IPL 2023 : ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಸ್ಪಪ್ಟನೆ ನೀಡಿದ ಬಿಸಿಸಿಐ, ಭಾರತೀಯ ಆಟಗಾರರಿಗೆ ಲಾಭ!

ಐಪಿಎಲ್ ಮಿನಿ ಹರಾಜಿಗೆ ಈಗಾಗಲೇ ದಿನಗಣನೆ ಆರಂಭವಾಗಿದೆ. ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. 2023ರ ಐಪಿಎಲ್‌ನಲ್ಲಿ ಬಿಸಿಸಿಐ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿ ಮಾಡಿತ್ತು. ಈಗ ಆ ನಿಯಮದ ಬಗ್ಗೆ ಸ್ಪಷ್ಟನೆಯೊಂದನ್ನು ನೀಡಿದೆ.
ನೂತನವಾಗಿ ಜಾರಿಯಾಗುತ್ತಿರುವ ಇಂಪ್ಯಾಕ್ಟ್ ಪ್ಲೇಯರ್ ಕೇವಲ ಭಾರತೀಯ ಆಟಗಾರರಿಗೆ ಮಾತ್ರ ಅನ್ವಯವಾಗಲಿದೆ ಎಂದು ಬಿಸಿಸಿಐ ದೃಢಪಡಿಸಿದೆ. ವಿದೇಶಿ ಆಟಗಾರರು ಮತ್ತು ತಂಡದ ನಾಯಕರು ಇಂಪ್ಯಾಕ್ಟ್ ಆಟಗಾರರಾಲು ಅನುಮತಿ ಇಲ್ಲ ಎಂದು ಬಿಸಿಸಿಐ ತಿಳಿಸಿದೆ. ಹರಾಜಿಗೆ ಮುನ್ನ ಫ್ರಾಂಚೈಸಿಗಳಿಗೆ ತನ್ನ ಇಮೇಲ್‌ನಲ್ಲಿ, ಬಿಸಿಸಿಐ ಪ್ರಭಾವಿ ಆಟಗಾರನನ್ನು ಫೀಲ್ಡಿಂಗ್ ಮಾಡುವ ನಿಯಮಗಳನ್ನು ಸ್ಪಷ್ಟಪಡಿಸಿದೆ.
ಪ್ಲೇಯಿಂಗ್ XIನಲ್ಲಿ ನಾಲ್ಕಕ್ಕಿಂತ ಕಡಿಮೆ ವಿದೇಶೀ ಆಟಗಾರರು ಇದ್ದಾಗ ಮಾತ್ರ ವಿದೇಶಿ ಆಟಗಾರನು ಇಂಪ್ಯಾಕ್ಡ್ ಪ್ಲೇಯರ್ ಆಗುವ ಅವಕಾಶ ನೀಡಲಾಗುತ್ತದೆ. ಇಂಪ್ಯಾಕ್ಟ್ ಪ್ಲೇಯರ್ ಆಟದ ಪ್ರಾರಂಭದ ಮೊದಲು ಅಥವಾ ಓವರ್‌ನ ನಂತರ ಪ್ಲೇಯಿಂಗ್ XI ನಿಂದ ಆಟಗಾರನನ್ನು ಬದಲಾಯಿಸಬಹುದು. ಆದರೆ, ಪಂದ್ಯ ಆರಂಭವಾಗುವ ಮೊದಲು ಇಂಪ್ಯಾಕ್ಟ್ ಆಟಗಾರ ಯಾರೆಂದು ನಾಯಕ ತಿಳಿಸಿರಬೇಕಾಗುತ್ತದೆ.

5ನೇ ವಿದೇಶಿ ಆಟಗಾರನಿಗೆ ಅವಕಾಶ ಇಲ್ಲ
ತಂಡದ ಪಟ್ಟಿಯಲ್ಲಿ 4 ಹೆಸರನ್ನು ಬದಲಿ ಆಟಗಾರರಾಗಿ ನೀಡಬಹುದಾಗಿದೆ. ಆಡುವ ಬಳಗದಲ್ಲಿ ಮೊದಲು ನಾಲ್ವರು ವಿದೇಶಿ ಆಟಗಾರರು ಇದ್ದರೆ, ಮತ್ತೊಬ್ಬ ವಿದೇಶಿ ಆಟಗಾರನಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಲು ಅನುಮತಿ ನೀಡುವುದಿಲ್ಲ.
ಯಾವುದೇ ಸಂದರ್ಭದಲ್ಲಿಯೂ ಕೇವಲು 4 ವಿದೇಶಿ ಆಟಗಾರರು ಮಾತ್ರ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಲು ಅವಕಾಶ ಇದೆ. 5ನೇ ವಿದೇಶಿ ಆಟಗಾರನು ಮೈದಾನಕ್ಕಿಳಿಯಲು ಸಾಧ್ಯವಿಲ್ಲ ಎಂದು ಬಿಸಿಸಿಐ ಹೇಳಿದೆ. ಒಂದು ವೇಳೆ ಆಡುವ ಬಳಗದಲ್ಲಿ 3 ವಿದೇಶಿ ಆಟಗಾರರು ಇದ್ದರೆ ಒಬ್ಬ ವಿದೇಶಿ ಆಟಗಾರ ಇಂಪ್ಯಾಕ್ಟ್ ಪ್ಲೇಯರ್ ಆಗಲು ಅವಕಾಶ ಇರುತ್ತದೆ.
IPL 2023: ಮಿನಿ ಹರಾಜಿನಲ್ಲಿ ಈತ ಅತ್ಯಂತ ಗಮನ ಸೆಳೆಯುವ ಆಟಗಾರ ಎಂದ ಸುರೇಶ್ ರೈನಾ

ಬದಲಿ ಆಟಗಾರನ ನಿಯಮಗಳು
ಇಂಪ್ಯಾಕ್ಟ್ ಪ್ಲೇಯರ್ ಹೆಸರನ್ನು ಪಂದ್ಯಕ್ಕೆ ಮೊದಲು ನಾಯಕ ನಾಮನಿರ್ದೇಶನ ಮಾಡಬೇಕು. ಇನ್ನಿಂಗ್ಸ್ ಪ್ರಾರಂಭವಾಗುವ ಮೊದಲು ಅಥವಾ ಒಂದು ಓವರ್ ಮುಗಿದ ನಂತರ ಅಥವಾ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ವಿಕೆಟ್ ಪತನದ ಸಂದರ್ಭದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಪರಿಚಯಿಸಬಹುದು.
ಬೌಲಿಂಗ್ ತಂಡವು ಮೊದಲ ವಿಕೆಟ್ ಪತನದ ನಂತರ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಸಹ ಪರಿಚಯಿಸಬಹುದು. ಆದರೆ ಆ ಓವರ್‌ನ ಉಳಿದ ಎಸೆತಗಳನ್ನು ಬೌಲ್ ಮಾಡಲು ಬದಲೀ ಆಟಗಾರನಿಗೆ ಅವಕಾಶ ನೀಡುವುದಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ನಿಂದ ಬದಲಾಯಿಸಲ್ಪಟ್ಟ ಆಟಗಾರನಿಗೆ ಆ ಪಂದ್ಯದಲ್ಲಿ ಮತ್ತೆ ಭಾಗವಹಿಸಲು ಅವಕಾಶ ಇರುವುದಿಲ್ಲ. ಆತ ಫೀಲ್ಡಿಂಗ್ ಮಾಡಲು ಕೂಡ ಅನುಮತಿ ಇರುವುದಿಲ್ಲ. ಎರಡೂ ತಂಡಗಳು ಪ್ರತಿ ಪಂದ್ಯಕ್ಕೆ ಒಬ್ಬ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಬಳಸಲು ಅನುಮತಿ ನೀಡಲಾಗುತ್ತದೆ.

ಅಂಪೈರ್‌ಗೆ ಮಾಹಿತಿ ನೀಡಬೇಕು
ಬದಲಾವಣೆ ಮಾಡುವ ಮುನ್ನ, ತಂಡದ ನಾಯಕನು, ಫೀಲ್ಡ್ ಅಂಪೈರ್ ಅಥವಾ ನಾಲ್ಕನೇ ಅಂಪೈರ್ ಬಳಿ ಮಾಹಿತಿ ನೀಡಬೇಕು. ಇಂಪ್ಯಾಕ್ಟ್ ಪ್ಲೇಯರ್ ಮೈದಾನಕ್ಕೆ ಬಂದ ನಂತರ ಹೊರ ನಡೆದ ಆಟಗಾರನಿಗೆ ಮತ್ತೆ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಯಾವುದೇ ಅವಕಾಶ ಸಿಗುವುದಿಲ್ಲ.
ಈ ಹೊಸ ನಿಯಮ ಜಾರಿಯಿಂದ ಮಿನಿ ಹರಾಜಿನಲ್ಲಿ ಭಾರತೀಯ ಆಟಗಾರರಿಗೆ ಹೆಚ್ಚಿನ ಬೇಡಿಕೆ ಉಂಟಾಗುವ ಸಾಧ್ಯತೆ ಇದೆ. ಅದರಲ್ಲೂ ಆಲ್‌ರೌಂಡರ್ ಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಲಿದ್ದು, ಫ್ರಾಂಚೈಸಿಗಳು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ನೋಡುತ್ತವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications