Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಯಾರಾಗಲಿದ್ದಾರೆ ನೂತನ ಐಪಿಎಲ್ ಚಾಂಪಿಯನ್: ಫೈನಲ್ ಪಂದ್ಯಕ್ಕೆ ಕ್ಷಣಗಣನೆ

ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯ ಫೈನಲ್ ಪಂದ್ಯ ಇಂದು(ಭಾನುವಾರ) ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಈ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು ಚಾಂಪಿಯನ್ ಪಟ್ಟಕ್ಕಾಗಿ ಕಾದಾಟ ನಡೆಸಲಿದೆ. ಗುಜರಾತ್ ಟೈಟನ್ಸ್ ತಂಡಕ್ಕೆ ಎರಡು ಐಪಿಎಲ್‌ನಲ್ಲಿ ಎರಡನೇ ಫೈನಲ್ ಪಂದ್ಯವಾಗಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಡಿರುವ 14 ಐಪಿಎಲ್ ಪಂದ್ಯಗಳಲ್ಲಿ 10ನೇ ಫೈನಲ್ ಪಂದ್ಯ ಇದಾಗಿದೆ ಎಂಬುದು ವಿಶೇಷ.

ಇಂದು ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವು ಸಾಧಿಸಿದರೆ ಅದು ಸಿಎಸ್‌ಕೆ ತಂಡ ದಾಖಲೆಯ ಐದನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದಂತಾಗಲಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ಮಾಡಿರುವ ಸಾಧನೆಯನ್ನು ಸರಿಗಟ್ಟಿದಂತಾಗುತ್ತದೆ. ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‌ನಲ್ಲಿ ಐದು ಬಾರಿ ಚಾಂಪಿಯನ್ ಆಗಿರುವುದು ಐಪಿಎಲ್‌ನ ದಾಖಲೆಯಾಗಿದೆ.

IPL 2023, Gujarat Titans and Chennai Super Kings eye on champion title: count down starts for Final

ಸಿಎಸ್‌ಕೆಗೆ ಫೈನಲ್ ಆಡಿದ ಅಪಾರ ಅನುಭವ

ಈ ಬಾರಿಯ ಫೈನಲ್ ಪಂದ್ಯದಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿರುವ ಪ್ರಶ್ನೆ. ಈ ಪ್ರಶ್ನೆಗೆ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ದೊರೆಯಲಿದೆ. ಆದರೆ ಟೂರ್ನಿಯ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಟ್ಟು 10 ಬಾರಿ ಫೈನಲ್‌ಗೆ ಪ್ರವೇಶ ಪಡೆದ ಅನುಭವ ಹೊಂದಿದೆ. ಈ ಐದು ಪಂದ್ಯಗಳಲ್ಲಿ ಸಿಎಸ್‌ಕೆ ನಾಲ್ಕು ಬಾರಿ ಚಾಂಪಿಯನ್ ಎನಿಸಿಕೊಂಡಿದ್ದರೆ 6 ಬಾರಿ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಮೂಲಕ ಐಪಿಎಲ್ ಫೈನಲ್ ಆಡಿದ ಅಪಾರ ಅನುಭವ ಸಿಎಸ್‌ಕೆ ತಂಡಕ್ಕಿದೆ.

ಧೋನಿ ನಾಯಕತ್ವ

ಚೆನ್ನೈ ಸೂಪೊರ್ ಕಿಂಗ್ಸ್ ತಂಡಕ್ಕೆ ಗೆಲುವು ಸಾಧಿಸಲು ಇರುವ ಮತ್ತೊಂದು ದೊಡ್ಡ ಬಲವೆಂದರೆ ಎದು ಎಂಎಸ್ ಧೋನಿ ನಾಯಕತ್ವ. ಸಾಮಾನ್ಯ ಆಟಗಾರರನ್ನು ಅದ್ಭುತವಾಗಿ ಬಳಸಿಕೊಳ್ಳುವ ಎಂಎಸ್ ಧೋನಿ ಸಾಮರ್ಥ್ಯ ಈ ಬಾರಿಯ ಐಪಿಎಲ್‌ನಲ್ಲಿಯೂ ಸಾಬೀತಾಗಿದೆ. ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಗೆಲುವು ಸಾಧಿಸುವಲ್ಲಿಯೂ ಧೋನಿ ನಾಯಕತ್ವ ಸಹಜವಾಗಿಯೇ ಮಹತ್ವದ ಪಾತ್ರವನ್ನು ವಹಿಸಲಿದೆ ಎಂಬುದು ಗಮನಾರ್ಹ.

ಜಿಟಿ ತಂಡಕ್ಕೂ ಇದೆ ಸಕಾರಾತ್ಮಕ ಅಂಶ

ಇನ್ನು ಗುಜರಾತ್ ಟೈಟನ್ಸ್ ತಂಡ ಕೂಡ ಈ ಬಾರಿಯ ಐಪಿಎಲ್‌ನಲ್ಲಿ ಚಾಂಪಿಯನ್ ಎನಿಸಿಕೊಳ್ಳಳು ಅಗತ್ಯವಿರುವ ಅಂಶಗಳನ್ನು ತನ್ನಲ್ಲಿ ಹೊಂದಿದೆ ಎಂಬುದರಲ್ಲಿ ಅನುಮಾನವಿಲ್ಲ. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿಕೊಂಡೇ ಬಂದಿರುವ ಜಿಟಿ ತಂಡ ಅರ್ಹವಾಗಿಯೇ ಫೈನಲ್‌ಗೆ ಪ್ರವೇಶಿಸಿದೆ. ಇದು ಟೈಟನ್ಸ ತಂಡಕ್ಕೆ ಎರಡನೇ ಐಪಿಎಲ್ ಫೈನಲ್ ಪಂದ್ಯ. ಕಳೆದ ಬಾರಿಯ ಐಪಿಎಲ್‌ನಲ್ಲಿಯೂ ಫೈನಲ್‌ನಲ್ಲಿ ಆಡಿದ್ದ ಟೈಟನ್ಸ್ ಚಾಂಪಿಯನ್ಸ್ ಎನಿಸಿಕೊಂಡಿತ್ತು.
ಕಳೆದ ಬಾರಿಯ ಐಪಿಎಲ್ ಫೈನಲ್ ಪಂದ್ಯ ಕೂಡ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿಯೇ ಆಯೋಜನೆಯಾಗಿತ್ತು. ತವರಿನ ಕ್ರೀಡಾಂಗಣದಲ್ಲಿ ಆಡಿದ ಈ ಅನುಭವ ತಂಡಕ್ಕೆ ಸಾಕಷ್ಟು ಆತ್ಮವಿಶ್ವಾಸ ನೀಡಲಿದೆ. ಅಲ್ಲದೆ ಎರಡನೇ ಕ್ವಾಲಿಫಯರ್ ಪಂದ್ಯ ಕೂಡ ಇಲ್ಲಿಯೇ ನಡೆದಿದ್ದು ಮುಂಬೈ ಇಂಡಿಯನ್ಸ್ ವಿರುದ್ಧ ಜಿಟಿ ಅಬ್ಬರದ ಪ್ರದರ್ಶನದಿಂದಾಗಿ ಮುಂಬೈ ಇಂಡಿಯನ್ಸ್ ಪ್ಲೇನಲ್ಲಿ ತನ್ನ ಹೋರಾಟವನ್ನು ಅಂತ್ಯಗೊಳಿಸಿತು.

ಸಮತೋಲಿತವಾಗಿದೆ ಹಾರ್ದಿಕ್ ಪಡೆ

ಇನ್ನು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡದ ಮತ್ತೊಂದು ಪ್ರಮುಖ ಅಂಶವೆಂದರೆ ತಂಡದ ಸಮತೋಲನ. ಹೆಚ್ಚಿನ ಪ್ರಮಾಣದಲ್ಲಿ ಸ್ಟಾರ್ ಆಟಗಾರರನ್ನು ಹೊಂದಿರದಿದ್ದರೂ ಎಲ್ಲರೂ ತಂಡಕ್ಕೆ ಅದ್ಭುತವಾಗಿ ಕೊಡುಗೆ ನೀಡುತ್ತಿರುವುದು ಪ್ರಮುಖ ಸಂಗತಿ. ಅಗ್ರಕ್ರಮಾಂಕದಿಂದ ಉತ್ತಮ ಪ್ರದರ್ಶನ ಬರುತ್ತಿದ್ದು ಮಧ್ಯಮ ಕ್ರಮಾಂದಲ್ಲಿಯೂ ಮಿಂಚುವ ಆಟಗಾರರಿದ್ದಾರೆ. ಆಲ್‌ರೌಂಡರ್‌ಗಳು ಕೂಡ ಪರಿಣಾಮಕಾರಿಯಾಗಿದ್ದು ತಂಡಕ್ಕೆ ಬಲ ಹೆಚ್ಚಿಸುತ್ತದೆ. ಹೀಗಾಘಿ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವ ಆತ್ಮವಿಶ್ವಾಸ ಗುಜರಾತ್ ಟೈಟನ್ಸ್ ತಂಡಕ್ಕೆ ಇದೆ.

Story first published: Sunday, May 28, 2023, 9:00 [IST]
Other articles published on May 28, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+