For Quick Alerts
ALLOW NOTIFICATIONS  
For Daily Alerts
 

GT vs SRH: ಕ್ಲಾಸಿನ್ ಆಟ ವ್ಯರ್ಥ,8ನೇ ಸೋಲು ಕಂಡ ಸನ್‌ರೈಸರ್ಸ್; ಪ್ಲೇಆಫ್‌ಗೆ ಗುಜರಾತ್

IPL 2023: Gujarat Titans beats Sunrisers Hyderabad and officially entered to playoffs

ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 62ನೇ ಪಂದ್ಯ ಇಂದು ( ಮೇ 15 ) ನಡೆದಿದ್ದು, ಈ ಪಂದ್ಯದಲ್ಲಿ ಟೇಬಲ್ ಟಾಪರ್ಸ್ ಗುಜರಾತ್ ಟೈಟನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು.

ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಏಡನ್ ಮಾರ್ಕ್ರಮ್ ಫೀಲ್ಡಿಂಗ್ ಆಯ್ದುಕೊಂಡು ತಮ್ಮ ಎದುರಾಳಿ ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು.

ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ಶುಭ್‌ಮನ್ ಗಿಲ್ ಅಬ್ಬರದ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 188 ರನ್ ಕಲೆಹಾಕಿ ಎದುರಾಳಿ ಸನ್ ರೈಸರ್ಸ್ ಹೈದರಾಬಾದ್‌ಗೆ 189 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು.

ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿದೆ. ಈ ಮೂಲಕ ಗುಜರಾತ್ ಟೈಟನ್ಸ್ 34 ರನ್‌ಗಳ ಭರ್ಜರಿ ಜಯ ಸಾಧಿಸುವುದರ ಜತೆಗೆ ಅಂಕಪಟ್ಟಿಯಲ್ಲಿ 18 ಅಂಕಗಳನ್ನು ಗಳಿಸಿಕೊಂಡು ಪ್ಲೇಆಫ್ ಸುತ್ತಿಗೆ ಅಧಿಕೃತವಾಗಿ ಲಗ್ಗೆ ಇಟ್ಟಿದೆ. ಅತ್ತ ಸನ್ ರೈಸರ್ಸ್ ಹೈದರಾಬಾದ್ ಟೂರ್ನಿಯಿಂದ ಹೊರಬಿದ್ದಿದೆ.

ಗುಜರಾತ್ ಟೈಟನ್ಸ್ ಇನ್ನಿಂಗ್ಸ್: ಗುಜರಾತ್ ಟೈಟನ್ಸ್ ಪರ ಆರಂಭಿಕ ಆಟಗಾರರಾಗಿ ವೃದ್ಧಿಮಾನ್ ಸಹಾ ಹಾಗೂ ಶುಬ್‌ಮನ್ ಗಿಲ್ ಕಣಕ್ಕಿಳಿದರು. ವೃದ್ಧಿಮಾನ್ ಸಹಾ 3 ಎಸೆತಗಳನ್ನು ಎದುರಿಸಿ ಯಾವುದೆ ರನ್ ಗಳಿಸದೇ ಡಕ್ಔಟ್ ಆದರೆ, ಶುಬ್‌ಮನ್ ಗಿಲ್ 58 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 101 ರನ್ ಗಳಿಸಿದರು. ಈ ಮೂಲಕ ಇಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ಆಸರೆಯಾದರು.

ಇನ್ನುಳಿದಂತೆ ಸಾಯಿ ಸುದರ್ಶನ್ 36 ಎಸೆತಗಳಲ್ಲಿ ಎಸೆತಗಳಲ್ಲಿ 47 ರನ್, ನಾಯಕ ಹಾರ್ದಿಕ್ ಪಾಂಡ್ಯ 8 ರನ್, ಡೇವಿಡ್ ಮಿಲ್ಲರ್ 7, ರಾಹುಲ್ ತೆವಾಟಿಯಾ 3 ರನ್, ರಶೀದ್ ಖಾನ್ ಡಕ್ಔಟ್, ನೂರ್ ಅಹ್ಮದ್ ಡಕ್ ಔಟ್, ಮೊಹಮ್ಮದ್ ಶಮಿ ಡಕ್ಔಟ್, ಮೋಹಿತ್ ಶರ್ಮಾ ಡಕ್ಔಟ್ ಹಾಗೂ ದಾಸನ್ ಶನಕ 7 ಎಸೆತಗಳಲ್ಲಿ 9 ರನ್ ಗಳಿಸಿದರು.

ಸನ್ ರೈಸರ್ಸ್ ಹೈದರಾಬಾದ್ ಭುವನೇಶ್ವರ್ ಕುಮಾರ್ 5 ವಿಕೆಟ್, ಮಾರ್ಕೋ ಯಾನ್ಸೆನ್, ಫಜಲ್‌ಹಕ್ ಫರೂಕಿ ಹಾಗೂ ಟಿ ನಟರಾಜನ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.

ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್: ಗುಜರಾತ್ ಟೈಟನ್ಸ್ ನೀಡಿದ ಗುರಿಯನ್ನು ಬೆನ್ನತ್ತಲು ಯತ್ನಿಸಿದ ಸನ್ ರೈಸರ್ಸ್ ಹೈದರಾಬಾದ್ ಪರ ಅನ್ಮೋಲ್‌ಪ್ರೀತ್ ಸಿಂಗ್ ಹಾಗೂ ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದರು. ಈ ಪೈಕಿ ಅನ್ಮೋಲ್‌ಪ್ರೀತ್ ಸಿಂಗ್ 5 ರನ್ ಗಳಿಸಿದರೆ, ಅಭಿಷೇಕ್ ಶರ್ಮಾ 4 ರನ್ ಗಳಿಸಿದರು. ಇನ್ನುಳಿದಂತೆ ನಾಯಕ ಏಡನ್ ಮಾರ್ಕ್ರಮ್ 10 ರನ್, ರಾಹುಲ್ ತ್ರಿಪಾಠಿ 1 ರನ್, ಸವೀರ್ ಸಿಂಗ್ 7 ರನ್, ಅಬ್ದುಲ್ ಸಮದ್ 4 ರನ್, ಮಾರ್ಕೊ ಯಾನ್‌ಸೆನ್ 3 ರನ್, ಭುನವೇಶ್ವರ್ ಕುಮಾರ್ 27 ರನ್, ಮಯಾಂಕ್ ಮಾರ್ಕಂಡೆ ಅಜೇಯ 18 ರನ್ ಹಾಗೂ ಫಾಜಲ್‌ಹಕ್ ಫರೂಕಿ ಅಜೇಯ 1 ರನ್ ಕಲೆಹಾಕಿದರು.

ಹೀಗೆ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳೆಲ್ಲರೂ ರನ್ ಗಳಿಸಲು ಪರಡಾಡಿದರೆ ತಂಡದ ಹೆನ್ರಿಚ್ ಕ್ಲಾಸಿನ್ ಮಾತ್ರ 44 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 64 ರನ್ ಚಚ್ಚಿದರು. ಹೆನ್ರಿಚ್ ಕ್ಲಾಸಿನ್‌ರ ಈ ಆಟಕ್ಕೆ ಯಾರೂ ಸಹ ಕೈಜೋಡಿಸದ ಕಾರಣ ಸನ್ ರೈಸರ್ಸ್ ಸೋಲನ್ನು ಕಂಡಿದೆ.

ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಶಮಿ 4 ವಿಕೆಟ್, ಮೋಹಿತ್ ಶರ್ಮಾ 4 ವಿಕೆಟ್ ಮತ್ತು ಯಶ್ ದಯಾಳ್ 1 ವಿಕೆಟ್ ಪಡೆದರು.

ಆಡುವ ಬಳಗಗಳು:

ಸನ್ ರೈಸರ್ಸ್ ಹೈದರಾಬಾದ್ ಆಡುವ ಬಳಗ: ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್(ನಾಯಕ), ಹೆನ್ರಿಚ್ ಕ್ಲಾಸೆನ್(ವಿಕೆಟ್ ಕೀಪರ್), ಅಬ್ದುಲ್ ಸಮದ್, ಸನ್ವಿರ್ ಸಿಂಗ್, ಮಯಾಂಕ್ ಮಾರ್ಕಂಡೆ, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಫಜಲ್ಹಕ್ ಫಾರೂಕಿ, ಟಿ ನಟರಾಜನ್

ಗುಜರಾತ್ ಟೈಟನ್ಸ್ ಆಡುವ ಬಳಗ: ಶುಭಮನ್ ಗಿಲ್, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ದಾಸುನ್ ಶನಕ, ರಾಹುಲ್ ತೆವಾಟಿಯಾ, ಮೋಹಿತ್ ಶರ್ಮಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್

Story first published: Monday, May 15, 2023, 23:28 [IST]
Other articles published on May 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+