ಯಾಟ್ಸ್‌ಮನ್ಸ್‌ ಪಟ್ಟಿ ಕೆಳಗಿದೆ ವೀಕ್ಷಿಸಿ:



ರಾಯಲ್ ಚಾಲೆಂಜರ್ಸ್ ಬೆಂಗಳೂರು:

ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶೆರ್ಫಾನ್ ರುದರ್ ಫೋರ್ಡ್, ಶಬಾಜ್ ಅಹ್ಮದ್, ಡೇವಿಡ್ ವಿಲ್ಲಿ, ವನಿಂದು ಹಸರಂಗಾ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮಹ್ಮದ್ ಸಿರಾಜ್, ಸಿದ್ದಾರ್ಥ ಕೌಲ್, ಕರ್ಣ್ ಶರ್ಮ , ರಜತ್ ಪಾಟಿದಾರ್, ಮಹಿಪಾಲ್ ಲೋಮ್ರೋರ್, ಫಿನ್ ಅಲೆನ್, ಸುಯಾಶ್ ಪ್ರಭುದೇಸಾಯಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನೀಶ್ವರ್ ಗೌತಮ್

ರಾಜಸ್ಥಾನ ರಾಯಲ್ಸ್:

ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಂಜು ಶಾನ್ಸನ್ (ನಾಯಕ/ ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ನವದೀಪ್ ಸೈನಿ, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ, ಕರುಣ್ ನಾಯರ್, ಜೇಮ್ಸ್ ದೇಸ್ಸೆ, ಜೇಮ್ಸ್, ರಾಸ್ಸೆ ನೀಷಮ್,ಕೆಸಿ ಕಾರಿಯಪ್ಪ, ಡಾರಿಲ್ ಮಿಚೆಲ್, ಒಬೆಡ್ ಮೆಕ್‌ಕಾಯ್, ತೇಜಸ್ ಬರೋಕಾ, ಕುಲದೀಪ್ ಯಾದವ್, ಅನುನಯ್ ಸಿಂಗ್, ಕುಲದೀಪ್ ಸೇನ್, ನಾಥನ್ ಕೌಲ್ಟರ್-ನೈಲ್, ಧೋರ್ ಜುರೆಲ್, ಶುಭಮ್ ಗರ್ವಾಲ್

Story first published: Tuesday, April 5, 2022, 17:05 [IST]
Other articles published on Apr 5, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+