Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023 Gujarat Titans Jersey: 16ನೇ ಐಪಿಎಲ್ ಆವೃತ್ತಿಗಾಗಿ ಹೊಸ ಜೆರ್ಸಿ ಅನಾವರಣಗೊಳಿಸಿದ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್

IPL 2023: Defending Champions Gujarat Titans Unveil New Jersey For 16th Edition Of IPL

2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಆವೃತ್ತಿಗೆ ಮಾರ್ಚ್ 31ರಂದು ಅದ್ಧೂರಿ ಚಾಲನೆ ಸಿಗಲಿದೆ. ಈ ಬಾರಿಯ ಐಪಿಎಲ್ ಋತು ಹೆಚ್ಚು ವಿಶೇಷತೆಯನ್ನು ಹೊಂದಿದೆ. ಏಕೆಂದರೆ ತನ್ನ ಮೂಲ ತವರಿನ ಮೈದಾನ ಮತ್ತು ಎದುರಾಳಿ ಮೈದಾನದಲ್ಲಿ ಆಡುವ ಸ್ವರೂಪಕ್ಕೆ ಮರಳಿದೆ.

2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಶ್ರೀಮಂತ ಟಿ20 ಲೀಗ್ ಐಪಿಎಲ್ ಪಂದ್ಯಾವಳಿಯನ್ನು ಸೀಮಿತ ಸ್ಥಳಗಳಲ್ಲಿ ಮತ್ತು ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಆಡಿಸಲಾಗಿತ್ತು.

ಇದೀಗ ಗುರುವಾರ, ಮಾರ್ಚ್ 9ರಂದು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮುಂಬರುವ ಐಪಿಎಲ್ ಆವೃತ್ತಿಗೂ ಮುನ್ನ ತಮ್ಮ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಗುಜರಾತ್ ಟೈಟನ್ಸ್ ಫ್ರ್ಯಾಂಚೈಸಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಕುರಿತು ಜೆರ್ಸಿಯ ವಿವಿಧ ಅಂಶಗಳನ್ನು ಹೈಲೈಟ್ ಮಾಡುವ ವೀಡಿಯೊವನ್ನು ಪೋಸ್ಟ್ ಮಾಡಿದೆ.

IPL 2023: Defending Champions Gujarat Titans Unveil New Jersey For 16th Edition Of IPL

2022ರಲ್ಲಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಸವಿನೆನಪಿಗಾಗಿ ಗುಜರಾತ್ ಟೈಟನ್ಸ್ ತಂಡ ಹೊಸ ಜೆರ್ಸಿಯ ಮೇಲೆ ಸ್ಟಾರ್ ಗುರುತು ಹಾಕಲಾಗಿದೆ. ಇದಾಗಿಯೂ, ಗುಜರಾತ್ ಟೈಟನ್ಸ್ ತಮ್ಮ ಸಾಂಪ್ರದಾಯಿಕ ಕಡು ನೀಲಿ ಬಣ್ಣದ ಜೆರ್ಸಿಯನ್ನೇ ಮುಂದುವರೆಸಿದ್ದಾರೆ. ಆದರೆ ಕಾಲರ್‌ನಲ್ಲಿ ಸ್ವಲ್ಪ ವ್ಯತ್ಯಾಸದೊಂದಿಗೆ ಕಳೆದ ವರ್ಷದ ಜರ್ಸಿಯಂತೆಯೇ ಇದೆ.

ಈ ಕುರಿತು ಟ್ವೀಟ್ ಮಾಡಿರುವ ಗುಜರಾತ್ ಟೈಟನ್ಸ್, "ನಮ್ಮ ಜರ್ಸಿಯಲ್ಲಿ ಸ್ಟಾರ್ ಹೊಂದಲು ಹೆಮ್ಮೆ ಎನಿಸುತ್ತಿದೆ. ಅಭಿಮಾನಿಗಳು ಹೆಚ್ಚು ಇಷ್ಟಪಡುವ ಜರ್ಸಿಯು ನಮ್ಮ ಗೆಲುವಿನ ಮನೋಭಾವವನ್ನು ಪ್ರದರ್ಶಿಸುವ ಸ್ಫೂರ್ತಿಯೊಂದಿಗೆ ಹಿಂತಿರುಗಿದೆ. ಜೆರ್ಸಿ ಜೀವಂತವಾಗಿರುವುದನ್ನು ವೀಕ್ಷಿಸಿ!," ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದೆ.

ಐಪಿಎಲ್ 2023ರ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ಎದುರಿಸಲಿದೆ ಗುಜರಾತ್ ಟೈಟನ್ಸ್
ಕಳೆದ ವರ್ಷ ಲಕ್ನೋ ಸೂಪರ್ ಜೈಂಟ್ಸ್ ಜೊತೆಗೆ ಸೇರ್ಪಡೆಯಾದ ತಂಡಗಳಲ್ಲಿ ಗುಜರಾತ್ ಟೈಟನ್ಸ್ ಕೂಡ ಒಂದು. ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡವು ಐಪಿಎಲ್ 2022ರಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡವನ್ನು ಫೈನಲ್‌ನಲ್ಲಿ ಸೋಲಿಸಿತು. ಈ ಮೂಲಕ ತನ್ನ ಮೊದಲ ಋತುವಿನಲ್ಲಿ ಐಪಿಎಲ್ ಟ್ರೋಫಿ ಗೆದ್ದ ಎರಡನೇ ತಂಡವಾಯಿತು.

IPL 2023: Defending Champions Gujarat Titans Unveil New Jersey For 16th Edition Of IPL

2023ರ ಇಂಡಿಯನ್ ಪ್ರೀಮಿಯರ್ ಲೀಗ್‌ ಮಾರ್ಚ್ 31ರಂದು ಪ್ರಾರಂಭವಾಗಲಿದ್ದು, ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ನಾಲ್ಕು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೆಣಸಲಿದೆ. ಇನ್ನು ಫೈನಲ್ ಪಂದ್ಯವು ಮೇ 28ರಂದು ನಡೆಯಲಿದೆ.

Story first published: Thursday, March 9, 2023, 22:52 [IST]
Other articles published on Mar 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+