Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Women's IPL 2023 : ಮಹಿಳಾ ಐಪಿಎಲ್ ನಡೆಯುವುದು ಪಕ್ಕಾ, ಎಷ್ಟು ಟೀಂಗಳು, ಪಂದ್ಯಾವಳಿ ಯಾವಾಗ ತಿಳಿಯಿರಿ

IPL 2023: BCCI Approved To Conduct The Womens Indian Premier League

ಮುಂಬೈನಲ್ಲಿ ಮಂಗಳವಾರ ನಡೆದ 91ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯ ಜನರಲ್ ಬಾಡಿ ಮಹಿಳಾ ಐಪಿಎಲ್ ಪಂದ್ಯಾವಳಿ ನಡೆಸಲು ಅನುಮೋದನೆ ನೀಡಿದೆ.

ಬಿಸಿಸಿಐ ನಿರ್ಧಾರದಿಂದ ಬಹು ನಿರೀಕ್ಷಿತ ಮಹಿಳಾ ಐಪಿಎಲ್ ನಡೆಯುವುದು ಖಚಿತವಾಗಿದೆ. ಮಂಡಳಿಯು ಬಿಡುಗಡೆ ಮಾಡಿದ ಅಧಿಕೃತ ಮಾಧ್ಯಮ ಪ್ರಕಟಣೆಯಲ್ಲಿ, ಪಂದ್ಯಾವಳಿಯು ನಡೆಯುತ್ತದೆ ಎಂದು ದೃಢಪಡಿಸಲಾಗಿದೆ. "ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸಲು ಜನರಲ್ ಬಾಡಿ ಅನುಮೋದಿಸಿದೆ" ಎಂದು ಪ್ರಕಟಣೆ ತಿಳಿಸಿದೆ.

ಸಾಮಾನ್ಯ ಸಭೆಯಲ್ಲಿ, 2023-2027ರ ಟೀಂ ಇಂಡಿಯಾದ ಭವಿಷ್ಯದ ಪ್ರವಾಸದ ಕಾರ್ಯಕ್ರಮಗಳು ಮತ್ತು 2022-2025ರ ಮಹಿಳಾ ಕ್ರಿಕೆಟ್‌ ತಂಡದ ಭವಿಷ್ಯದ ಪ್ರವಾಸ ಕಾರ್ಯಕ್ರಮಗಳನ್ನು ಅನುಮೋದಿಸಿದೆ.

ಭಾರತದ ಮಾಜಿ ಆಲ್‌ರೌಂಡರ್ ರೋಜರ್ ಬಿನ್ನಿ ಅವರನ್ನು ಮಂಡಳಿಯ 36 ನೇ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ . ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಜಯ್ ಶಾ ಕಾರ್ಯದರ್ಶಿಯಾಗಿ ಮುಂದುವರೆಯಲಿದ್ದಾರೆ. ಅರುಣ್ ಧುಮಾಲ್ ನೂತನ ಐಪಿಎಲ್ ಅಧ್ಯಕ್ಷರಾಗಲಿದ್ದಾರೆ. ರಾಜೀವ್ ಶುಕ್ಲಾ ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ, ಆಶಿಶ್ ಶೆಲಾರ್ ಅವರನ್ನು ಮಂಡಳಿಯ ಖಜಾಂಚಿಯಾಗಿ ನೇಮಿಸಲಾಗಿದೆ. ದೇವಜಿತ್ ಸೈಕಿಯಾ ಈಗ ಬಿಸಿಸಿಐನ ನೂತನ ಜಂಟಿ ಕಾರ್ಯದರ್ಶಿಯಾಗಿದ್ದಾರೆ.

IPL 2023: BCCI Approved To Conduct The Womens Indian Premier League

ಮಹಿಳಾ ಐಪಿಎಲ್‌ನಲ್ಲಿ ಐದು ತಂಡಗಳು

ಬಹುನಿರೀಕ್ಷಿತ ಮಹಿಳಾ ಐಪಿಎಲ್‌ನಲ್ಲಿ ಐದು ತಂಡಗಳು ಭಾಗವಹಿಸಲಿವೆ. ಪುರುಷರ ಐಪಿಎಲ್ ಪ್ರಾರಂಭವಾಗುವ ಮೊದಲು ಮಾರ್ಚ್ 2023 ರಲ್ಲಿ ಮಹಿಳಾ ಐಪಿಎಲ್ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಟೂರ್ನಿಯು 20 ಲೀಗ್ ಪಂದ್ಯಗಳನ್ನು ಒಳಗೊಂಡಿದ್ದು, ತಂಡಗಳು ಪರಸ್ಪರ ಎರಡು ಬಾರಿ ಆಡಲಿವೆ. ಟೇಬಲ್‌ ಟಾಪರ್‌ ಫೈನಲ್‌ಗೆ ನೇರ ಪ್ರವೇಶ ಪಡೆಯಲಿದ್ದು, ಎರಡು ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್‌ನಲ್ಲಿ ಸೆಣಸಲಿವೆ. ಪ್ರತಿ ತಂಡವು ಆಡುವ ಹನ್ನೊಂದರ ಬಳಗದಲ್ಲಿ ಐದಕ್ಕಿಂತ ಹೆಚ್ಚು ವಿದೇಶಿ ಕ್ರಿಕೆಟಿಗರನ್ನು ಹೊಂದಲು ಅವಕಾಶ ಇರುವುದಿಲ್ಲ.

IPL 2023: BCCI Approved To Conduct The Womens Indian Premier League

ದೇಶೀಯ ಮತ್ತು ಅಂತಾರಾಷ್ಟ್ರೀಯ ಆಟಗಾರರು ಭಾಗಿ

"ದೇಶೀಯ ಮತ್ತು ಅಂತಾರಾಷ್ಟ್ರೀಯ ಆಟಗಾರರ ಸಮತೋಲನವನ್ನು ಹೊಂದಲು ಮತ್ತು ಸ್ಪರ್ಧಾತ್ಮಕ ತಂಡಗಳನ್ನು ಹೊಂದಲು, ಮಹಿಳಾ ಐಪಿಎಲ್‌ಗಾಗಿ ಐದು ತಂಡಗಳನ್ನು ಹೊಂದಲು ತಾತ್ಕಾಲಿಕವಾಗಿ ನಿರ್ಧರಿಸಲಾಗಿದೆ. ಪ್ರತಿ ತಂಡವು ಗರಿಷ್ಠ ಹದಿನೆಂಟು ಆಟಗಾರರನ್ನು ಒಳಗೊಂಡಿರುತ್ತದೆ, ಅಲ್ಲಿ ಯಾವುದೇ ತಂಡವು ಆರಕ್ಕಿಂತ ಹೆಚ್ಚು ವಿದೇಶಿ ಆಟಗಾರರನ್ನು ಹೊಂದಿರಬಾರದು," ಎಂದು ಬಿಸಿಸಿಐ ತಿಳಿಸಿದೆ.

ಮಹಿಳೆಯರಿಗಾಗಿ ಐಪಿಎಲ್ ಶೈಲಿಯ ಲೀಗ್‌ ಆಯೋಜನೆ ಮಾಡುವಂತೆ ಸಾಕಷ್ಟು ದಿನಗಳಿಂದ ಒತ್ತಾಯ ಕೇಳಿಬಂದಿತ್ತು. 2016ರಿಂದ ಆಸ್ಟ್ರೇಲಿಯಾದಲ್ಲಿ ಮಹಿಳಾ ಬಿಗ್ ಬ್ಯಾಷ್ ಲೀಗ್ ನಡೆಯುತ್ತಿದೆ. ಪಾಕಿಸ್ತಾನ ಕೂಡ ಮುಂದಿನ ವರ್ಷ ಮಹಿಳಾ ಲೀಗ್ ಆರಂಭಿಸುವುದಾಗಿ ಘೋಷಿಸಿದೆ. ಭಾರತದಲ್ಲಿ ಮಹಿಳಾ ಕ್ರಿಕೆಟ್‌ ಜನಪ್ರಿಯಗೊಳಿಸಲು ಮಹಿಳಾ ಐಪಿಎಲ್ ಸಹಾಯಕವಾಗಲಿದೆ ಎಂದು ಹೇಳಲಾಗಿದೆ.

Story first published: Tuesday, October 18, 2022, 17:04 [IST]
Other articles published on Oct 18, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+