For Quick Alerts
ALLOW NOTIFICATIONS  
For Daily Alerts
 

IPL 2023 Auction : ಡಿಸೆಂಬರ್ 23ರ ಮಿನಿ ಹರಾಜಿಗೂ ಮುನ್ನ ನೀವು ತಿಳಿದಿರಬೇಕಾದ ಅಂಶಗಳು

IPL 2023 Auction: Know Rules, All Teams Purse Remaining, Players List, RTM and Other Details

2023ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ (ಐಪಿಎಲ್) ಹರಾಜು ಶುಕ್ರವಾರ, ಡಿಸೆಂಬರ್ 23ರಂದು ಕೊಚ್ಚಿಯ ಹಯಾತ್ ಹೋಟೆಲ್‌ನಲ್ಲಿ ನಡೆಯಲಿದೆ. ಎಲ್ಲಾ ಹತ್ತು ಫ್ರಾಂಚೈಸಿಗಳು ಐಪಿಎಲ್‌ನ 16ನೇ ಆವೃತ್ತಿಗೆ ಮುಂಚಿತವಾಗಿ ಬಲಿಷ್ಠ ತಂಡವನ್ನು ನಿರ್ಮಿಸಲು ಸಜ್ಜಾಗಿವೆ.

ಪ್ರತಿ ಹತ್ತು ಫ್ರಾಂಚೈಸಿಗಳ ತಂಡದ ಗಾತ್ರವು ಗರಿಷ್ಠ 25 ಆಟಗಾರರನ್ನು ತಲುಪಬಹುದು, ಆದರೆ ಹಲವಾರು ಫ್ರಾಂಚೈಸಿಗಳು ಈಗಾಗಲೇ ತಮ್ಮ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿವೆ.

ಈ ವರ್ಷದ ಹರಾಜು 2022ರ ಮೆಗಾ ಹರಾಜಿಗಿಂತ ಕಡಿಮೆ ಆಟಗಾರರನ್ನು ಒಳಗೊಂಡಿರುತ್ತದೆ. 991 ಆಟಗಾರರಿಂದ 405 ಆಟಗಾರರಿಗೆ ಶಾರ್ಟ್‌ಲಿಸ್ಟ್ ಆಗಿದೆ. ಇದರಲ್ಲಿ 273 ಭಾರತೀಯರು ಮತ್ತು 132 ವಿದೇಶಿ ಆಟಗಾರರು ಮತ್ತು ಸಹವರ್ತಿ ರಾಷ್ಟ್ರಗಳ ನಾಲ್ವರು ಆಟಗಾರರಿದ್ದಾರೆ.

119 ಕ್ಯಾಪ್ಡ್ ಕ್ರಿಕೆಟಿಗರಿದ್ದರೆ, 296 ಅನ್ ಕ್ಯಾಪ್ಡ್ ಆಟಗಾರರು

119 ಕ್ಯಾಪ್ಡ್ ಕ್ರಿಕೆಟಿಗರಿದ್ದರೆ, 296 ಅನ್ ಕ್ಯಾಪ್ಡ್ ಆಟಗಾರರು

ಇದೇ ವೇಳೆ ಹರಾಜಿಗೆ ಹೋಗುವವರಲ್ಲಿ 119 ಕ್ಯಾಪ್ಡ್ ಕ್ರಿಕೆಟಿಗರಿದ್ದರೆ, 296 ಅನ್ ಕ್ಯಾಪ್ಡ್ ಆಟಗಾರರಿದ್ದಾರೆ. ಎಲ್ಲಾ ಹತ್ತು ಫ್ರಾಂಚೈಸಿಗಳು ಒಟ್ಟು 87 ಸ್ಲಾಟ್‌ಗಳನ್ನು ಹೊಂದಿದ್ದು, ಅದರಲ್ಲಿ 30 ಸ್ಥಾನ ವಿದೇಶಿ ಆಟಗಾರರಿಗೆ ಮೀಸಲಾಗಿವೆ.

ಅಫ್ಘಾನಿಸ್ತಾನದ 15 ವರ್ಷ ವಯಸ್ಸಿನ ಬಲಗೈ ಆಫ್‌ಸ್ಪಿನ್ನರ್ ಮೊಹಮ್ಮದ್ ಘಜನ್‌ಫರ್ ಐಪಿಎಲ್ 2023ರ ಮಿನಿ ಹರಾಜು ಶಾರ್ಟ್‌ಲಿಸ್ಟ್‌ನಲ್ಲಿರುವ ಅತ್ಯಂತ ಕಿರಿಯ ಆಟಗಾರನಾಗಿದ್ದಾರೆ. ಇನ್ನು ಈ ಶ್ರೀಮಂತ ಟಿ20 ಲೀಗ್‌ನಲ್ಲಿ 40 ವರ್ಷ ವಯಸ್ಸಿನ ಭಾರತದ ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ ಹರಾಜಿನ ಅತ್ಯಂತ ಹಿರಿಯ ಆಟಗಾರನಾಗಿದ್ದಾರೆ.

ಅಮಿತ್ ಮಿಶ್ರಾ ಹರಾಜಿನ ಅತ್ಯಂತ ಹಿರಿಯ ಆಟಗಾರ

ಅಮಿತ್ ಮಿಶ್ರಾ ಹರಾಜಿನ ಅತ್ಯಂತ ಹಿರಿಯ ಆಟಗಾರ

ಅಮಿತ್ ಮಿಶ್ರಾ ಅವರು ಐಪಿಎಲ್ ಇತಿಹಾಸದಲ್ಲಿ ಮೂರು ವಿಭಿನ್ನ ತಂಡಗಳ ಪರ ಆಡಿ ಮೂರು ಹ್ಯಾಟ್ರಿಕ್‌ಗಳನ್ನು ಹೊಂದಿರುವ ಏಕೈಕ ಬೌಲರ್ ಆಗಿದ್ದಾರೆ. 2008 ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್, 2011ರಲ್ಲಿ ಡೆಕ್ಕನ್ ಚಾರ್ಜರ್ಸ್ ಮತ್ತು 2013ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ.

ಎಲ್ಲಾ 10 ಫ್ರಾಂಚೈಸಿಗಳು ಹರಾಜಿನಲ್ಲಿ ಒಟ್ಟು 174.3 ಕೋಟಿ ರೂಪಾಯಿಗಳನ್ನು ಖರ್ಚು ಮಾಡಬಹುದಾಗಿದೆ. ಸನ್ ರೈಸರ್ಸ್ ಹೈದರಾಬಾದ್ ದೊಡ್ಡ ಪರ್ಸ್ ಹೊಂದಿದ್ದಾರೆ, ಕೋಲ್ಕತ್ತಾ ನೈಟ್ ರೈಡರ್ಸ್ ಕಡಿಮೆ ಮೊತ್ತದ ಪರ್ಸ್ ಹೊಂದಿದೆ.

ಐಪಿಎಲ್ 2023ರ ಪಂದ್ಯಾವಳಿಗಾಗಿ ಮಿನಿ ಹರಾಜಿನ ಮುನ್ನ ತಂಡಗಳಲ್ಲಿ ಉಳಿಸಿಕೊಂಡಿರುವ ಪರ್ಸ್ ಮೊತ್ತ ಇಲ್ಲಿದೆ.

ಎಲ್ಲ ತಂಡಗಳ ಬಳಿ ಇರುವ ಪರ್ಸ್ ಮೊತ್ತ

ಎಲ್ಲ ತಂಡಗಳ ಬಳಿ ಇರುವ ಪರ್ಸ್ ಮೊತ್ತ

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) - 20.45 ಕೋಟಿ ರೂ.

ಡಲ್ಲಿ ಕ್ಯಾಪಿಟಲ್ಸ್ (ಡಿಸಿ) - 19.45 ಕೋಟಿ ರೂ.

ಗುಜರಾತ್ ಟೈಟನ್ಸ್ (ಜಿಟಿ) - 19.25 ಕೋಟಿ ರೂ.

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) - 7.05 ಕೋಟಿ ರೂ.

ಲಕ್ನೋ ಸೂಒರ್ ಜೈಂಟ್ಸ್ (ಎಲ್ಎಸ್‌ಜಿ) - 23.35 ಕೋಟಿ ರೂ.

ಮುಂಬೈ ಇಂಡಿಯನ್ಸ್ (ಎಂಐ) - 20.55 ಕೋಟಿ ರೂ.

ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) - 32.20 ಕೋಟಿ ರೂ.

ರಾಜಸ್ಥಾನ್ ರಾಯಲ್ಸ್ (ಆರ್‌ಆರ್): 13.20 ಕೋಟಿ ರೂ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 8.75 ಕೋಟಿ ರೂ.

ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) - 42.25 ಕೋಟಿ ರೂ.

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್

ಎಂಎಸ್ ಧೋನಿ (ನಾಯಕ/ ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಡೆವೊನ್ ಕಾನ್ವೇ, ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ಅಂಬಾಟಿ ರಾಯುಡು, ಡ್ವೈನ್ ಪ್ರಿಟೋರಿಯಸ್, ಮಹೀಶ್ ತೀಕ್ಷಣ, ಪ್ರಶಾಂತ್ ಸೋಲಂಕಿ, ದೀಪಕ್ ಚಾಹರ್, ಮುಖೇಶ್ ಚೌಧರಿ, ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ, ರಾಜವರ್ಧನ್ ಹಂಗರ್ಗೇಕರ್, ಮಿಚೆಲ್ ಸ್ಯಾಂಟ್ನರ್, ಮಥೀಶ ಪತಿರಾನ, ಸುಭ್ರಾಂಶು ಸೇನಾಪತಿ

ಲಕ್ನೋ ಸೂಪರ್ ಜೈಂಟ್ಸ್
ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಮನನ್ ವೋಹ್ರಾ, ಆಯುಷ್ ಬದೋನಿ, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೊಯಿನಿಸ್, ಕೈಲ್ ಮೇಯರ್ಸ್, ಕರಣ್ ಶರ್ಮಾ, ಕೃಷ್ಣಪ್ಪ ಗೌತಮ್, ಅವೇಶ್ ಖಾನ್, ಮೊಹ್ಸಿನ್ ಖಾನ್, ರವಿ ಬಿಷ್ಣೋಯ್, ಮಾರ್ಕ್ ವುಡ್, ಮಯಾಂಕ್ ಯಾದವ್

ಸನ್ ರೈಸರ್ಸ್ ಹೈದರಾಬಾದ್

ಸನ್ ರೈಸರ್ಸ್ ಹೈದರಾಬಾದ್

ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್, ಕಾರ್ತಿಕ್ ತ್ಯಾಗಿ, ಫಜಲ್ಹಕ್ ಫಾರೂಕಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೊರ್, ಫಿನ್ ಅಲೆನ್, ರಜತ್ ಪಾಟಿದಾರ್, ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ವಿಲ್ಲಿ, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ಸಿದ್ಧಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್, ಕರ್ಣ್ ಶರ್ಮಾ

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್

ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಟ್ರಿಸ್ಟಾನ್ ಸ್ಟಬ್ಸ್, ರಮಣದೀಪ್ ಸಿಂಗ್, ಟಿಮ್ ಡೇವಿಡ್, ಜಸ್ಪ್ರೀತ್ ಬುಮ್ರಾ, ಜೋಫ್ರಾ ಆರ್ಚರ್, ಹೃತಿಕ್ ಶೋಕೀನ್, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆಂಡಾರ್ಫ್, ಅರ್ಜುನ್ ತೆಂಡೂಲ್ಕರ್, ಅರ್ಷದ್ ಖಾನ್, ಆಕಾಶ್ ಮಧ್ವಲ್

ಪಂಜಾಬ್ ಕಿಂಗ್ಸ್
ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಭಾನುಕಾ ರಾಜಪಕ್ಸೆ, ಪ್ರಭಾಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಹರ್‌ಪ್ರೀತ್ ಬ್ರಾಡ್, ರಾಜ್ ಬಾವಾ, ರಿಷಿ ಧವನ್, ಅಥರ್ವ ತಾಜ್ಡೆ, ಕಗಿಸೊ ರಬಾಡ, ಅರ್ಷದೀಪ್ ಸಿಂಗ್, ರಾಹುಲ್ ಚಹರ್‌ದೀಪ್ ಸಿಂಗ್, ನಾಥನ್ ಎಲ್ಲಿಸ್, ಬಲ್ತೇಜ್ ಸಿಂಗ್

ರಾಜಸ್ಥಾನ್ ರಾಯಲ್ಸ್

ರಾಜಸ್ಥಾನ್ ರಾಯಲ್ಸ್

ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಯಶಸ್ವಿ ಜೈಸ್ವಾಲ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ, ಓಬೇದ್ ಮೆಕಾಯ್, ಕುಲದೀಪ್ ಸೇನ್, ಕುಲದೀಪ್ ಯಾದವ್, ನವದೀಪ್ ಸೈನಿ, ಕೆಸಿ ಕಾರಿಯಪ್ಪ

ಗುಜರಾತ್ ಟೈಟನ್ಸ್
ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಪ್ರದೀಪ್ ಸಾಂಗ್ವಾನ್, ದರ್ಶನ್ ನಲ್ಕಂಡೆ, ಜಯಂತ್ ಯಾದವ್, ಸಾಯಿ ಕಿಶೋರ್, ನೂರ್ ಅಹ್ಮದ್

ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್

ರಿಷಭ್ ಪಂತ್(ನಾಯಕ), ಡೇವಿಡ್ ವಾರ್ನರ್, ಪೃಥ್ವಿ ಶಾ, ಯಶ್ ಧುಲ್, ರಿಪಾಲ್ ಪಟೇಲ್, ರೋವ್‌ಮನ್ ಪೊವೆಲ್, ಸರ್ಫರಾಜ್ ಖಾನ್, ಮಿಚೆಲ್ ಮಾರ್ಷ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಅನ್ರಿಚ್ ನಾರ್ಟ್ಜೆ, ಮುಸ್ತಾಫಿಜುರ್ ರೆಹಮಾನ್, ಕುಲದೀಪ್ ಯಾದವ್, ಲುಂಗಿ ಸಗಿಯಾಡಿ, ಖಲೀಲ್ ಅಹಮದ್, ಪ್ರವೀಣ್ ದುಬೆ, ಕಮಲೇಶ್ ನಾಗರಕೋಟಿ, ವಿಕ್ಕಿ ಓಸ್ತ್ವಾಲ್, ಅಮನ್ ಖಾನ್

ಕೋಲ್ಕತ್ತಾ ನೈಟ್ ರೈಡರ್ಸ್
ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನಕುಲ್ ರಾಯ್, ರಿಂಕು ಸಿಂಗ್

Story first published: Thursday, December 22, 2022, 15:57 [IST]
Other articles published on Dec 22, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+