IPL 2023: ಪಂದ್ಯ ಸೋತರು ಸಿಎಸ್‌ಕೆ ವಿರುದ್ಧ ದಾಖಲೆ ಜೊತೆಯಾಟವಾಡಿದ ಗ್ಲೆನ್ ಮ್ಯಾಕ್ಸ್‌ವೆಲ್- ಫಾಫ್ ಡು ಪ್ಲೆಸಿಸ್ ಜೋಡಿ!
ಸೋಮವಾರ, 17ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 24ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ರನ್‌ಗಳ ರೋಚಕ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಎರಡೂ ತಂಡಗಳಿಂದ ಸಿಕ್ಸರ್‌ಗಳ ಸುರಿಮಳೆಯೇ ಸುರಿದವು.
ಎರಡು ಕಡೆಯ ಇನ್ನಿಂಗ್ಸ್ ಸೇರಿ 40 ಓವರ್‌ಗಳಿಂದ 440ಕ್ಕೂ ಹೆಚ್ಚು ರನ್ ಹರಿದು ಬಂದ ಎರಡು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಪ್ರೇಕ್ಷಕರಿದ್ದ ಸ್ಟ್ಯಾಂಡ್‌ಗಳಿಗೆ ಸಿಕ್ಸರ್‌ಗಳು ಸಿಡಿಯುತ್ತಿದ್ದಂತೆ ಕೆಲವು ದಾಖಲೆಗಳು ಅಳಿಸಿಹಾಕಲ್ಪಟ್ಟವು.

ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಮೊದಲ ಇನ್ನಿಂಗ್ಸ್‌ನ 226 ರನ್‌ಗಳಲ್ಲಿ 17 ಸಿಕ್ಸರ್‌ಗಳು ಸೇರಿದ್ದವು. ಆ ಬಳಿಕ ಆರ್‌ಸಿಬಿಯ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಫಾಫ್ ಡು ಪ್ಲೆಸಿಸ್ ದೊಡ್ಡ ಶಾಟ್‌ಗಳ ಮೂಲಕ ಸ್ಫೋಟಕ ಪ್ರದರ್ಶನ ನೀಡಿ ತವರಿನ ಅಭಿಮಾನಿಗಳು ಹುಚ್ಚೆದ್ದ ಕುಣಿದು ಕುಪ್ಪಳಿಸುವಂತೆ ಮಾಡಿದರು.
ಸಿಎಸ್‌ಕೆ ನೀಡಿದ್ದ 226 ರನ್‌ಗಳ ಬೃಹತ್ ಮೊತ್ತ ಬೆನ್ನಟ್ಟಿದ ಆರ್‌ಸಿಬಿ ಮೊದಲ ಎರಡು ಓವರ್‌ಗಳಲ್ಲಿ ವಿರಾಟ್ ಕೊಹ್ಲಿ (6) ಮತ್ತು ಮಹಿಪಾಲ್ ಲೊಮ್ರೊರ್ (0) ಅವರ ವಿಕೆಟ್ ಕಳೆದುಕೊಂಡು 2 ವಿಕೆಟ್‌ಗೆ 15 ರನ್ ಗಳಿಸಿ ಕಳಪೆ ಆರಂಭ ಪಡೆಯಿತು. ಸಿಎಸ್‌ಕೆ ತಂಡದ ಬೌಲರ್‌ಗಳಾದ ಆಕಾಶ್ ಸಿಂಗ್ ಮತ್ತು ತುಷಾರ್ ದೇಶಪಾಂಡೆ ಆರಂಭದಲ್ಲಿ ಆರ್‌ಸಿಬಿ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಪ್ರಯತ್ನಿಸಿದರು.
ನಂತರ ಜೊತೆಯಾದ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಜೋಡಿ ಸಿಎಸ್‌ಕೆ ಬೌಲರ್‌ಗಳನ್ನು ದಂಡಿಸಲು ಪ್ರಯತ್ನಿಸಿದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಕೇವಲ 61 ಎಸೆತಗಳಲ್ಲಿ 126 ರನ್‌ಗಳ ಜೊತೆಯಾಟವನ್ನು ನೀಡಿದರು ಮತ್ತು ಆರ್‌ಸಿಬಿ ತಂಡ ತನ್ನ 3ನೇ ವಿಕೆಟ್ ಕಳೆದುಕೊಂಡಾಗ 12.1 ಓವರ್‌ಗಳಲ್ಲಿ 141 ರನ್ ಕಲೆಹಾಕಿತ್ತು.

ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಜೋಡಿ 13 ಸಿಕ್ಸರ್ ಬಾರಿಸುವ ಮೂಲಕ ಆರ್‌ಸಿಬಿ ಅಭಿಮಾನಿಗಳಲ್ಲಿ ಗೆಲುವಿನ ನಗೆ ಮೂಡಿಸಿದ್ದರು. ಆದರೆ ದೊಡ್ಡ ಶಾಟ್‌ಗಳಿಗೆ ಮುಂದಾದ ಕಾರಣ ಪಂದ್ಯ ವಿಜೇತ ಪಾತ್ರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಗ್ಲೆನ್ ಮ್ಯಾಕ್ಸ್‌ವೆಲ್ ಔಟಾಗುವ ಮುನ್ನ 36 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ ಮ್ಯಾಕ್ಸ್‌ವೆಲ್ 76 ರನ್ ಗಳಿಸಿದರು.
ಗಮನಾರ್ಹವಾಗಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಫಾಫ್ ಡು ಪ್ಲೆಸಿಸ್ ಜೋಡಿ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ 3ನೇ ವಿಕೆಟ್ ಜೊತೆಯಾಟದ ದಾಖಲೆಯನ್ನು ಮುರಿಯಿತು. 2016ರ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಮುರಿಯದ 121 ರನ್‌ಗಳ ದಾಖಲೆಯನ್ನು ಅಳಿಸಿ ಹಾಕಿದರು.

ಐಪಿಎಲ್‌ನಲ್ಲಿ ಅತ್ಯಧಿಕ ಜೊತೆಯಾಟಗಳು (ವಿಕೆಟ್‌ಗಳ ಮೂಲಕ)
* ವಿರಾಟ್ ಕೊಹ್ಲಿ- ದೇವದತ್ ಪಡಿಕ್ಕಲ್ - ಐಪಿಎಲ್ 2021- ರಾಜಸ್ಥಾನ ರಾಯಲ್ಸ್ ವಿರುದ್ಧ 1ನೇ ವಿಕೆಟ್‌ಗೆ 181 ರನ್
* ವಿರಾಟ್ ಕೊಹ್ಲಿ-ಎಬಿ ಡಿವಿಲಿಯರ್ಸ್ - ಐಪಿಎಲ್ 2016 - ಗುಜರಾತ್ ಲಯನ್ಸ್ ವಿರುದ್ಧ 2ನೇ ವಿಕೆಟ್‌ಗೆ 229 ರನ್
* ಫಾಫ್ ಡು ಪ್ಲೆಸಿಸ್- ಗ್ಲೆನ್ ಮ್ಯಾಕ್ಸ್‌ವೆಲ್ - ಐಪಿಎಲ್ 2023- ಸಿಎಸ್‌ಕೆ ವಿರುದ್ಧ 3ನೇ ವಿಕೆಟ್‌ಗೆ 126 ರನ್
2021ರ ಐಪಿಎಲ್‌ನ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಜೋಡಿ ಸಿಎಸ್‌ಕೆ ವಿರುದ್ಧ ಯಾವುದೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟದ ದಾಖಲೆಯನ್ನು ಫಾಫ್ ಡು ಪ್ಲೆಸಿಸ್- ಗ್ಲೆನ್ ಮ್ಯಾಕ್ಸ್‌ವೆಲ್ ಜೋಡಿ ಮುರಿದಿದ್ದು, ಸಿಎಸ್‌ಕೆ ವಿರುದ್ಧ ದಾಖಲಯೆ ಜೊತೆಯಾಟವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications