IPL 2023: ಈ ಆಟಗಾರನಿಗೆ ನಾಯಕತ್ವ ನೀಡಲು ಮುಂದಾದ ಸನ್‌ರೈಸರ್ಸ್ ಹೈದರಾಬಾದ್

ಐಪಿಎಲ್ 2023 ಆರಂಭಕ್ಕೆ ಕೆಲವೇ ತಿಂಗಳು ಇರುವಾಗ ಎಲ್ಲಾ ಫ್ರಾಂಚೈಸಿಗಳು ತಮ್ಮ ತಯಾರಿ ಆರಂಭಿಸಿವೆ. ಈಗಾಗಲೇ ಹಲವು ಆಟಗಾರರನ್ನು ಬಿಡುಗಡೆ ಮಾಡಿರುವ ತಂಡಗಳು ಡಿಸೆಂಬರ್ 23ರಂದು ನಡೆಯಲಿರುವ ಮಿನಿ ಹರಾಜಿಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿವೆ.
ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಕಳೆದ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಿದ್ದ ನಾಯಕರನ್ನೇ ಬಿಡುಗಡೆ ಮಾಡುವ ಮೂಲಕ ಅಚ್ಚರಿ ಮೂಡಿಸಿವೆ. ಪಂಜಾಬ್ ಕಿಂಗ್ಸ್ ಮಯಾಂಕ್ ಅಗರ್ವಾಲ್‌ರನ್ನು ಬಿಡುಗಡೆ ಮಾಡಿ, ಶಿಖರ್ ಧವನ್‌ರನ್ನು ನಾಯಕರನ್ನಾಗಿ ನೇಮಿಸಿದೆ.
ಇನ್ನು ಸನ್‌ರೈಸರ್ಸ್ ಹೈದರಾಬಾದ್ ಕೂಡ ನಾಯಕರಾಗಿದ್ದ ಕೇನ್ ವಿಲಿಯಮ್ಸನ್‌ರನ್ನು ಬಿಡುಗಡೆ ಮಾಡಿದು, ಹೊಸ ನಾಯಕನ ನೇಮಕಕ್ಕೆ ಮುಂದಾಗಿದೆ. ಪರ್ಸ್‌ನಲ್ಲಿ ಅಧಿಕ ಹಣ ಹೊಂದಿರುವ ಕಾರಣ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ರನ್ನು ಖರೀದಿ ಮಾಡಿ ಅವರಿಗೆ ನಾಯಕತ್ವ ನೀಡಬಹುದು ಎನ್ನುವ ನಿರೀಕ್ಷೆ ಇತ್ತು.
ಆದರೆ, ಹೊಸದಾಗಿ ಬಂದಿರುವ ಮಾಹಿತಿ ಪ್ರಕಾರ ಐಡೆನ್ ಮಾರ್ಕ್ರಾಮ್ ಅವರಿಗೆ ನಾಯಕತ್ವ ನೀಡಲು ಚಿಂತಿಸಿದೆ ಎನ್ನಲಾಗಿದೆ. ಎಲ್ಲಾ ತಂಡಗಳಿಗೂ ಈಗಾಗಲೇ ನಾಯಕರು ಯಾರು ಎನ್ನುವುದು ನಿರ್ಧಾರವಾಗಿದ್ದು, ಸನ್‌ರೈಸರ್ಸ್ ಅತಿ ಶೀಘ್ರದಲ್ಲೇ ನಾಯಕನ ಬಗ್ಗೆ ಅಧಿಕೃತ ಮಾಹಿತಿ ನೀಡುವ ಸಾಧ್ಯತೆ ಇದೆ.

ಮಹತ್ತರ ಬದಲಾವಣೆ ಮಾಡಲು ನಿರ್ಧಾರ
ಸನ್‌ರೈಸರ್ಸ್ ಹೈದರಾಬಾದ್ ಡೇವಿಡ್ ವಾರ್ನರ್ ಅವರನ್ನು ತಂಡದಿಂದ ಕೈಬಿಟ್ಟ ನಂತರ ಕಳಪೆ ಪ್ರದರ್ಶನ ನೀಡುತ್ತಿದೆ. 2022ರಲ್ಲಿ ಮೆಗಾ ಹರಾಜಿಗೆ ಮುನ್ನ ಡೇವಿಡ್ ವಾರ್ನರ್ ಅವರನ್ನೇ ತಂಡದಿಂದ ಬಿಟ್ಟದ್ದ ಹೈದರಾಬಾದ್ ವಿಲಿಯಮ್ಸನ್ ಅವರಿಗೆ ನಾಯಕತ್ವ ನೀಡಿತ್ತು. ಆದರೆ ಅದು ಯಾವ ರೀತಿಯಲ್ಲೂ ತಂಡಕ್ಕೆ ಸಹಕಾರಿ ಆಗಲಿಲ್ಲ. ಆದ್ದರಿಂದಲೇ ತಂಡದಲ್ಲಿ ಭಾರಿ ಬದಲಾವಣೆಗೆ ಮುಂದಾಗಿದೆ.
ಬೆನ್ ಸ್ಟೋಕ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡರು ಅವರನ್ನು ನಾಯಕರನ್ನಾಗಿ ಆಡಿಸುವುದು ಕಷ್ಟ, ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ನಾಯಕನಾಗಿರು ಸ್ಟೋಕ್ಸ್ ಆಶಸ್ ಸರಣಿಗೆ ಹೆಚ್ಚಿನ ಮಹತ್ವ ನೀಡುವುದರಿಂದ, ಅವರು ಸಂಪೂರ್ಣ ಸರಣಿ ಆಡುವುದು ಕೂಡ ಅನುಮಾನವಾಗಿರುತ್ತದೆ.

ಐಡೆನ್ ಮಾರ್ಕ್ರಾಮ್ ನೂತನ ನಾಯಕ?
ಐಡೆನ್ ಮಾರ್ಕ್ರಾಮ್ ತಂಡದಲ್ಲಿರುವ ಅನುಭವಿ ಆಟಗಾರ, ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ನಂಬಿಕಸ್ಥ ಬ್ಯಾಟರ್ ಕೂಡ ಹೌದು. ಎಸ್‌ಎ 20 ಲೀಗ್‌ನಲ್ಲಿ ಸನ್‌ರೈಸರ್ಸ್ ಒಡೆತನದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದಲ್ಲಿ ಕೂಡ ಮಾರ್ಕ್ರಾಮ್ ಆಡಲಿದ್ದು, ನಿಕಟ ಸಂಬಂಧ ಹೊಂದಿದ್ದಾರೆ. ಆದ್ದರಿಂದಲೇ ಇವರಿಗೆ ನಾಯಕನ ಪಟ್ಟ ನೀಡಲು ನಿರ್ಧರಿಸಿದೆ ಎನ್ನಲಾಗಿದೆ.
ನಿಕೋಲಸ್ ಪೂರನ್‌ರನ್ನು ಕೂಡ ಬಿಡುಗಡೆ ಮಾಡಿದ್ದು, ಉತ್ತಮ ಬ್ಯಾಟರ್ ಗಳನ್ನು ಖರೀದಿಸಲು ಸಿದ್ಧತೆ ನಡೆಸಿದೆ. ಭುವನೇಶ್ವರ್ ಕುಮಾರ್ ಕೂಡ ನಾಯಕತ್ವ ಸ್ಥಾನಕ್ಕೆ ಅರ್ಹರಾಗಿದ್ದರು, ಅವರು ಉತ್ತಮ ಪ್ರದರ್ಶನ ನೀಡದ ಕಾರಣ ಅವರನ್ನು ಪರಿಗಣಿಸುವ ಸಾಧ್ಯತೆ ಇಲ್ಲ.

ಈ ತಂಡಗಳಿಗೂ ಬೇಕು ನಾಯಕ
ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಹೊರತು ಪಡಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಭವಿಷ್ಯದ ನಾಯಕನನ್ನು ಹುಡುಕಬೇಕಿದೆ.
2023ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎಂಎಸ್ ಧೋನಿ ಮುನ್ನಡೆಸುತ್ತಾರೆ ಎನ್ನುವುದನ್ನು ಈಗಾಗಲೇ ಫ್ರಾಂಚೈಸಿಯ ಮುಖ್ಯಸ್ಥರು ಖಚಿತಪಡಿಸಿದ್ದಾರೆ. ಈ ಸೀಸನ್ ನಂತರ ಧೋನಿ ನಿವೃತ್ತಿಹೊಂದುವುದು ಖಚಿತವಾಗಿದೆ. ರವೀಂದ್ರ ಜಡೇಜಾ ನಾಯಕತ್ವದಲ್ಲಿ ತಂಡ ಉತ್ತಮ ಪ್ರಧರ್ಶನ ನೀಡಲಿಲ್ಲ. ಆದ್ದರಿಂದಲೇ ಭವಿಷ್ಯದ ದೃಷ್ಟಿಯಿಂದ ಸಿಎಸ್‌ಕೆ ಹೊಸ ನಾಯಕನ ಆಯ್ಕೆ ಮಾಡಿಕೊಳ್ಳಬೇಕಿದೆ.
ವಿರಾಟ್ ಕೊಹ್ಲಿ ಆರ್ ಸಿಬಿ ನಾಯಕರಾಗಿ ಕೆಳಗಿಳಿದ ನಂತರ ಫಾಫ್ ಡುಪ್ಲೆಸಿಸ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಡುಪ್ಲೆಸಿಸ್ ಕೂಡ ಈ ಬಾರಿ ಐಪಿಎಲ್ ನಂತರ ನಿವೃತ್ತಿಯಾಗುವ ಸಾಧ್ಯತೆ ಇದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಹೊಸ ನಾಯಕನನ್ನು ಹುಡುಕಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications