IPL 2023: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಸಿಎಸ್‌ಕೆ vs ಮುಂಬೈ ಇಂಡಿಯನ್ಸ್ ಪಂದ್ಯ

ಬಹು ನಿರೀಕ್ಷಿತ 2023ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 16ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು, ಇದಕ್ಕಾಗಿ ಬಿಸಿಸಿಐ ಫೆಬ್ರವರಿ 17ರಂದು ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾರ್ಚ್ 31ರ ಶುಕ್ರವಾರದಂದು ಐಪಿಎಲ್ ಹಬ್ಬಕ್ಕೆ ಅದ್ಧೂರಿ ಚಾಲನೆ ಸಿಗಲಿದೆ.
ಇದೇ ವೇಳೆ ಈ ಬಾರಿಯ ಐಪಿಎಲ್ ಆವೃತ್ತಿಯು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಐಪಿಎಲ್ ಇತಿಹಾಸದ ಎರಡು ಯಶಸ್ವಿ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ಇಂಡಿಯನ್ ಪ್ರೀಮಿಯರ್ ಲೀಗ್‌ನ 1000ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಎರಡು ಸಾಂಪ್ರದಾಯಿಕ ಎದುರಾಳಿಗಳು ಶನಿವಾರ, ಮೇ 6ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಐತಿಹಾಸಿಕ ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ. 2008ರಲ್ಲಿ ಚೊಚ್ಚಲ ಪಂದ್ಯಾವಳಿ ಪ್ರಾರಂಭವಾದಾಗಿನಿಂದ, ಹಲವಾರು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಕೆಲವು ಅತ್ಯುತ್ತಮ ಪಂದ್ಯಗಳು ನಡೆದಿವೆ.
ಇನ್ನು ಐದು ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿರುವ ಮುಂಬೈ ಇಂಡಿಯನ್ಸ್ ಮತ್ತು ನಾಲ್ಕು ಬಾರಿ ಪ್ರಶಸ್ತಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಐಪಿಎಲ್ ಪಂದ್ಯಾವಳಿಯ 1000ನೇ ಪಂದ್ಯವನ್ನಾಡಲು ಉತ್ಸುಕವಾಗಿವೆ.

16ನೇ ಐಪಿಎಲ್ ಋತುವಿನಲ್ಲಿ 10 ತಂಡಗಳು ಒಟ್ಟು 12 ಸ್ಥಳಗಳಲ್ಲಿ ಆಡಲಾಗುತ್ತದೆ. ಇದರಲ್ಲಿ ಹೊಸದಾಗಿ ಗುವಾಹಟಿ ಮತ್ತು ಧರ್ಮಶಾಲಾದಲ್ಲಿ ಕೆಲವು ಪಂದ್ಯಗಳನ್ನು ಆಡಲಾಗುತ್ತದೆ.
ಮಾರ್ಚ್ 31ರಂದು ಹಾಲಿ ಚಾಂಪಿಯನ್ ಮತ್ತು ಮಾಜಿ ಚಾಂಪಿಯನ್ ನಡುವೆ ಉದ್ಘಾಟನಾ ಪಂದ್ಯ
ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ 16ನೇ ಐಪಿಎಲ್ ಋತುವಿನ ಉದ್ಘಾಟನಾ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಸೆಣಸಾಡಲಿವೆ.
ಇಷ್ಟೆ ಅಲ್ಲದೆ, ಮೂರು ವರ್ಷಗಳ ನಂತರ ಸ್ವದೇಶದಲ್ಲಿ ತವರಿನ ಮತ್ತು ಎದುರಾಳಿ ನೆಲದಲ್ಲಿ ಆಡುವ ಸ್ವರೂಪಕ್ಕೆ ಮರಳಿದೆ. ಎಲ್ಲಾ 10 ತಂಡಗಳು ಪ್ಲೇ-ಆಫ್‌ಗಳಿಗೆ ಮೊದಲು ಲೀಗ್ ಹಂತದಲ್ಲಿ 14 ಪಂದ್ಯಗಳನ್ನು ಆಡುತ್ತವೆ. ಇನ್ನು 16ನೇ ಐಪಿಎಲ್ ಋತುವಿನ ಫೈನಲ್ ಪಂದ್ಯ ಮೇ 28ರಂದು ನಡೆಯಲಿದೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಏಪ್ರಿಲ್ 2ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications