KKR vs RCB: ಆರ್‌ಸಿಬಿ ಈತನ ವಿಕೆಟ್ ತೆಗೆಯದೇ ಇದ್ದಿದ್ರೆ ಕೆಕೆಆರ್ 200 ರನ್ ಬಾರಿಸುತ್ತಿರಲಿಲ್ಲ!

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 36ನೇ ಪಂದ್ಯ ಇಂದು ( ಏಪ್ರಿಲ್ 26 ) ನಡೆಯುತ್ತಿದ್ದು, ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡು, ಎದುರಾಳಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲಲು 201 ರನ್‌ಗಳ ಗುರಿಯನ್ನು ನೀಡಿದೆ.
ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ಜೇಸನ್ ರಾಯ್ ಹಾಗೂ ಎನ್ ಜಗದೀಶನ್ ಕಣಕ್ಕಿಳಿದರು. ಜೇಸನ್ ರಾಯ್ ಅಬ್ಬರಿಸಿದರೆ, ಜಗದೀಶನ್ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರು. ಜೇಸನ್ ರಾಯ್ 29 ಎಸೆತಗಳನ್ನು ಎದುರಿಸಿ 56 ರನ್ ಗಳಿಸಿದರೆ, ಜಗದೀಶನ್ 29 ಎಸೆತಗಳಲ್ಲಿ 27 ರನ್ ಗಳಿಸಿದರು.
ಒಂದೆಡೆ ಜೇಸನ್ ರಾಯ್ ಸಿಕ್ಕ ಚೆಂಡುಗಳನ್ನೆಲ್ಲಾ ಬೌಂಡರಿಗೆ ಅಟ್ಟಿ ಅಬ್ಬರಿಸಿದರೆ, ಮತ್ತೊಂದೆಡೆ ನಾರಾಯಣ್ ಜಗದೀಶನ್ ಏಕದಿನ ಪಂದ್ಯಗಳ ಹಾಗೆ 29 ಎಸೆತಗಳಲ್ಲಿ 27 ರನ್ ಗಳಿಸಿದರು. ಜೇಸನ್ ರಾಯ್ ಎದುರಿಸಿದಷ್ಟೇ ಎಸೆತಗಳನ್ನು ಎದುರಿಸಿದ ಜಗದೀಶನ್ 29 ರನ್‌ಗಳನ್ನು ಕಡಿಮೆ ಬಾರಿಸಿದರು. ಬಳಿಕ ಬಂದ ಆಟಗಾರರು ಬಿರುಸಿನ ಆಟವನ್ನಾಡಿ ತಂಡದ ರನ್ ವೇಗ ಹೆಚ್ಚಾಗುವಂತೆ ಮಾಡಿದರು.
ಹೀಗೆ ಜಗದೀಶನ್ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ್ದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆರಂಭವಾಗಿದ್ದು, ಭಿನ್ನವಿಭಿನ್ನ ಮೀಮ್‌ಗಳು ಹರಿದಾಡುತ್ತಿವೆ. ಹುಲಿ ಹಾಗೂ ಮೊಲ ಒಂದೇ ತಂಡದಲ್ಲಿದ್ದು, ಒಟ್ಟಿಗೆ ಕಣಕ್ಕೆ ಇಳಿದಿವೆ ಎಂದು ಹೋಲಿಕೆ ಮಾಡಿ ಜಗದೀಶನ್ ಅವರ ನಿಧಾನಗತಿಯ ಇನ್ನಿಂಗ್ಸ್ ಅನ್ನು ಟೀಕಿಸಲಾಗಿದೆ. ಅಲ್ಲದೇ ಈತನ ವಿಕೆಟ್ ಅನ್ನು ತೆಗೆಯದೇ ಹಾಗೆಯೇ ಉಳಿಸಿಕೊಂಡಿದ್ದರೆ ಕೊಲ್ಕತ್ತಾ ನೈಟ್ ರೈಡರ್ಸ್ ಇಷ್ಟು ದೊಡ್ಡ ಮೊತ್ತವನ್ನು ಕಲೆಹಾಕುತ್ತಿರಲಿಲ್ಲ ಎಂದು ಜಗದೀಶನ್ ಕಾಲನ್ನು ಎಳೆದಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್ ಪರ ವೆಂಕಟೇಶ್ ಅಯ್ಯರ್ 26 ಎಸೆತಗಳಲ್ಲಿ 31 ರನ್, ನಾಯಕ ನಿತೀಶ್ ರಾಣಾ 21 ಎಸೆತಗಳಲ್ಲಿ 48 ರನ್, ಆಂಡ್ರೆ ರಸೆಲ್ 1 ರನ್, ರಿಂಕು ಸಿಂಗ್ 10 ಎಸೆತಗಳಲ್ಲಿ ಅಜೇಯ 18 ರನ್ ಗಳಿಸಿದರೆ, ಡೇವಿಡ್ 3 ಎಸೆತಗಳಲ್ಲಿ 12 ರನ್ ಚಚ್ಚಿ ಅಜೇಯರಾಗಿ ಉಳಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿಜಯ್ ಕುಮಾರ್ ವೈಶಾಖ್ ಎರಡು ವಿಕೆಟ್, ವನಿಂದು ಹಸರಂಗ ಎರಡು ವಿಕೆಟ್ ಹಾಗೂ ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಪಡೆದರು.
ಆಡುವ ಬಳಗಗಳು:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ: ವಿರಾಟ್ ಕೊಹ್ಲಿ(ನಾಯಕ), ಶಹಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್(ವಿಕೆಟ್), ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಡೇವಿಡ್ ವಿಲ್ಲಿ, ವಿಜಯ್‌ಕುಮಾರ್ ವೈಶಾಕ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್
ಕೊಲ್ಕತ್ತಾ ನೈಟ್ ರೈಡರ್ಸ್ ಆಡುವ ಬಳಗ: ಎನ್ ಜಗದೀಸನ್(ವಿಕೆಟ್ ಕೀಪರ್), ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಡೇವಿಡ್ ವೈಸ್, ವೈಭವ್ ಅರೋರಾ, ಉಮೇಶ್ ಯಾದವ್, ವರುಣ್ ಚಕ್ರವರ್ತಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications