IPL 2023 Mini Auction : ಮಿನಿ ಹರಾಜು ಯಾವ ಟಿವಿ ಚಾನೆಲ್‌ನಲ್ಲಿ ನೇರಪ್ರಸಾರ, ಉಚಿತ ಲೈವ್ ಸ್ಟ್ರೀಮಿಂಗ್, ಸಮಯದ ವಿವರ

2023ರ ಐಪಿಎಲ್ ಋತುವಿಗಾಗಿ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 23ರ ಶುಕ್ರವಾರದಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಮತ್ತು ತಂಡದ ಅಧಿಕಾರಿಗಳು ಮಿನಿ ಹರಾಜಿಗಾಗಿ ಈಗಾಗಲೇ ಕೊಚ್ಚಿಗೆ ಬಂದಿಳಿದಿದ್ದಾರೆ.
405 ಆಟಗಾರರ ಹೆಸರುಗಳು ಐಪಿಎಲ್ 2023ರ ಪಂದ್ಯಾವಳಿಗೂ ಮೊದಲು ಹರಾಜಾಗುವ ಅಂತಿಮ ಪಟ್ಟಿಯಲ್ಲಿವೆ. ಈ ಮೊದಲು ಮಿನಿ ಹರಾಜಿಗೆ 991 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದರು ಎಂಬುದನ್ನು ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿರಬೇಕು. ಆದರೆ ಅವರಲ್ಲಿ ಫ್ರಾಂಚೈಸಿಗಳು 369 ಆಟಗಾರರನ್ನು ಮಾತ್ರ ಶಾರ್ಟ್‌ಲಿಸ್ಟ್ ಮಾಡಿದ್ದಾರೆ. ನಂತರ 10 ತಂಡಗಳಿಂದ 36 ಹೆಸರುಗಳನ್ನು ಸೇರಿಸಲಾಯಿತು, ಆಗ ಹರಾಜಾಗುವ ಪಟ್ಟಿಯ ಸಂಖ್ಯೆ 405ಕ್ಕೆ ಏರಿತು.
ಆದಾಗ್ಯೂ, ಐಪಿಎಲ್ 2023ರ ಹರಾಜಿನಲ್ಲಿ ಗರಿಷ್ಠ 87 ಆಟಗಾರರು ಮಾತ್ರ ಫ್ರಾಂಚೈಸಿಗಳ ಜೊತೆ ಒಪ್ಪಂದವನ್ನು ಗಳಿಸಬಹುದು. ಏಕೆಂದರೆ ಐಪಿಎಲ್ ಸಂಘಟಕರು ತಮ್ಮ ಐಪಿಎಲ್ 2023ರ ತಂಡದಲ್ಲಿ ಒಂದು ತಂಡವು ಹೊಂದಬಹುದಾದ ಗರಿಷ್ಠ ಸಂಖ್ಯೆಯ ಆಟಗಾರರ ಮಿತಿಯನ್ನು ಇಟ್ಟುಕೊಂಡಿದ್ದಾರೆ. ಐಪಿಎಲ್ ನಿಯಮದ ಪ್ರಕಾರ, ಗರಿಷ್ಠ 87 ಆಟಗಾರರನ್ನು ಮಾತ್ರ ಮಾರಾಟ ಮಾಡಲಾಗುತ್ತದೆ.

ಆಲ್‌ರೌಂಡರ್ ಸ್ಯಾಮ್ ಕರ್ರಾನ್, ಬೆನ್ ಸ್ಟೋಕ್ಸ್, ಸಿಕಂದರ್ ರಝಾ, ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ಮೊಹಮ್ಮದ್ ನಬಿ, ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ಕ್ಯಾಮರೂನ್ ಗ್ರೀನ್ ಮತ್ತು ಇನ್ನೂ ಅನೇಕ ಆಟಗಾರರು ಈ ವರ್ಷದ ಮಿನಿ ಹರಾಜಿನ ಭಾಗವಾಗಿದ್ದಾರೆ.
ಐಪಿಎಲ್ 2023 ಹರಾಜು ಪ್ರಕ್ರಿಯೆ ನೇರಪ್ರಸಾರ ಮಾಡುವ ಚಾನೆಲ್ ಪಟ್ಟಿ
ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಶುಕ್ರವಾರ ಮಧ್ಯಾಹ್ನ ಐಪಿಎಲ್ ಹರಾಜನ್ನು ನೇರ ಪ್ರಸಾರ ಮಾಡಲಿದೆ. ಅಭಿಮಾನಿಗಳು ಹರಾಜನ್ನು ವೀಕ್ಷಿಸಬಹುದಾದ ಟಿವಿ ಚಾನೆಲ್‌ಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ (ಇಂಗ್ಲಿಷ್), ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 1 ತಮಿಳು, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ ಮತ್ತು ಸ್ಟಾರ್ ಸ್ಪೋರ್ಟ್ಸ್ ಫರ್ಸ್ಟ್.
ಐಪಿಎಲ್ ಹರಾಜು 2023 ಲೈವ್ ಸ್ಟ್ರೀಮಿಂಗ್ ವೀಕ್ಷಿಸುವುದು ಹೇಗೆ?
ಜಿಯೋ ಸಿನಿಮಾ (Jio Cinema) ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸಂಪೂರ್ಣ ಹರಾಜು ಪ್ರಕ್ರಿಯೆಯನ್ನು ಉಚಿತವಾಗಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಭಾರತದಲ್ಲಿ ವಾಸಿಸುವ Airtel, Jio, BSNL ಮತ್ತು VI ಬಳಕೆದಾರರಿಗೂ ಉಚಿತ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.
ಐಪಿಎಲ್ 2023ರ ಹರಾಜು ಪ್ರಕ್ರಿಯೆಯ ಸಮಯ
ಐಪಿಎಲ್ ಹರಾಜು ಪ್ರಕ್ರಿಯೆ ಡಿಸೆಂಬರ್ 23ರ ಶುಕ್ರವಾರದ ಮಧ್ಯಾಹ್ನ 2:30ಕ್ಕೆ ಪ್ರಾರಂಭವಾಗುತ್ತದೆ. ಟಿವಿ ಪಟ್ಟಿಗಳ ಪ್ರಕಾರ, ಮಿನಿ ಹರಾಜು ಸುಮಾರು ರಾತ್ರಿ 9:00ಕ್ಕೆ ಕೊನೆಗೊಳ್ಳುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications