Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022: RCB ಕ್ಯಾಂಪ್‌ನಲ್ಲಿ ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ಮದುವೆ ಸೆಲೆಬ್ರೇಷನ್

Glenn maxwell

ಆರ್‌ಸಿಬಿ ಪ್ಲೇಯರ್ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಭಾರತದ ವಿನಿ ರಾಮನ್ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಎಂಟ್ರಿ ಕೊಟ್ಟರು. ಗ್ಲೆನ್‌ ಮ್ಯಾಕ್ಸ್‌ವೆಲ್‌ ಚೆನ್ನೈ ಮೂಲದ ಹುಡುಗಿ ವಿನಿ ರಾಮನ್‌ ಜೊತೆ ಮದುವೆಯಾದರು. ಚೆನ್ನೈನಲ್ಲಿ ಅದ್ಧೂರಿ ಮದುವೆ ಬಳಿಕ ಆರ್‌ಸಿಬಿ ಕ್ಯಾಂಪ್‌ನಲ್ಲೂ ಮ್ಯಾಕ್ಸಿ ಹಾಗೂ ವಿನಿ ಮದುವೆ ಸೆಲೆಬ್ರೇಟ್ ಮಾಡಲಾಗಿದೆ.

2 ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮ್ಯಾಕ್ಸ್‌ವೆಲ್ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಮದುವೆಯಾಗಿದ್ದರು. ಆನಂತರ ಅದೇ ತಿಂಗಳು ವಿನಿ ರಾಮನ್ ಕುಟುಂಬ ಸದಸ್ಯರು ಚೆನ್ನೈನಲ್ಲಿ ಭಾರತೀಯ ಸಂಪ್ರದಾಯದ ಪ್ರಕಾರ ಮದುವೆ ಆಯೋಜಿಸಿದ್ದರು.

ಮದುವೆ ಕಾರಣದಿಂದಾಗಿ ಐಪಿಎಲ್‌ 2022ರ ಸೀಸನ್‌ಗೆ ತಡವಾಗಿ ಸೇರ್ಪಡೆಗೊಂಡ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಔತಣಕೂಟವನ್ನ ಏರ್ಪಡಿಸಿದ್ದ ಆರ್‌ಸಿಬಿ ಫ್ರಾಂಚೈಸಿ ಕಳೆದ ರಾತ್ರಿ ಕಾರ್ಯಕ್ರಮವನ್ನ ಆಯೋಜಿಸಿತ್ತು. ಈ ಕುರಿತು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಫೋಟೋಗಳನ್ನ ಶೇರ್ ಮಾಡಿರುವ ಆರ್‌ಸಿಬಿ ಫೋಟೋಗಳ ಜೊತೆಗೆ ನವ ಜೋಡಿಗೆ ಶುಭ ಕೋರಿದೆ.

ಕಾರ್ಯಕ್ರಮದಲ್ಲಿ ಆರ್‌ಸಿಬಿ ಎಲ್ಲಾ ಆಟಗಾರರು ಭಾಗವಹಿಸಿದ್ದು, ವಿವಿಧ ಬಣ್ಣದ ಕುರ್ತಾದಲ್ಲಿ ಮಿಂಚುತ್ತಿದ್ದರು. ವಿರಾಟ್ ಕೊಹ್ಲಿ ಕಪ್ಪು ಬಣ್ಣದ ಕುರ್ತಾದಲ್ಲಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ಫಾಫ್ ಡುಪ್ಲೆಸಿಸ್ ಪಿಂಕ್ ಬಣ್ಣದ ಕುರ್ತಾದ ಜೊತೆಗೆ ಹೆಂಡತಿ ಮತ್ತು ಮಗುವಿನೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಮುಂಬೈ ಹೋಟೆಲ್‌ವೊಂದರಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕೊಹ್ಲಿ ಸೇರಿದಂತೆ ಬಹುತೇಕ ಪ್ಲೇಯರ್ಸ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಏಪ್ರಿಲ್ 30ರಂದು ಶನಿವಾರ ತನ್ನ ಮುಂದಿನ ಪಂದ್ಯದಲ್ಲಿ ಟೇಬಲ್ ಟಾಪರ್ ಬಲಿಷ್ಠ ಗುಜರಾತ್ ಟೈಟನ್ಸ್ ತಂಡವನ್ನ ಎದುರಿಸಲಿದೆ.

Story first published: Thursday, April 28, 2022, 17:05 [IST]
Other articles published on Apr 28, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+