For Quick Alerts
ALLOW NOTIFICATIONS  
For Daily Alerts
 

MS Dhoni: 2011ರ ಧೋನಿಯೇ ಅಥವಾ 2023ರ ಧೋನಿಯೇ ಎಂದು ನಾನು ಯೋಚಿಸುತ್ತಿದ್ದೇನೆ; ಆಕಾಶ್ ಚೋಪ್ರಾ

ಸೋಮವಾರ, ಏಪ್ರಿಲ್ 3ರಂದು ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪಂದ್ಯದಲ್ಲಿ ಎಂಎಸ್ ಧೋನಿ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿರುವುದನ್ನು ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಶ್ಲಾಘಿಸಿದ್ದಾರೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 218 ರನ್‌ಗಳ ಗುರಿ ನೀಡಿದಾಗ, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರು ಕೊನೆಯ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದರು. ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್‌ಗಳು ಕೆಎಲ್ ರಾಹುಲ್ ಪಡೆಯನ್ನು 205 ರನ್‌ಗಳಿಗೆ ನಿರ್ಬಂಧಿಸಿ 12 ರನ್‌ಗಳ ಜಯ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

IPL 2023: Aakash Chopra Praised About MS Dhoni Sixes Against Lucknow Super Giants

ಇದೀಗ ಆಕಾಶ್ ಚೋಪ್ರಾ ಅವರು ಎಂಎಸ್ ಧೋನಿ ಗಳಿಸಿದ 12 ರನ್ ಮತ್ತು ಗೆಲುವಿನ ಅಂತರದ 12 ರನ್‌ಗಳ ಬಗ್ಗೆ ಮಾತನಾಡಿ, ಧೋನಿಯ ಬ್ಯಾಟಿಂಗ್ ಪ್ರದರ್ಶನವನ್ನು ಶ್ಲಾಘಿಸಿದರು. ಇದೇ ವೇಳೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 12 ರನ್‌ಗಳ ಅಂತರದಿಂದ ಚೆನ್ನೈ ಸೂಪರ್ ಕಿಂಗ್ಸ್ ಹೇಗೆ ಗೆದ್ದಿತು ಎಂಬುದನ್ನು ಹೋಲಿಕೆ ಮಾಡಿದರು.

"ಸುಮಾರು ನಾಲ್ಕು ವರ್ಷಗಳ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡ ತವರಿಗೆ ಹಿಂದಿರುಗಿ ಆಡಿ ಗೆಲುವಿನ ಸಿಹಿ ನೀಡಿತು. ಕ್ಯಾ ಬಾತ್ ಹೈ ಥಲಾ, ಈ ಪ್ರೇಮಕಥೆಯನ್ನು ಸ್ವರ್ಗದಲ್ಲಿ ಬರೆಯಲಾಗಿದೆ. 2011ರ ಎಂಎಸ್ ಧೋನಿ ನೋಡುತ್ತಿದ್ದೇನೆಯೇ ಅಥವಾ 2023ರ ಧೋನಿಯನ್ನು ನೋಡುತ್ತಿದ್ದೇನೆಯೇ ಎಂದು ನನಗೆ ನಾನೇ ಯೋಚಿಸಿದೆ," ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ ಆಕಾಶವಾಣಿಯಲ್ಲಿ ತಿಳಿಸಿದರು.

IPL 2023: Aakash Chopra Praised About MS Dhoni Sixes Against Lucknow Super Giants


ಎಂಎಸ್ ಧೋನಿಯ ಎರಡು ಸಿಕ್ಸರ್ ನಂಬಲಾಗದ ಶಾಟ್‌ಗಳು: ಆಕಾಶ್ ಚೋಪ್ರಾ

ಭಾರತೀಯ ಮಾಜಿ ಕ್ರಿಕೆಟಿಗ 45 ವರ್ಷದ ಆಕಾಶ್ ಚೋಪ್ರಾ ಅವರ ಪ್ರಕಾರ, "ಮಾರ್ಕ್ ವುಡ್ ಇದೀಗ ವಿಶ್ವದ ಅತ್ಯಂತ ವೇಗದ ಬೌಲರ್. ಮಾರ್ಕ್ ವುಡ್ ಬೌಲಿಂಗ್‌ನ ಮೊದಲ ಎಸೆತ ಆಫ್-ಸ್ಟಂಪ್‌ನ ಹೊರಗೆ ಇತ್ತು, ಆದರೆ ಸಿಕ್ಸ್‌ಗಾಗಿ ಥರ್ಡ್ ಮ್ಯಾನ್ ಮೇಲೆ ಅದ್ಭುತವಾಗಿ ಸ್ಲ್ಯಾಷ್ ಮಾಡಿದರು," ಎಂದು ಉಲ್ಲೇಖಿಸಿದರು.

ಎಂಎಸ್ ಧೋನಿ ಬಾರಿಸಿದ ಸಿಕ್ಸರ್‌ಗಳು ಸವಾಲಿನಿಂದ ಕೂಡಿದ್ದವು, ಆ ಎರಡು ಸಿಕ್ಸರ್‌ಗಳನ್ನು ನಂಬಲಾಗದ ಹೊಡೆತಗಳು ಎಂದು ಆಕಾಶ್ ಚೋಪ್ರಾ ಮೆಚ್ಚುಗೆ ವ್ಯಕ್ತಪಡಿಸಿದರು.
IPL 2023: Aakash Chopra Praised About MS Dhoni Sixes Against Lucknow Super Giants

ಐಪಿಎಲ್ ಇತಿಹಾಸದಲ್ಲಿ 5000 ರನ್ ಪೂರೈಸಿದ ಎಂಎಸ್ ಧೋನಿ

ಸೋಮವಾರ, ಏಪ್ರಿಲ್ 3ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮಾರ್ಕ್ ವುಡ್ ಬೌಲಿಂಗ್‌ನಲ್ಲಿ ಸತತ ಎರಡು ಸಿಕ್ಸರ್ ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ 5000 ರನ್ ಗಳಿಸಿದವರ ಗಣ್ಯರ ಪಟ್ಟಿಗೆ ಸೇರಿಕೊಂಡರು ಮತ್ತು ಈ ಸಾಧನೆ ಮಾಡಿದ ಕೇವಲ 7ನೇ ಆಟಗಾರನಾದರು.

ಎಂಎಸ್ ಧೋನಿ ಐಪಿಎಲ್‌ನಲ್ಲಿ 5000 ರನ್ ಗಳಿಸಲು 208 ಇನ್ನಿಂಗ್ಸ್ ಮತ್ತು 3691 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಸಿಎಸ್‌ಕೆ ಮಾಜಿ ಆಟಗಾರ ಸುರೇಶ್ ರೈನಾ ನಂತರ ಎಸೆತಗಳ ಲೆಕ್ಕದಲ್ಲಿ 5004 ರನ್ ಪೂರೈಸಿದ 2ನೇ ವೇಗದ ಭಾರತೀಯನಾದರು.

Story first published: Wednesday, April 5, 2023, 16:30 [IST]
Other articles published on Apr 5, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+