ಸದ್ಯ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಸೀಸನ್‌ನಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಉತ್ತಮವಾಗಿ ಆಡುತ್ತಿದ್ದು, ಈ ಬಾರಿಯ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವೆನಿಸಿದೆ.
ಕೆಎಲ್ ರಾಹುಲ್ ಇತ್ತೀಚೆಗೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಕಾರಣ ದೇಶಾದ್ಯಂತ ಚರ್ಚೆಯ ವಿಷಯವಾಗಿದ್ದಾರೆ ಮತ್ತು ಮಾಜಿ ಆಟಗಾರರಿಂದ ಟೀಕೆಗೆ ಗುರಿಯಾಗುತ್ತಿದ್ದಾರೆ. ಒಂದೊಮ್ಮೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿಯಾಗಿ ಭಾರತ ತಂಡದ ಮುಂದಿನ ನಾಯಕ ಎಂದು ಕೆಎಲ್ ರಾಹುಲ್ ಪರಿಗಣಿಸಲ್ಪಟ್ಟಿದ್ದರು.

ಆದರೆಮ ಇದೀಗ ಕೆಎಲ್ ರಾಹುಲ್ ಭಾರತೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹೋರಾಡಬೇಕಿದೆ. ಏಕೆಂದರೆ ಅವರನ್ನು ಇತ್ತೀಚಿಗೆ ಉಪನಾಯಕನ ಸ್ಥಾನದಿಂದ ಕೆಳಗಿಳಿಸಲಾಯಿತು ಮತ್ತು ಹಾರ್ದಿಕ್ ಪಾಂಡ್ಯ ಆ ಸ್ಥಾನವನ್ನು ತುಂಬಿದರು.
ಇದೀಗ ಭಾರತ ಕ್ರಿಕೆಟ್ ತಂಡದ ಮಾಜಿ ಆಯ್ಕೆಗಾರ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಸೀಸನ್‌ಗಾಗಿ ಜಿಯೋ ಸಿನಿಮಾದ ಪ್ರಸ್ತುತ ಕಾಮೆಂಟೇಟರ್, ಸರಣ್‌ದೀಪ್ ಸಿಂಗ್ ಅವರು ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಫಾರ್ಮ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
IPL 2023: ಫಾಫ್ ಡು ಪ್ಲೆಸಿಸ್ RCB ನಾಯಕನಾಗಿ ಆಯ್ಕೆಯಾದ ಹಿಂದಿನ ಕಾರಣ ಬಹಿರಂಗಪಡಿಸಿದ ಮೈಕ್ ಹೆಸ್ಸನ್
ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಮತ್ತು ಕ್ರಿಕೆಟ್ ಪಂಡಿತರು ಕಂಡಂತೆ, ಸದ್ಯ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಗುಣಮಟ್ಟ ಕುಸಿದಿದೆ. ಬೌಲರ್‌ನ ಅರ್ಥ ಮಾಡಿಕೊಂಡು ಬ್ಯಾಟಿಂಗ್ ಮಾಡುತ್ತಿಲ್ಲ. ಕೆಎಲ್ ರಾಹುಲ್ ತಮ್ಮ ಅತ್ಯುನ್ನತ ಫಾರ್ಮ್‌ನಲ್ಲಿದ್ದಾಗ ಯಾವುದೇ ಬೌಂಡರಿಗಳು ಅವರಿಗೆ ದೂರವೆನಿಸುವುದಿಲ್ಲ. ಆಗ ಜಗತ್ತಿನ ಯಾವ ಬೌಲರ್‌ಗಳು ಆತನನ್ನು ಎದುರಿಸಲು ಬಯಸುವುದಿಲ್ಲ ಎಂದು ಹಲವರು ಹೇಳುತ್ತಾರೆ.

"ಕೆಎಲ್ ರಾಹುಲ್ ಪ್ರಸ್ತುತ ಕಷ್ಟಪಡುತ್ತಿರುವಂತೆ ತೋರುತ್ತಿದೆ. ಆದರೆ ಅವರು ಮರಳಿ ಫಾರ್ಮ್‌ಗೆ ಬರುತ್ತಿರುವುದು ಒಳ್ಳೆಯದು. ನೀವು ಐಪಿಎಲ್‌ನಲ್ಲಿ ಕಳೆದ ಕೆಲವು ಪಂದ್ಯಗಳನ್ನು ಮತ್ತು ಅವರ ಬ್ಯಾಟಿಂಗ್ ಅನ್ನು ಗಮನಿಸಿದರೆ, ಹಳೆಯ ಶೈಲಿಗೆ ಹಿಂತಿರುಗುತ್ತಾರೆ ಎಂಬ ವಿಶ್ವಾಸವಿದೆ," ಎಂದು ಸರಣ್‌ದೀಪ್ ಸಿಂಗ್ ಹೇಳಿದರು.
"ಕೆಎಲ್ ರಾಹುಲ್ ಅವರ ಪ್ರತಿಭೆ ನಮಗೆಲ್ಲರಿಗೂ ತಿಳಿದಿದ್ದು, ಅವರು ಗುಣಮಟ್ಟದ ಆಟಗಾರ. ಬ್ಯಾಟಿಂಗ್ ಫಾರ್ಮ್‌ಗೆ ಮರಳುತ್ತಿದ್ದಾರೆ. ಅವರು ಟೀಂ ಇಂಡಿಯಾ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ," ಎಂದು ಮಾಜಿ ಭಾರತ ಆಯ್ಕೆಗಾರ ಸರಣ್‌ದೀಪ್ ಸಿಂಗ್ ತಿಳಿಸಿದರು.
ನಾನು ಆಯ್ಕೆಗಾರನಾಗಿದ್ದಾಗ ನನ್ನೆದುರು ಹಲವು ಶತಕ ಬಾರಿಸಿದ ತುಂಬಾ ಪ್ರಾಮಾಣಿಕ ಮತ್ತು ಶಿಸ್ತಿನ ಹುಡುಗ. ಅವರು ಶೀಘ್ರದಲ್ಲೇ ತಮ್ಮ ಅತ್ಯುತ್ತಮ ಸ್ಥಿತಿಗೆ ಮರಳುತ್ತಾರೆ ಎಂದು ನನಗೆ ಖಾತ್ರಿಯಿದೆ,'' ಎಂದು ಸರಣ್‌ದೀಪ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
2023ರ ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಈ ಋತುವಿನಲ್ಲಿ ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಮತ್ತು ಎರಡು ಸೋಲಿನೊಂದಿಗೆ 6 ಅಂಕ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಇನ್ನು ಬುಧವಾರ, ಏಪ್ರಿಲ್ 19ರಂದು ನಡೆಯುವ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 26ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.