For Quick Alerts
ALLOW NOTIFICATIONS  
For Daily Alerts
 

IPL 2023: ಮಿನಿ ಹರಾಜಿನಲ್ಲಿ ಅತಿ ಕಿರಿಯ ವಯಸ್ಸಿನ ಆಟಗಾರ; ಈತನಿಗೆ ಇನ್ನೂ 15 ವರ್ಷ!

IPL 2023: Afghanistans Allah Mohammad Ghazanfar Is The Youngest Player In IPL Mini Auction

ಈ ಆಧುನಿಕ ಯುಗದಲ್ಲಿ ಕ್ರಿಕೆಟ್ ಆಟ ಜಗತ್ತಿನ ಮೂಲೆಮೂಲೆಗೂ ತಲುಪಿದೆ. ಎಲ್ಲ ದೇಶಗಳಿಗೂ ಪರಿಚಯವಾಗಿರುವ ಕ್ರಿಕೆಟ್‌ಗೆ ಅನೇಕ ಯುವ ಪ್ರತಿಭೆಗಳು ಬರುತ್ತಲೇ ಇದ್ದಾರೆ. ಅಂತಹ ಹೊಸ ಪ್ರತಿಭೆಗಳನ್ನು ಗುರುತಿಸಲು ಲೀಗ್ ಕ್ರಿಕೆಟ್ ಹೆಚ್ಚು ಸಹಾಯಕವಾಗಿದೆ.

ಅದೇ ರೀತಿ ಭಾರತದಲ್ಲಿ ತನ್ನ ಕ್ರಿಕೆಟ್ ಕೌಶಲ್ಯವನ್ನು ತೋರಿಸಲು ಉದಯೋನ್ಮುಖ ಪ್ರತಿಭೆಗಳಿಗೆ ಇಂಡಿಯನ್ ಪ್ರಿಮೀಯರ್ ಲೀಗ್ (ಐಪಿಎಲ್) ದೊಡ್ಡ ವೇದಿಕೆಯಾಗಿದೆ. ಇದೀಗ 16ನೇ ಋತುವಿನ ಐಪಿಎಲ್ ಟೂರ್ನಿ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಈ ಲೀಗ್‌ನಲ್ಲಿ ಭವಿಷ್ಯದ ಪ್ರತಿಭೆಗಳನ್ನು ಹೊರತೆಗೆಯಲು ಕೆಲವೇ ದಿನಗಳ ದೂರದಲ್ಲಿದೆ.

ಪ್ರತಿ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಎಲ್ಲ ಫ್ರಾಂಚೈಸಿಗಳು ಅಸಲಿ ಪ್ರತಿಭೆಗಳ ಮೇಲೆ ದೊಡ್ಡ ಬಿಡ್ಡಿಂಗ್ ಮಾಡಲಿದ್ದಾರೆ. ಪ್ರತಿಭೆ ಮತ್ತು ಅದೃಷ್ಟ ಚೆನ್ನಾಗಿದ್ದರೆ ಬೆಳಗಾಗುವುದರೊಳಗೆ ಕೋಟ್ಯಧಿಪತಿ ಎನಿಸಿಕೊಳ್ಳಬಹುದು.

2023ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಅಭಿಮಾನಿಗಳಲ್ಲಿ ಇದೀಗ ಆ ಒಂದು ಹೆಸರು ಝೇಂಕರಿಸುತ್ತಿದೆ. 15 ವರ್ಷದ ಅಲ್ಲಾ ಮೊಹಮ್ಮದ್ ಘಜನ್ಫರ್ ಅವರ ಈ ಆವೃತ್ತಿಯ ಐಪಿಎಲ್ ಹರಾಜಿಗೆ ನೋಂದಾಯಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿದ್ದಾರೆ.

IPL 2023: Afghanistans Allah Mohammad Ghazanfar Is The Youngest Player In IPL Mini Auction

ರಶೀದ್ ಖಾನ್, ಮೊಹಮ್ಮದ್ ನಬಿ, ಮುಜೀಬ್ ಉರ್ ರಹಮಾನ್ ಅವರಂತಹ ಮುಂತಾದ ಕ್ರಿಕೆಟಿಗರನ್ನು ಈಗಾಗಲೇ ಜಗತ್ತಿಗೆ ಪರಿಚಯಿಸಿದ ದೇಶವಾದ ಅಫ್ಘಾನಿಸ್ತಾನದಿಂದ ಅಲ್ಲಾ ಮೊಹಮ್ಮದ್ ಘಜನ್ಫರ್ ಬಂದಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮುಂಬರುವ ಮಿನಿ ಐಪಿಎಲ್ ಹರಾಜಿಗಾಗಿ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದು, ಶಾರ್ಟ್‌ಲಿಸ್ಟ್ ಮಾಡಿದ 405 ಆಟಗಾರರಲ್ಲಿ ಅಲ್ಲಾ ಮೊಹಮ್ಮದ್ ಘಜನ್ಫರ್ ಹೆಸರು ಸೇರಿದೆ.

ಅಫ್ಘಾನಿಸ್ತಾನದ ಹದಿಹರೆಯದ ಈ ಆಟಗಾರ 20 ಲಕ್ಷ ರೂ. ಮೂಲ ಬೆಲೆ ಬ್ರಾಕೆಟ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅವರು ಆಫ್ ಸ್ಪಿನ್ನರ್ ಆಗಿದ್ದರೂ, ಅವರ ಬೌಲಿಂಗ್ ಶೈಲಿಯು ಭಾರತದ ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್ ಶೈಲಿಯನ್ನು ಹೋಲುತ್ತದೆ. ಅವರು ತಮ್ಮ ವ್ಯತ್ಯಾಸಗಳೊಂದಿಗೆ ಚುಟುಕು ಕ್ರಿಕೆಟ್ ಸ್ವರೂಪದಲ್ಲಿ ವಿಶಿಷ್ಟ ಆಫ್-ಸ್ಪಿನ್ ಕಲೆಯನ್ನು ಮರುಶೋಧಿಸಿದ್ದಾರೆ.

"ರವಿಚಂದ್ರನ್ ಅಶ್ವಿನ್ ಭಾರತಕ್ಕೆ ಚಾಂಪಿಯನ್ ಸ್ಪಿನ್ನರ್ ಆಗಿದ್ದಾರೆ, ನಾನು ಅವರ ಬದಲಾವಣೆಗಳನ್ನು ಇಷ್ಟಪಡುತ್ತೇನೆ. ನಾನು ಅವರನ್ನು ಯಾವಾಗಲೂ ನನ್ನ ಸ್ಫೂರ್ತಿ ಎಂದು ಪರಿಗಣಿಸಿದ್ದೇನೆ," ಎಂದು ಅಲ್ಲಾ ಮೊಹಮ್ಮದ್ ಘಜನ್ಫರ್ ಮಂಗಳವಾರ ಕಾಬೂಲ್‌ನಿಂದ ಸ್ಪೋರ್ಟ್‌ಸ್ಟಾರ್‌ಗೆ ತಿಳಿಸಿದ್ದಾರೆ.

ಅಲ್ಲಾ ಮೊಹಮ್ಮದ್ ಘಜನ್ಫರ್ 6 ಅಡಿ 2 ಇಂಚು ಎತ್ತರವಾಗಿದ್ದಾರೆ ಮತ್ತು ಆರಂಭದಲ್ಲಿ ಅವರು ವೇಗದ ಬೌಲರ್ ಆಗಿ ಕ್ರಿಕೆಟ್ ಪ್ರಾರಂಭಿಸಿದರು. ನಂತರ ಅಫ್ಘಾನಿಸ್ತಾನದ ಮಾಜಿ ನಾಯಕ ದವ್ಲತ್ ಅಹ್ಮದ್ಝೈ ಅವರನ್ನು ಸ್ಪಿನ್ನರ್ ಆಗಿ ಪರಿವರ್ತಿಸಿದರು.

"ನಾನು ಟೆನಿಸ್ ಬಾಲ್ ಕ್ರಿಕೆಟ್‌ನೊಂದಿಗೆ ಕ್ರಿಕೆಟ್ ಜೀವನ ಪ್ರಾರಂಭಿಸಿದೆ ಮತ್ತು ನನ್ನ ನೆರೆಹೊರೆಯಲ್ಲಿ ಆಡುತ್ತೇನೆ. ಆದರೆ ನನ್ನ ತರಬೇತುದಾರರ ಮಾರ್ಗದರ್ಶನದಲ್ಲಿ ನಾನು ವೇಗದ ಬೌಲಿಂಗ್‌ ಅನ್ನು ಬದಲಾಯಿಸಿ ಸ್ಪಿನ್ ಬೌಲಿಂಗ್ ಮಾಡಲು ಪ್ರಾರಂಭಿಸಿದೆ. ಶೀಘ್ರದಲ್ಲೇ ನಾನು ಸ್ಪಿನ್ ಅಭಿವೃದ್ಧಿಪಡಿಸಿದೆ ಮತ್ತು ನಂತರ ಹಿಂತಿರುಗಿ ನೋಡಲಿಲ್ಲ," ಎಂದು 15 ವರ್ಷದ ಅಲ್ಲಾ ಮೊಹಮ್ಮದ್ ಘಜನ್ಫರ್ ಯುವ ಆಟಗಾರ ತಿಳಿಸಿದರು.

ಅಲ್ಲಾ ಮೊಹಮ್ಮದ್ ಘಜನ್ಫರ್ ವಯಸ್ಸು ಮತ್ತು ಎತ್ತರದ ಪರಿಗಣನೆಯೊಂದಿಗೆ ದೊಡ್ಡ ಬೇಡಿಕೆ ನಿರೀಕ್ಷಿಸಬಹುದು. ಏಕೆಂದರೆ ವಿಶೇಷವಾಗಿ ದೀರ್ಘಾವಧಿಯ ದೃಷ್ಟಿಯಿಂದ ಈ ಮಿನಿ ಹರಾಜಿನಲ್ಲಿ ಅವನಿಗೆ ಅನೇಕ ಫ್ರ್ಯಾಂಚೈಸ್‌ಗಳು ಬಿಡ್ ಹೆಚ್ಚಿಸಬಹುದು.

Story first published: Thursday, December 15, 2022, 19:39 [IST]
Other articles published on Dec 15, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+