IPL 2023: ಆತ ನಮ್ಮೊಂದಿಗೆ ಉಳಿದಿದ್ದೇ 8ನೇ ಅದ್ಭುತ; ಸಿಎಸ್‌ಕೆ ಟ್ವೀಟ್ ವೈರಲ್

ಮುಂಬರುವ 2023ರ 16ನೇ ಐಪಿಎಲ್ ಆವೃತ್ತಿಗೆ ಎಲ್ಲ ತಂಡಗಳು ಸಿದ್ಧತೆ ಮಾಡುಕೊಳ್ಳುತ್ತಿದ್ದು, ಈ ಹಿನ್ನೆಲೆ ಆಯಾ ಫ್ರಾಂಚೈಸಿಗಳು ತಮ್ಮ ಬಲಿಷ್ಠ ತಂಡಗಳನ್ನು ಕಟ್ಟಿಕೊಳ್ಳಲು ಸಜ್ಜಾಗಿವೆ.
ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮುಂಬರುವ ಐಪಿಎಲ್ ಆವೃತ್ತಿಗಾಗಿ ಉಳಿಸಿಕೊಂಡಿರುವ ಮತ್ತು ಕೈಬಿಟ್ಟಿರುವ ಆಟಗಾರರ ಸಂಪೂರ್ಣ ಪಟ್ಟಿಯನ್ನು ಪ್ರಕಟಿಸಿದೆ. ಅದರಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾ ಹೆಸರನ್ನು ನೋಡಿ ಅವರ ಬಹಳಷ್ಟು ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ.
ಕಳೆದ ವರ್ಷ ನಾಯಕತ್ವದ ವಿಚಾರದಲ್ಲಿ ನಡೆದ ನಾಟಕೀಯ ಬೆಳವಣಿಗೆಯ ನಂತರ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಐಪಿಎಲ್ 2022ರಲ್ಲಿ ಕಳಪೆ ಪ್ರದರ್ಶನ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಐಪಿಎಲ್ 2022ರಲ್ಲಿ ಕಳಪೆ ಪ್ರದರ್ಶನ ನೀಡಿದರು. ಎಂಎಸ್ ಧೋನಿಯಿಂದ ನಾಯಕತ್ವದ ಜವಾಬ್ದಾರಿ ತೆಗೆದುಕೊಂಡ ನಂತರದ ಕ್ಷಣವೇ ಅವರ ಸ್ವಂತ ಮತ್ತು ತಂಡದ ಪ್ರದರ್ಶನವು ಅಧೋಗತಿಗೆ ಇಳಿಯಿತು.
ರವೀಂದ್ರ ಜಡೇಜಾ ಅವರು ಎಂಎಸ್ ಧೋನಿಗೆ ಮತ್ತೆ ನಾಯಕತ್ವದ ಜವಾಬ್ದಾರಿ ನೀಡಲು ನಿರ್ಧರಿಸಿದರು. ಆದರೆ ರವೀಂದ್ರ ಜಡೇಜಾ ಗಾಯದ ಕಾರಣ ಹೇಳಿ ಟೂರ್ನಿಯಿಂದ ಹೊರನಡೆದರು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಕೌಟ್ ಹಂತ ಪ್ರವೇಶಿಸುವಲ್ಲಿ ವಿಫಲವಾಯಿತು.

ಜಡೇಜಾ ಮನಸ್ತಾಪ ಹೊಂದಿದ್ದಾರೆ ಎಂದೆಲ್ಲಾ ಸುದ್ದಿ
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯೊಂದಿಗೆ ರವೀಂದ್ರ ಜಡೇಜಾ ಮನಸ್ತಾಪ ಹೊಂದಿದ್ದಾರೆ ಎಂದೆಲ್ಲಾ ಸುದ್ದಿಗಳಿದ್ದವು ಮತ್ತು ಈ ಬಾರಿ ಜಡೇಜಾ ಸಿಎಸ್‌ಕೆ ತೊರೆಯುವುದು ಪಕ್ಕಾ ಎನ್ನಲಾಗಿತ್ತು. ಆದರೆ ಎಂಎಸ್ ಧೋನಿ ಮಧ್ಯಸ್ಥಿಕೆಯಿಂದ ಮತ್ತೆ ರವೀಂದ್ರ ಜಡೇಜಾ ಸಿಎಸ್‌ಕೆ ತಂಡದಲ್ಲಿ ಉಳಿಯುವಂತಾಗಿದೆ.
ಸಿಎಸ್‌ಕೆ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಕಾಣಿಸಿಕೊಂಡಿದ್ದರಿಂದ ಆ ಎಲ್ಲಾ ಊಹಾಪೋಹಗಳಿಗೆ ಮಂಗಳವಾರ ತೆರೆ ಬಿದ್ದಿದೆ.
ನಮ್ಮೊಂದಿಗೆ ಉಳಿದಿರುವುದದು ಎಂಟನೇ ಅದ್ಭುತ
ರವೀಂದ್ರ ಜಡೇಜಾ ಅವರನ್ನು ತಂಡದಲ್ಲಿ ಉಳಿಸಿಕೊಂಡಿರುವ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾಮಾಜಿಕ ಮಾಧ್ಯಮ ವಿಭಾಗ, "ರವೀಂದ್ರ ಜಡೇಜಾ ನಮ್ಮೊಂದಿಗೆ ಉಳಿದಿರುವುದದು ಜಗತ್ತಿನ ಎಂಟನೇ ಅದ್ಭುತ," ಎಂದು ಟ್ವೀಟ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ.
ಇನ್ನು ನಾಲ್ಕು ಬಾರಿಯ ಚಾಂಪಿಯನ್‌ಗಳಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಆಟಗಾರ ಡ್ವೇನ್ ಬ್ರಾವೋ ಸೇರಿದಂತೆ ಕ್ರಿಸ್ ಜೋರ್ಡಾನ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ತೊರೆದಿರುವ ರಾಬಿನ್ ಉತ್ತಪ್ಪ ಅವರಂತಹ ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಇಲ್ಲಿದೆ
ಮಹೇಂದ್ರ ಸಿಂಗ್ ಧೋನಿ (ನಾಯಕ/ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಡೆವೊನ್ ಕಾನ್ವೇ, ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ಅಂಬಾಟಿ ರಾಯಡು, ಡ್ವೈನ್ ಪ್ರಿಟೋರಿಯಸ್, ಮಹೇಶ್ ತೀಕ್ಷಣ, ಪ್ರಶಾಂತ್ ಸೋಲಂಕಿ, ದೀಪಕ್ ಚಾಹರ್, ಮುಖೇಶ್ ಚೌಧರಿ, ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ, ರಾಜವರ್ಧನ್ ಹಂಗರ್ಗೇಕರ್, ಮಿಚೆಲ್ ಸ್ಯಾಂಟ್ನರ್, ಮಥೀಶ ಪತಿರಾನ, ಸುಭ್ರಾಂಶು ಸೇನಾಪತಿ
ಚೆನ್ನೈ ಸೂಪರ್ ಕಿಂಗ್ಸ್ ಕೈಬಿಟ್ಟ ಆಟಗಾರರ ಪಟ್ಟಿ ಇಲ್ಲಿದೆ
ಡ್ವೇನ್ ಬ್ರಾವೋ, ಆಡಮ್ ಮಿಲ್ನೆ, ಕ್ರಿಸ್ ಜೋರ್ಡಾನ್, ಎನ್ ಜಗದೀಶನ್, ಸಿ ಹರಿ ನಿಶಾಂತ್, ಕೆ ಭಗತ್ ವರ್ಮಾ, ಕೆ ಎಂ ಆಸಿಫ್, ರಾಬಿನ್ ಉತ್ತಪ್ಪ (ನಿವೃತ್ತಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications