For Quick Alerts
ALLOW NOTIFICATIONS  
For Daily Alerts
 

CSK vs GT Final: ಫೈನಲ್ ಪಂದ್ಯಕ್ಕೆ ಮಳೆಯ ಆತಂಕ: ಮಳೆಯಿಂದ ಅಡ್ಡಿಯಾದರೆ ಕಥೆಯೇನು? ಯಾರಿಗೆ ಲಾಭ!

ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಡಲಿದೆ. ಇಂದು ಸಂಜೆ 7:30ಕ್ಕೆ ಈ ಫೈನಲ್ ಪಂದ್ಯ ನಡೆಯಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಫೈನಲ್ ಪಂದ್ಯ ನಡೆಯಲಿದ್ದು ಯಾವ ತಂಡ ಗೆದ್ದು ಬೀಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಆದರೆ ಈ ನಿರ್ಣಾಯಕ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡುವ ಸಾಧ್ಯತೆ ಹೆಚ್ಚಿದೆ ಎಂಬುದನ್ನು ಹವಾಮಾನ ವರದಿಗಳು ಹೇಳುತ್ತಿವೆ. ಕಳೆದ ಶುಕ್ರವಾರ ಇಲ್ಲಿಯೇ ನಡೆದ ಎರಡನೇ ಕ್ವಾಲಿಫಯುರ್ ಪಂದ್ಯಕ್ಕೂ ಮಳೆ ಅಡ್ಡಿಯುಂಟು ಮಾಡಿದ ಕಾರಣ ತಡವಾಗಿ ಪಂದ್ಯ ಆರಂಭವಾಗಿತ್ತು. ಆದರೆ ಬಳಿಕ ಪಂದ್ಯಕ್ಕೆ ಅಡ್ಡಿಯುಂಡು ಮಾಡಿರಲಿಲ್ಲ. ಟೂರ್ನಿಯ ಈ ನಿರ್ಣಾಯಕ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡುವ ಸಾಧ್ಯತೆ ಎಷ್ಟಿದೆ ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

IPL 2023, CSK vs GT Final: Weather Report - what is the options if rain interrupts? Know all rules and scenarios

ಮಳೆಯಾಗುವ ಸಾಧ್ಯತೆ ಎಷ್ಟಿದೆ?

'ಅಕ್ಯುವೆದರ್' ಮಾಹಿತಿಯ ಪ್ರಕಾರ ಈ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡುವ ಸಾಧ್ಯತೆ ಅಧಿಕವಾಗಿದೆ. ಮಧ್ಯಾಹ್ನದಿಂದ ಮಳೆ ಆರಂಬವಾಗಲಿದ್ದು ಹೆಚ್ಚಿನ ಕಾಳ ಮಳೆಯಾಗಲಿದೆ. ಪಂದ್ಯದ ಅವಧಿಯಲ್ಲಿ ಮಳೆಯಾಗುವ ಸಾಧ್ಯತೆ ಶೇಕಡಾ 40ರಷ್ಟಿದೆ ಎಂದು ಅಕ್ಯುವೆದರ್ ಮಾಹಿತಿ ನೀಡುತ್ತಿದೆ.

ಪಂದ್ಯದ ಸಮಯದ ಹವಮಾನ ವರದಿ ಹೇಗಿದೆ?

ಪಂದ್ಯದ ಸಂದರ್ಭದಲ್ಲಿ ಅಹ್ಮದಾಬಾದ್‌ನ ವಾತಾವರಣ ಬಹಳ ಆರ್ದ್ರತೆಯಿಂದ ಕೂಡಿರಲಿದೆ. ಶೇಕಡಾ 40-70ರಷ್ಟು ಪ್ರಮಾಣದಲ್ಲಿ ಆರ್ದ್ರತೆ ವಾತಾವರಣದಲ್ಲಿ ಇರಲಿದೆ. ಪಂದ್ಯದ ಆರಂಭದಲ್ಲಿ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದು ಬಳಿಕ 32ರ ಡಿಗ್ರಿಗೆ ಕುಸಿಯುವ ನಿರೀಕ್ಷೆಯಿದೆ.

ಮಳೆ ಪಂದ್ಯಕ್ಕೆ ಅಡ್ಡಿಯಾದರೆ ಕಥೆಯೇನು?

ಫೈನಲ್ ಪಂದ್ಯದಲ್ಲಿ ಮಳೆಯ ಅಡ್ಡಿಯಿಂದಾಗಿ ಸಂಪೂರ್ಣ 40 ಓವರ್‌ಗಳ ಆಟ ಸಾಧ್ಯವಾಗದಿದ್ದರೆ ಡಕ್ವರ್ತ್ ಲೂಯೀಸ್ ನಿಯಮವನ್ನು ಬಳಸಲಾಗುತ್ತದೆ. ಅದು ಸಾಧ್ಯವಾಗದಿದ್ದರೆ ಎರಡು ತಮಡಗಳಿಗೂ ತಲಾ ಐದು ಓವರ್‌ಗಳ ಪಂದ್ಯವನ್ನು ನಡೆಸಲಾಗುತ್ತದೆ. ಐದು ಓವರ್‌ಗಳ ಆಟಕ್ಕೂ ಅವಕಾಶ ದೊರೆಯದಿದ್ರೆ ಸೂಪರ್ ಓವರ್‌ನಲ್ಲಿ ಪಂದ್ಯದ ವಿಜೇತ ತಂಡವನ್ನು ನಿರ್ಧರಿಸಲಾಗುತ್ತದೆ. ಈ ಕೊನೆಯ ಅವಕಾಶವೂ ಸಾಧ್ಯವಿಲ್ಲ ಎಂಬಂಥಾ ಸ್ಥಿತಿಯುಂಟಾದರೆ ಲೀಗ್ ಹಂತದಲ್ಲಿ ಯಾವ ಈ ಎರಡು ಫೈನಲಿಸ್ಟ್‌ಗಳ ಪೈಕಿ ಯಾರು ಅಗ್ರಸ್ಥಾನ ಎಂಬುದನ್ನು ನೋಡಿ ಆ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಆಗ ಗುಜರಾತ್ ಟೈಟನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಲಿದೆ.

ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ(ನಾಯಕ), ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮೊಯಿನ್ ಅಲಿ, ಸುಭ್ರಾಂಶು ಸೇನಾಪತಿ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಮಹೇಶ್ ತೀಕ್ಷಣ, ಪ್ರಶಾಂತ್ ಸೋಲಂಕಿ, ದೀಪಕ್ ಚಾಹರ್, ಮುಖೇಶ್ ಚೌಧರಿ, ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ, ಮಥೀಶ ಪತಿರಾನ, ಬೆನ್ ಸ್ಟೋಕ್ಸ್, ಸಿಸಂದಾ ಮಗಲಾ, ಅಜಿಂಕ್ಯ ರಹಾನೆ, ಶೇಕ್ ರಶೀದ್, ನಿಶಾಂತ್ ಸಿಂಧು, ಅಜಯ್ ಮಂಡಲ್, ಭಗತ್ ವರ್ಮಾ, ಆಕಾಶ್ ಸಿಂಗ್

ಹಾರ್ದಿಕ್ ಪಾಂಡ್ಯ(ನಾಯಕ), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ವಿಜಯ್ ಶಂಕರ್, ರಶೀದ್ ಖಾನ್, ಸಾಯಿ ಕಿಶೋರ್, ನೂರ್ ಅಹ್ಮದ್, ಜಯಂತ್ ಯಾದವ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಯಶ್ ದಯಾಳ್, ದರ್ಶನ್ ನಲ್ಕಂಡೆ, ಪ್ರದೀಪ್ ಸಾಂಗ್ವಾನ್, ಶಿವಂ ಮಾವಿ, ಜೋಶುವಾ ಲಿಟಲ್, ಕೇನ್ ವಿಲಿಯಮ್ಸನ್, ಕೆಎಸ್ ಭರತ್, ಒಡಿಯನ್ ಸ್ಮಿತ್, ಮೋಹಿತ್ ಶರ್ಮಾ, ಉರ್ವಿಲ್ ಪಟೇಲ್.

Story first published: Sunday, May 28, 2023, 14:14 [IST]
Other articles published on May 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+