Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಗುಜರಾತ್ ಟೈಟನ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಉತ್ತರಾಧಿಕಾರಿ ಯಾರೆಂದು ತಿಳಿಸಿದ ಫ್ರಾಂಚೈಸಿ

IPL 2023: Gujarat Titans Franchise Names Shubman Gill Is A Hardik Pandyas Successor

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಆವೃತ್ತಿಯು ಇದೇ ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಉದ್ಘಾಟನಾ ಪಂದ್ಯದೊಂದಿಗೆ ಚಾಲನೆ ಸಿಗಲಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ನಂತರ, ಇದೀಗ ಎಲ್ಲರ ಗಮನ 16ನೇ ಐಪಿಎಲ್ ಆವೃತ್ತಿಯತ್ತ ನೆಟ್ಟಿದೆ. ಹಲವು ಆಟಗಾರರು ಶೀಘ್ರದಲ್ಲೇ ತಮ್ಮ ತಮ್ಮ ಫ್ರಾಂಚೈಸಿಗಳ ಶಿಬಿರಗಳನ್ನು ಸೇರಲಿದ್ದಾರೆ.

ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಅನೇಕ ಆಟಗಾರರು ಈಗಾಗಲೇ ಕಳೆದ ಒಂದು ತಿಂಗಳಿನಿಂದ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಈ ಮಧ್ಯೆ ಗುಜರಾತ್‌ ಟೈಟನ್ಸ್ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಕೂಡ ಶೀಘ್ರದಲ್ಲೇ ತಮ್ಮ ಶಿಬಿರವನ್ನು ಸೇರಲಿದ್ದಾರೆ. ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಪ್ರಚಂಡ ಫಾರ್ಮ್ ಹೊಂದಿರುವ ಶುಭ್ಮನ್ ಗಿಲ್ ಅವರನ್ನು ಗುಜರಾತ್‌ ಟೈಟನ್ಸ್ ಫ್ರಾಂಚೈಸಿಯ ಆಡಳಿತ ಮಂಡಳಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

IPL 2023: Gujarat Titans Franchise Names Shubman Gill Is A Hardik Pandyas Successor

ಭವಿಷ್ಯದಲ್ಲಿ ಹಾರ್ದಿಕ್ ಪಾಂಡ್ಯ ನಂತರ ಗುಜರಾತ್‌ ಟೈಟನ್ಸ್ ಫ್ರಾಂಚೈಸಿಯ ಹೊಸ ನಾಯಕರಾಗುವ ಸಾಮರ್ಥ್ಯವನ್ನು ಶುಭ್ಮನ್ ಗಿಲ್ ಹೊಂದಿದ್ದಾರೆ ಎಂದು ಗುಜರಾತ್‌ ಟೈಟನ್ಸ್ ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ ಬಹಿರಂಗಪಡಿಸಿದ್ದಾರೆ.

2022ರ ಆವೃತ್ತಿಯಲ್ಲಿಯೇ ಶುಭ್ಮನ್ ಗಿಲ್ ನಾಯಕತ್ವದ ಕೌಶಲ್ಯಗಳನ್ನು ಅಳವಡಿಸಿಕೊಂಡಿದ್ದರು ಎಂದು ಹೇಳಿರುವ ವಿಕ್ರಮ್ ಸೋಲಂಕಿ, ಯುವ ಬ್ಯಾಟ್ಸ್‌ಮನ್ ತಮ್ಮದೇ ಆದ ರೀತಿಯಲ್ಲಿ ನಾಯಕರಾಗಿದ್ದಾರೆ ಎಂದಿದ್ದಾರೆ.

"ಶುಭ್ಮನ್ ಗಿಲ್ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ. ನನ್ನ ಪ್ರಕಾರ, ಸ್ಟಾರ್ ಆಟಗಾರನಾಗಿ ಆಡುವುದು ಮುಖ್ಯವಲ್ಲ. ಸರಳವಾಗಿ ಮತ್ತು ಶಾಮತವಾಗಿ ತಂಡದ ಗೆಲುವಿಗೆ ಏನು ಬೇಕೋ ಅದನ್ನು ಮಾಡಿದರೆ ಸಾಕು. ಕಳೆದ ವರ್ಷ ಶುಭ್ಮನ್ ಗಿಲ್ ನಾಯಕತ್ವದ ಅಂಶಗಳನ್ನು ಅಳವಡಿಸಿಕೊಂಡಿದ್ದರು," ಎಂದು ವಿಕ್ರಮ್ ಸೋಲಂಕಿ ತಿಳಿಸಿದರು.

"ಶುಭ್ಮನ್ ಗಿಲ್ ಭವಿಷ್ಯದಲ್ಲಿ ಗುಜರಾತ್ ಟೈಟನ್ಸ್ ನಾಯಕರಾಗುತ್ತಾನೆ ಎಂದು ನಾನು ಭಾವಿಸುತ್ತೇನೆ. ಆದರೆ ಇನ್ನೂ ಅದರ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಅವರು ನಾಯಕತ್ವದ ಗುಣ ಮತ್ತು ಪ್ರತಿಭೆಯನ್ನು ಹೊಂದಿರುವ ಅತ್ಯಂತ ಪ್ರಬುದ್ಧ ಆಟಗಾರನಾಗಿದ್ದಾರೆ," ಎಂದು ವಿಕ್ರಮ್ ಸೋಲಂಕಿ ಅಭಿಪ್ರಾಯಪಟ್ಟರು.

IPL 2023: Gujarat Titans Franchise Names Shubman Gill Is A Hardik Pandyas Successor

ಐಪಿಎಲ್ 2022ರಲ್ಲಿ ತಂಡದ 2ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಶುಭ್ಮನ್ ಗಿಲ್
ಕಳೆದ ವರ್ಷ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಟೈಟನ್ಸ್ ತನ್ನ ಚೊಚ್ಚಲ ಐಪಿಎಲ್ ಸೀಸನ್‌ನಲ್ಲಿಯೇ ರಾಜಸ್ಥಾನ ರಾಯಲ್ಸ್ ತಂಡವನ್ನು ಫೈನಲ್‌ನಲ್ಲಿ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಶುಭ್ಮನ್ ಗಿಲ್ ಕಳೆದ ವರ್ಷ ಗುಜರಾತ್ ಟೈಟನ್ಸ್ ಪರ ಅದ್ಭುತ ಪ್ರದರ್ಶನ ನೀಡಿದವರಲ್ಲಿ ಒಬ್ಬರು.

23 ವರ್ಷದ ಶುಭ್ಮನ್ ಗಿಲ್ ಆಡಿದ 16 ಪಂದ್ಯಗಳಲ್ಲಿ ನಾಲ್ಕು ಅರ್ಧಶತಕಗಳ ನೆರವಿನಿಂದ 483 ರನ್ ಗಳಿಸಿದರು. ಪಂದ್ಯಾವಳಿಯಲ್ಲಿ ಐದನೇ ಅತಿ ಹೆಚ್ಚು ರನ್ ಗಳಿಸಿದ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ನಂತರ ಗುಜರಾತ್‌ ಟೈಟನ್ಸ್ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು.

2022ರ ಐಪಿಎಲ್ ಋತುವಿನಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ನೀಡಿದ ಕೊಡುಗೆಯನ್ನಾಧರಿಸಿ ಭಾರತೀಯ ತಂಡದ ಎಲ್ಲ ಸ್ವರೂಪಗಳಲ್ಲಿ ಸ್ಥಾನ ಪಡೆದರು. ಭಾರತ ತಂಡದಲ್ಲಿ ಪಂದ್ಯ ವಿಜೇತ ಆಟಗಾರನಾಗಿ ದಾಖಲೆ ಮೇಲೆ ದಾಖಲೆ ಬರೆದರು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆರಂಭಿಕನಾಗಿ ಅಹಮದಾಬಾದ್‌ನಲ್ಲಿ ನಡೆದ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿ ತಾನು ಎಲ್ಲ ಮಾದರಿಯ ಆಟಕ್ಕೂ ಸೈ ಎನಿಸಿಕೊಂಡರು.

ಶುಭ್ಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧ ತಮ್ಮ ಚೊಚ್ಚಲ ಏಕದಿನ ದ್ವಿಶತಕ ಬಾರಿಸಿ, ಅದೇ ಸರಣಿಯಲ್ಲಿ ಏಕದಿನ ದ್ವಿಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Story first published: Thursday, March 23, 2023, 21:17 [IST]
Other articles published on Mar 23, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+