IPL 2023, GT vs KKR: ಗುಜರಾತ್ ಟೈಟನ್ಸ್‌ಗೆ ಕೆಕೆಆರ್ ಸವಾಲು, ಟಾಸ್ ರಿಪೋರ್ಟ್ Live ಸ್ಕೋರ್, ಪ್ಲೇಯಿಂಗ್ XI
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿದ್ದು ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗುಜರಾತ್ ಟೈಟನ್ಸ್ ವಿರುದ್ಧ ಸೆಣೆಸಾಡುತ್ತಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದ್ದು ಆತಿಥೆಯ ಗುಜರಾತ್ ಟೈಟನ್ಸ್ ತಂಡ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಇನ್ನು ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಆಡುವ ಬಳಗದಿಂದ ಹೊರಗುಳಿದಿದ್ದು ಅವರ ಬದಲಿಗೆ ವಿಜಯ್ ಶಂಕರ್ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ನಾಯಕನಾಗಿ ರಶೀದ್ ಖಾನ್ ತಂಡವನ್ನು ಮುನ್ನಡೆಸುತ್ತಿದ್ದು ಹಾರ್ದಿಕ್ ಪಾಂಡ್ಯ ಆರೋಗ್ಯದಲ್ಲಿ ಏರುಪೇರಾಗಿರುವ ಕಾರಣ ವಿಶ್ರಾಂತಿ ತೆಗೆದುಕೊಂಡಿದ್ದಾರೆ ಎಂದು ಹಂಗಾಮಿ ನಾಯಕ ರಶೀದ್ ಖಾನ್ ಮಾಹಿತಿ ನೀಡಿದ್ದಾರೆ.

Live ಸ್ಕೋರ್ ಹೀಗಿದೆ
ಗುಜರಾತ್ ಟೈಟನ್ಸ್ ತಂಡ ಆಡಿರುವ ಎರಡ ಪಂದ್ಯಗಳಲ್ಲಿಯೂ ಗೆದ್ದು ಆತ್ಮವಿಶ್ವಾಸದಲ್ಲಿದ್ದು ಮತ್ತೊಂದು ಗೆಲುವಿನ ತವಕದಲ್ಲಿದೆ. ಹಾಲಿ ಚಾಂಪಿಯನ್ ಪಡೆಗೆ ಈ ಪಂದ್ಯದಲ್ಲಿ ತವರಿನ ಲಾಭ ದೊರೆಯಲಿದ್ದು ತವರಿನ ಪ್ರೇಕ್ಷಕರನ ಸಮ್ಮುಖದಲ್ಲಿ ಕಣಕ್ಕಿಳಿಯಲಿದೆ. ಅಲ್ಲದೆ ತಂಡದ ಬಹುತೇಕ ಆಟಗಾರರು ಉತ್ತಮ ಲಯದಲ್ಲಿದ್ದು ಕಳೆದ ವರ್ಷದ ಪ್ರದರ್ಶನವನ್ನು ತಮಡ ಈ ಆವೃತ್ತಿಯಲ್ಲಿಯೂ ಮುಂದುವರಿಸಿಕೊಂಡು ಹೋಗುವ ವಿಶ್ವಾಸ ಮೂಡಿಸಿದೆ.
ಇತ್ತ ಕೊಲ್ಕತ್ತಾ ನೈಟ್ ರೈಡರ್ಸ್ ತಮಡ ಮೊದಲ ಪಂದ್ಯವನ್ನು ಹೀನಾಯವಾಗಿ ಸೋತರೂ ಎರಡನೇ ಪಂದ್ಯವನ್ನು ಆರ್‌ಸಿಬಿ ವಿರುದ್ಧ ಭರ್ಜರಿಯಾಗಿ ಗೆದ್ದುಕೊಂಡಿದೆ. ತಂಡದ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಪ್ರದರ್ಶನ ಮಾತ್ರ ಚಿಂತೆ ಹೆಚ್ಚಿಸಿದ್ದು ಈ ವಿಭಾಗ ಲಯ ಕಂಡುಕೊಂಡರೆ ಮತ್ತಷ್ಟು ಆತ್ಮವಿಶ್ವಾಸ ಮೂಡಿಸಲಿದೆ. ಹೀಗಾಗಿ ಈ ಪಂದ್ಯದಲ್ಲಿ ಕೆಕೆಆರ್ ಪ್ರದರ್ಶನ ಕುತೂಹಲ ಕೆರಳಿಸಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಆಡುವ ಬಳಗ: ರಹಮಾನುಲ್ಲಾ ಗುರ್ಬಾಜ್(ವಿಕೆಟ್ ಕೀಪರ್), ಎನ್ ಜಗದೀಸನ್, ನಿತೀಶ್ ರಾಣಾ(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಸುಯಶ್ ಶರ್ಮಾ, ಲಾಕಿ ಫರ್ಗುಸನ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ
ಗುಜರಾತ್ ಟೈಟನ್ಸ್ ಆಡುವ ಬಳಗ: ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ರಶೀದ್ ಖಾನ್(ನಾಯಕ), ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications