For Quick Alerts
ALLOW NOTIFICATIONS  
For Daily Alerts
 

"ಭಾರತಕ್ಕೆ ಅದೆಂಥಾ ಅದ್ಭುತ ಫಿನಿಷರ್ ದೊರಕಿಬಿಟ್ಟ": ರಿಂಕು ಸಿಂಗ್ ಪ್ರದರ್ಶನಕ್ಕೆ ಮನಸೋತ ಶ್ರೀಶಾಂತ್

ಶನಿವಾರ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ಬಹಳ ಸಣ್ಣ ಅಂತರದಿಂದ ಸೋಲು ಅನುಭವಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 177 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಕೇವಲ ಒಂದು ರನ್‌ನ ಅಂತರದಿಂದ ಸೋಲು ಕಂಡಿದೆ. ಈ ಸೋಲಿನೊಂದಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬಾರಿಯ ಟೂರ್ನಿಯಲ್ಲಿ ಲೀಗ್ ಹಂತಕ್ಕೆ ತನ್ನ ಹೋರಾಟವನ್ನು ಅಂತ್ಯಗೊಳಿಸಿದೆ.

ಈ ಪಂದ್ಯದಲ್ಲಿ ಒಂದು ಹಂತದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಭರ್ಜರಿಯಾಗಿ ಗೆಲುವು ಸಾಧಿಸುವ ಸೂಚನೆ ನೀಡಿತ್ತು. ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಕೆಳ ಕ್ರಮಾಂಕದ ಆಟಗಾರ ರಿಂಕಿ ಸಿಂಗ್ ಅವರ ಏಕಾಂಗಿ ಹೋರಾಟದಿಂದಾಗಿ ಎಲ್‌ಎಸ್‌ಜಿ ಸೋಲಿನ ಭೀತಿಗೂ ಒಳಗಾಯಿತು. ಪಂದ್ಯವನ್ನು ಬಹುತೇಕ ತಮ್ಮ ಪರವಾಗಿ ವಾಲಿಸಿಕೊಂಡಿದ್ದರು ರಿಂಕು ಸಿಂಗ್. ಆದರೆ ಅಂತಿಮವಾಗಿ ಎಲ್‌ಎಸ್‌ಜಿ ತಂಡ ಕೇವಲ ಒಂದು ರನ್‌ಗಳ ಅಂತರದಿಂದ ಗೆಲುವು ಸಾಧಿಸುವಂತಾಯಿತು.

IPL 2023: Former cricketer S Sreesanth praises Rinku Singh said What a finisher India have got

ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಕೊನೆಯ ಎರಡಯ ಓವರ್‌ಗಳಲ್ಲಿ ಗೆಲ್ಲಲು ಬರೊಬ್ಬರಿ 40 ರನ್‌ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ರಿಂಕು ಸಿಂಗ್ ನೀಡಿದ ಪ್ರದರ್ಶನ ಟೂರ್ನಿಯ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದು. ಬಹುತೇಕ ಗೆಲುವಿನ ಸನಿಹಕ್ಕೆ ಬಂದಿತ್ತು ಕೆಕೆಆರ್. ಆದರೆ ಗೆಲುವಿನ ಗೆರೆ ದಾಟಲು ಬಹಳ ಸಣ್ಣ ಅಂತರದಿಂದ ಹಿನ್ನಡೆ ಅನುಭವಿಸಿತು. ಈ ಪಂದ್ಯದಲ್ಲಿ ರಿಂಕು ಸಿಂಗ್ ನೀಡಿದ ಅಮೋಘ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಮಾತನಾಡಿದ್ದು ಬಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ರಿಂಕು ಸಿಂಗ್ ಆಟವನ್ನು ಶ್ರೀಶಾಂತ್ ಮನಸಾರೆ ಹೊಗಳಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತೀಯ ಕ್ರಿಕೆಟ್‌ಗೆ ರಿಂಕು ಸಿಂಗ್ ಅದ್ಭುಇತವಾದ ಅಸ್ತ್ರವಾಗಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. "ಭಾರತೀಯ ಕ್ರಿಕೆಟ್‌ ತಂಡದ ದೃಷ್ಟಿಯಿಂದ ನೋಡಿದರೆ, ಎಂಥಾ ಕ್ರಿಕೆಟಿಗ ಹಾಗೂ ಎಂಥಾ ಫಿನಿಷರ್ ನಮಗೆ ದೊರಕಿದ್ದಾರೆ. ಕೇವಲ ಸಿಕ್ಸರ್‌ಗಳನ್ನು ಸಿಡಿಸುವ ವಿಚಾರವಾಗಿ ಮಾತ್ರವಲ್ಲ. ಇನ್ನಿಂಗ್ಸನ್ನು ಕಟ್ಟಿ ತಮ್ಮ ಅವಕಾಶಕ್ಕಾಗಿ ಕಾಯುವ ಅದ್ಭುತ ಆಟಗಾರ ಈತ" ಎಂದಿದ್ದಾರೆ ಮಾಜಿ ವೇಗದ ಬೌಲರ್ ಎಸ್ ಶ್ರೀಶಾಂತ್.

ಮೊದಲ ಬಾರಿಗೆ ಸಂಪೂರ್ಣವಾಗಿ ಟೂರ್ನಿಯನ್ನು ಆಡಿರುವ ರಿಂಕು ಸಿಂಗ್ 14 ಪಂದ್ಯಗಳಲ್ಲಿ 474 ರನ್‌ಗಳನ್ನು ಗಳಿಸಿದ್ದಾರೆ. ಅವರ ಸರಾಸರಿ 59.25ರಷ್ಟಿದೆ. 150ರಷ್ಟು ಸ್ಟ್ರೈಕ್‌ರೇಟ್‌ನೊಂದಿಗೆ ರಿಂಕು ಸಿಂಗ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಬ್ಯಾಟ್ ಬೀಸಿದ್ದಾರೆ. ಅಲ್ಲದೆ ಕೆಲ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನದ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

"ಈ ಪಂದ್ಯದಲ್ಲಿ ರಿಂಕು ಸಿಂಗ್ ಕೇವಲ ಒಂದು ರನ್‌ನ ಅಂತರದಿಂದ ಹಿನ್ನಡೆ ಅನುಭವಿಸಿದರು. ಅವರ ಈ ಪ್ರದರ್ಶನ ಕೇವಲ ಒಂದು ಪಂದ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಆತ ಇದನ್ನು ಸ್ಥಿರವಾಗಿ ಮಾಡುತ್ತಿದ್ದಾರೆ" ಎಂದು ರಿಂಕು ಸಿಂಗ್ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಎಸ್ ಶ್ರೀಶಾಂತ್.

Story first published: Sunday, May 21, 2023, 9:05 [IST]
Other articles published on May 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+