Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಗುಜರಾತ್ ಟೈಟನ್ಸ್ ತಂಡದ ಈ ಪ್ರದರ್ಶನಕ್ಕೆ ಆ ಇಬ್ಬರು ಕಾರಣ: ಆರೋನ್ ಫಿಂಚ್

ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿಯೂ ಅಮೋಘ ಪ್ರದರ್ಶನ ನೀಡಿದ್ದು ಪ್ಲೇಆಫ್ ಹಂತಕ್ಕೇರಿದ ಮೊದಲ ತಂಡ ಎನಿಸಿಕೊಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿದ್ದು ಸತತ ಎರಡನೇ ಬಾರಿ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ. ಈ ಸಂದರ್ಭದಲ್ಲಿ ಜಿಟಿ ತಂಡದ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಆರೋನ್ ಫಿಂಚ್ ಮಾತನಾಡಿದ್ದು ತಂಡದ ಈ ಪ್ರದರ್ಶನದಲ್ಲಿ ಇಬ್ಬರ ಕೊಡುಗೆಯ ಬಗ್ಗೆ ಉಲ್ಲೇಖಿಸಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆರೋನ್ ಫಿಂಚ್ ಗುಜರಾತ್ ಟೈಟಮ್ಸ್ ತಂಡದ ಈ ಯಶಸ್ಸಿಗೆ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಕೋಚ್ ಆಶಿಶ್ ನೆಹ್ರಾ ಕಾರಣ ಎಂದಿದ್ದಾರೆ. ವಿಶ್ವದ ಮೂಲೆ ಮೂಲೆಯಿಂದ ಬಂದಿರುವ ಆಟಗಾರರು ಒಗ್ಗಟ್ಟಾಗಿ ಆಡುವಂತಾ ವಾತಾವರಣವನ್ನು ಇವರು ಸೃಷ್ಟಿ ಮಾಡಿರುವುದು ಈ ಯಶಸ್ಸಿಗೆ ಕಾರಣ ಎಂಬ ಅಭಿಪ್ರಾಯವನ್ನು ಅವರು ಉಲ್ಲೇಖಿಸಿದ್ದಾರೆ. ಇದೇ ಸಂದರ್ಭದಲ್ಲಿ ಗುಜರಾತ್ ಟೈಟನ್ಸ್ ತಂಡದ ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ ಅವರ ಕೊಡುಗೆಯನ್ನು ಕೂಡ ಸ್ಮರಿಸಿದ್ದಾರೆ.

IPL 2023: Aaron Finch praises Gujarat Titans coach Ashish Nehra and captain Hardik Pandya said they deserve credit

"ಯಾವುದೇ ತಂಡವನ್ನು ತಳಮಟ್ಟದಿಂದ ಕಟ್ಟಬೇಕಾದರೆ ನಿಮ್ಮ ತಂಡದಲ್ಲಿ ಅಂಥಾ ವ್ಯಕ್ತಿತ್ವಗಳು ಬೇಕಾಗುತ್ತದೆ. ಅದು ತಂಡದ ಸಂಸ್ಕೃತಿಯನ್ನು ಬೆಳೆಸುತ್ತದೆ" ಎಂದಿದ್ದಾರೆ ಆರೋನ್ ಫಿಂಚ್. ಮುಂದುವರಿದು ಅವರು "ವಿಶ್ವದ ನಾನಾ ಭಾಗಗಳ ಆಟಗಾರರನ್ನು ಒಗ್ಗೂಡಿಸಿ ಮೈದಾನದಲ್ಲಿ ಸರಾಗವಾಗಿ ಆಡುವಂತಾ ವಾತಾವರಣ ಸೃಷ್ಟಿಸುವುದು ಸುಲಭವಲ್ಲ" ಎಂದಿದ್ದಾರೆ ಆರೋನ್ ಫಿಂಚ್.

"ಗುಜರಾತ್ ಟೈಟನ್ಸ್ ತಂಡವನ್ನು ಇಷ್ಟು ಬಲಿಷ್ಠವಾಗಿ ಕಟ್ಟಬೇಕಾದರೆ ಅದರ ಶ್ರೇಯಸ್ಸು ಹಾರ್ದಿಕ್ ಪಾಂಡ್ಯ, ಆಶಿಶ್ ನೆಹ್ರಾ ಹಾಗೂ ವಿಕ್ರಮ್ ಸೋಲಂಕಿ ಅವರಿಗೆ ದೊರೆಯಬೇಕು. ಅವರು ಅತ್ಯುತ್ತಮ ಆಟಗಾರರನ್ನು ಒಂದು ಕಡೆಗೆ ಸೇರಿಸಿದ್ದುಯ ಮಾತ್ರವಲ್ಲ ಅವರಿಂದ ಶ್ರೇಷ್ಠ ಪ್ರದರ್ಶನ ಹೊರತೆಗೆಯುವ ಕೆಲಸವನ್ನೂ ಮಾಡಿದ್ದಾರೆ. ಇದನ್ನು ಯಾರೂ ಕೂಡ ಹೆಚ್ಚಾಗಿ ಗಮನಿಸುವುದಿಲ್ಲ" ಎಂದಿದ್ದಾರೆ ಆರೋನ್ ಫಿಂಚ್.

ಸೋಮವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಅಮೋಘ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಜಿಟಿ ಶುಬ್ಮನ್ ಗಿಲ್ ಅವರ ಭರ್ಜರಿ ಶತಕದ ನೆರವಿನಿಂದ 188 ರನ್‌ಗಳನ್ನು ಗಳಿಸಲು ಶಕ್ತವಾಯಿತು. ಈ ಪಂದ್ಯದಲ್ಲಿ ಶುಬ್ಮನ್ ಗಿಲ್ ಕೇವಲ 56 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದರು. ಹೀಗಾಗಿ ದೊಡ್ಡ ಗುರಿಯನ್ನು ಎಸ್‌ಆರ್‌ಹೆಚ್ ಮುಮದಿಟ್ಟಿತ್ತು.

ಆದರೆ ಈ ಗುರಿಯನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದೆ. ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಎಸ್‌ಆರ್‌ಹೆಚ್ ಕೇವಲ 154 ರನ್‌ಗಳನ್ನು ಮಾತ್ರವೇ ಗಳಿಸಲು ಸಾಧ್ಯವಾಯುತು. ಹೀಗಾಗಿ ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ 34 ರನ್‌ಗಳ ಗೆಲುವು ಸಾಧಿಸಿ ಪ್ಲೇಆಫ್‌ಗೆ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ.

ಇನ್ನು ಜಿಟಿ ತಂಡ ಈ ಬಾರಿ ಪ್ಲೇಆಫ್‌ಗೆ ಮೊದಲ ತಂಡವಾಗಿ ಪ್ರವೇಶ ಪಡೆದುಕೊಂಡಿದೆ. ಆದರೆ ಉಳಿದ ಮೂರು ಸ್ಥಾನಗಳು ಇನ್ನು ಕೂಡ ಖಚಿತಗೊಂಡಿಲ್ಲ. ಲೆಕ್ಕಾಚಾರದ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳಿಗೆ ಹೊರತುಪಡಿಸಿ ಉಳಿದ ಎಲ್ಲಾ ತಂಡಗಳು ಕೂಡ ಪ್ಲೇಆಫ್‌ಗೇರುವ ಅವಕಾಶವನ್ನು ಇನ್ನು ಕೂಡ ಮುಕ್ತವಾಗಿಸಿಕೊಂಡಿದೆ. ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಪ್ಲೇಆಫ್‌ಗೆ ಖಚಿತವಾಗಿ ಪ್ರವೇಶ ಪಡೆಯುವವಷ್ಟು ಸ್ಥಿತಿ ಸುಲಭವಾಗಿಲ್ಲ. ಪ್ಲೇಆಫ್‌ನ ಮೂರು ಸ್ಥಾನಗಳಿಗಾಗಿ ಸಿಎಸ್‌ಕೆ, ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್ ಜೈಂಟ್ಸ್, ಆರ್‌ಸಿಬಿ, ರಾಜಸ್ಥಾನ್ ರಾಯಲ್ಸ್, ಕೆಕೆಆರ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಿ ಸರ್ವ ಪ್ರಯತ್ನ ನಡೆಸುತ್ತಿದೆ.

Story first published: Tuesday, May 16, 2023, 12:31 [IST]
Other articles published on May 16, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+