IPL 2023 Retention : ಸಿಎಸ್‌ಕೆ ತಂಡದ ಉಳಿಸಿಕೊಂಡ, ಕೈಬಿಟ್ಟ ಆಟಗಾರರ ಸಂಪೂರ್ಣ ಪಟ್ಟಿ

2023ರ 16ನೇ ಐಪಿಎಲ್ ಆವೃತ್ತಿಗೆ ಎಲ್ಲಾ ತಂಡಗಳು ಸಿದ್ಧತೆ ಮಾಡುಕೊಳ್ಳುತ್ತಿದ್ದು, ಈ ಹಿನ್ನೆಲೆ ಫ್ರಾಂಚೈಸಿಗಳು ಇಂದಿನಿಂದಲೇ ತಮ್ಮ ತಂಡಗಳನ್ನು ಕಟ್ಟಿಕೊಳ್ಳುತ್ತಿವೆ.
ಇದೇ ಡಿಸೆಂಬರ್‌ನಲ್ಲಿ ನಡೆಯುವ ಆಟಗಾರರ ಮಿನಿ ಹರಾಜಿಗೆ ಮುಂಚಿತವಾಗಿ ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಂಡ ಮತ್ತು ಕೈಬಿಟ್ಟ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ವೆಸ್ಟ್ ಇಂಡೀಸ್ ಆಲ್‌ರೌಂಡರ್ ಡ್ವೇನ್ ಬ್ರಾವೋ ಅವರನ್ನು ಕೈಬಿಟ್ಟಿದೆ. ಇದ್ರಿಂದಾಗಿ ಫ್ರಾಂಚೈಸಿ ಪರ್ಸ್ ವ್ಯಾಲ್ಯೂ 4.4 ಕೋಟಿ ರೂಪಾಯಿ ಉಳಿದಿದೆ.
ಕಳೆದ ವರ್ಷ ನಾಯಕತ್ವದ ವಿಚಾರದಲ್ಲಿ ನಡೆದ ನಾಟಕೀಯ ಬೆಳವಣಿಗೆಯ ನಂತರವೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ.
2022ರ 15ನೇ ಐಪಿಎಲ್ ಆವೃತ್ತಿ ಪಂದ್ಯಾವಳಿಯ ಮಧ್ಯದಲ್ಲಿ ಸತತ ಸೋಲಿನ ಹೊಣೆ ಹೊತ್ತು ರವೀಂದ್ರ ಜಡೇಜಾ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ತ್ಯಜಿಸಿದರು. ಈ ನಿರ್ಧಾರ ಫ್ರಾಂಚೈಸಿಯಲ್ಲಿ ಅವರ ಭವಿಷ್ಯವು ಡೋಲಾಯಮಾನವಾಗಿತ್ತು.
ಗಾಯದ ನೆಪ ಹೇಳಿ ರವೀಂದ್ರ ಜಡೇಜಾ ಅವರು ಕಳೆದ ವರ್ಷ ಟೂರ್ನಿ ತೊರೆದರೂ, ಎಂಎಸ್ ಧೋನಿ ಮುಂದಿನ ಪಂದ್ಯಗಳಲ್ಲಿ ನಾಯಕನ ಜವಾಬ್ದಾರಿ ಹೊತ್ತುಕೊಂಡಿದ್ದರು. ಈ ಬಾರಿಯೂ ಎಂಎಸ್ ಧೋನಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಸಿಎಸ್‌ಕೆ ತಂಡದಲ್ಲಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ಅವರು ಸೆಪ್ಟೆಂಬರ್ 14, 2022ರಂದು ಭಾರತೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಗೆ ನಿವೃತ್ತಿ ಘೋಷಿಸಿದ ನಂತರ ಚೆನ್ನೈ ಫ್ರಾಂಚೈಸಿ ಅವರ ಹೆಸರನ್ನು ಕೈಬಿಟ್ಟಿದೆ.
ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಇಲ್ಲಿದೆ
ಮಹೇಂದ್ರ ಸಿಂಗ್ ಧೋನಿ (ನಾಯಕ/ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಡೆವೊನ್ ಕಾನ್ವೇ, ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ಅಂಬಾಟಿ ರಾಯಡು, ಡ್ವೈನ್ ಪ್ರಿಟೋರಿಯಸ್, ಮಹೇಶ್ ತೀಕ್ಷಣ, ಪ್ರಶಾಂತ್ ಸೋಲಂಕಿ, ದೀಪಕ್ ಚಾಹರ್, ಮುಖೇಶ್ ಚೌಧರಿ, ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ, ರಾಜವರ್ಧನ್ ಹಂಗರ್ಗೇಕರ್, ಮಿಚೆಲ್ ಸ್ಯಾಂಟ್ನರ್, ಮಥೀಶ ಪತಿರಾನ, ಸುಭ್ರಾಂಶು ಸೇನಾಪತಿ
ಚೆನ್ನೈ ಸೂಪರ್ ಕಿಂಗ್ಸ್ ಕೈಬಿಟ್ಟ ಆಟಗಾರರ ಪಟ್ಟಿ ಇಲ್ಲಿದೆ
ಡ್ವೇನ್ ಬ್ರಾವೋ, ಆಡಮ್ ಮಿಲ್ನೆ, ಕ್ರಿಸ್ ಜೋರ್ಡಾನ್, ಎನ್ ಜಗದೀಶನ್, ಸಿ ಹರಿ ನಿಶಾಂತ್, ಕೆ ಭಗತ್ ವರ್ಮಾ, ಕೆ ಎಂ ಆಸಿಫ್, ರಾಬಿನ್ ಉತ್ತಪ್ಪ (ನಿವೃತ್ತಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications