IPL 2023 Retention : ಕ್ಯಾಪ್ಟನ್ ಕೇನ್ ವಿಲಿಯಮ್ಸನ್ SRH ತಂಡದಿಂದ ಔಟ್: ತಂಡದಲ್ಲಿ ಉಳಿದ ಆಟಗಾರರ ಪಟ್ಟಿ

ಐಪಿಎಲ್ 16ನೇ ಸೀಸನ್‌ನ ಆಟಗಾರರ ಹರಾಜು ಪ್ರಕ್ರಿಯೆಗೂ ಮುನ್ನ ರೀಟೈನ್ ಹಾಗೂ ರಿಲೀಸ್ ಆದ ಆಟಗಾರರ ಪಟ್ಟಿ ಬಿಡುಗಡೆಗೊಂಡಿದೆ. 10 ಫ್ರಾಂಚೈಸಿಗಳು ತಮಗೆ ಯೋಗ್ಯವೆನಿಸಿದ ಆಟಗಾರರನ್ನು ಉಳಿಸಿಕೊಂಡಿದ್ದು, ಫಾರ್ಮ್‌ನಲ್ಲಿರದ, ಇಂಜ್ಯುರಿ ಆಗಿರುವ ಹಾಗೂ ರಾಷ್ಟ್ರೀಯ ತಂಡಕ್ಕೆ ಆಡುವ ಸಲುವಾಗಿ ಐಪಿಎಲ್ 2023ನೇ ಸೀಸನ್ ಆಡದಿರುವ ಆಟಗಾರರನ್ನು ರಿಲೀಸ್ ಮಾಡಿದೆ.
ಉಳಿದ ಫ್ರಾಂಚೈಸಿಗಳಂತೆ ಸನ್‌ರೈಸರ್ಸ್ ಹೈದ್ರಾಬಾದ್ ಆಟಗಾರರನ್ನ ಬಿಡುಗಡೆ ಮಾಡಿದ್ದು, ಡೇವಿಡ್ ವಾರ್ನರ್ ಬಳಿಕ ಎಸ್‌ಆರ್‌ಎಚ್ ತಂಡವನ್ನ ಮುನ್ನಡೆಸಿದ್ದ ನಾಯಕ ಕೇನ್ ವಿಲಿಯಮ್ಸನ್‌ರನ್ನ ರಿಲೀಸ್ ಮಾಡಿದೆ.

ಅತಿ ಹೆಚ್ಚು ಪರ್ಸ್ ವ್ಯಾಲ್ಯೂ ಉಳಿಸಿಕೊಂಡಿರುವ ಎಸ್‌ಆರ್‌ಎಚ್
ಸನ್‌ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿ 2016ರಲ್ಲಿ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟಕ್ಕೇರಿತು. ಅದಾದ ಬಳಿಕ ಸೆಮಿಫೈನಲ್ ತಲುಪಲು ಸಹ ಹೆಣಗಾಡಿದೆ. ಹೀಗಾಗಿ ತಂಡಕ್ಕೆ ಹೊಸ ರೂಪ ನೀಡಲು ಅನುಭವಿ ಆಟಗಾರರನ್ನೇ ಕೈ ಬಿಟ್ಟಿದೆ.
ಅನೇಕ ವಿದೇಶಿ ಆಟಗಾರರನ್ನ ಕೈ ಬಿಟ್ಟಿರುವ ಎಸ್‌ಆರ್‌ಎಚ್ ಮುಂಬರುವ ಮಿನಿ ಹರಾಜಿಗೆ ಅತಿ ಹೆಚ್ಚು ಪರ್ಸ್ ಮೌಲ್ಯ (42.25 ಕೋಟಿ ರೂಪಾಯಿ) ಉಳಿಸಿಕೊಂಡು ಬಿಡ್ಡಿಂಗ್‌ಗೆ ತೆರಳಲಿದೆ.

ಸನ್‌ರೈಸರ್ಸ್ ಹೈದ್ರಾಬಾದ್ ತಂಡ ರೀಟೈನ್ ಮಾಡಿಕೊಂಡ ಆಟಗಾರರು:
ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಏಡೆನ್ ಮಕ್ರಾಮ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲ್ಲಿಕ್, ಟಿ. ನಟರಾಜನ್, ಕಾರ್ತಿಕ್ ತ್ಯಾಗಿ, ಫಜಲಕ್ ಫಾರೂಕಿ

ಸನ್‌ರೈಸರ್ಸ್ ಹೈದ್ರಾಬಾದ್ ತಂಡದಿಂದ ರಿಲೀಸ್ ಆದ ಆಟಗಾರರು:
ಕೇನ್ ವಿಲಿಯಮ್ಸನ್, ನಿಕೋಲಸ್ ಪೂರನ್, ಜಗದೀಶ ಸುಚಿತ್, ಪ್ರಿಯಾಮ್ ಗರ್ಗ್, ರವಿಕುಮಾರ್ ಸಮರ್ಥ್, ರೊಮಾರಿಯೊ ಶೆಫರ್ಡ್, ಸೌರಭ್ ದುಬೆ, ಸೇನ್ ಅಬೋಟ್, ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಸುಶಾಂತ್ ಮಿಶ್ರಾ, ವಿಷ್ಣು ವಿನೋದ್
ಉಳಿದುಕೊಂಡಿರುವ ಪರ್ಸ್ ವ್ಯಾಲ್ಯೂ: 42.25 ಕೋಟಿ ರೂಪಾಯಿ
ಖರೀದಿಸಬಹುದಾದ ವಿದೇಶಿ ಆಟಗಾರರ ಸಂಖ್ಯೆ: 4
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications