For Quick Alerts
ALLOW NOTIFICATIONS  
For Daily Alerts
 

ವೇಗವಾಗಿ 150 ಐಪಿಎಲ್ ಸಿಕ್ಸರ್ ಬಾರಿಸಿದವರು; ಕೊಹ್ಲಿ, ರೋಹಿತ್ ಅಲ್ಲ ಆತನೊಬ್ಬನೇ ಭಾರತೀಯ!

IPL 2023: List of 5 batsmen with fastest 150 IPL sixres; KL Rahul is the only Indian

ಪ್ರತಿ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಬಂದಾಗಲೂ ಹೊಸ ಹೊಸ ದಾಖಲೆಗಳು, ಮೈಲಿಗಲ್ಲುಗಳು ನಿರ್ಮಾಣವಾಗುತ್ತಲೇ ಇರುತ್ತವೆ.‌ ಬ್ಯಾಟ್ಸ್‌ಮನ್‌ಗಳು ರನ್, ಬೌಂಡರಿ ಸಿಕ್ಸರ್ ದಾಖಲೆಗಳನ್ನು ಬರೆದು ಅಬ್ಬರಿಸಿದರೆ, ಬೌಲರ್ಸ್ ಹೆಚ್ಚೆಚ್ಚು ವಿಕೆಟ್ ಪಡೆಯುವ ಮೂಲಕ ಹಲವು ದಾಖಲೆಗಳನ್ನು ಬರೆಯುತ್ತಿರುತ್ತಾರೆ.

ಅದೇ ರೀತಿ ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಲೀಗ್ ಟೂರ್ನಿಯಲ್ಲಿಯೂ ಸಹ ಈಗಾಗಲೇ ಹಲವಾರು ದಾಖಲೆಗಳು ನಿರ್ಮಾಣವಾಗಿವೆ. ಆಟಗಾರನೋರ್ವ ನಿರ್ಮಿಸಿದ್ದ ದಾಖಲೆಯನ್ನು ಮತ್ತೋರ್ವ ಆಟಗಾರ ಮುರಿದುಹಾಕಿ ಆ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.‌

ಭಾರತೀಯ ಕ್ರಿಕೆಟಿಗರೂ ಸಹ ಹಲವಾರು ಹೊಸ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದು, ಇದೀಗ 150 ಇಂಡಿಯನ್ ಪ್ರೀಮಿಯರ್ ಲೀಗ್ ಸಿಕ್ಸರ್ ಗಳನ್ನು ವೇಗವಾಗಿ ಬಾರಿಸಿದ ಆಟಗಾರರ ಪಟ್ಟಿಗೆ ಭಾರತೀಯ ಕ್ರಿಕೆಟಿಗ ಸೇರ್ಪಡೆಗೊಂಡಿದ್ದಾರೆ.

ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ವೇಗವಾಗಿ 150 ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟಿಗ ಕೆ ಎಲ್ ರಾಹುಲ್ ಮೂರನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. 95 ಇನ್ನಿಂಗ್ಸ್‌ನಲ್ಲಿ 150 ಸಿಕ್ಸರ್ ಗಳನ್ನು ಪೂರೈಸಿದ್ದಾರೆ ಕೆ ಎಲ್ ರಾಹುಲ್.

ಹಾಗಾದರೆ ಅತಿ ವೇಗವಾಗಿ 150 ಸಿಕ್ಸರ್ ಬಾರಿಸಿರುವ ಆಟಗಾರರ ಟಾಪ್ 5 ಪಟ್ಟಿ ಹೇಗಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

1. ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಕೇವಲ 50 ಇನ್ನಿಂಗ್ಸ್‌ನಲ್ಲಿ 150 ಐಪಿಎಲ್ ಸಿಕ್ಸರ್ ಬಾರಿಸಿ ಸ್ಪೋಟಕ ದಾಖಲೆ ನಿರ್ಮಿಸಿದ್ದಾರೆ.
2. ಮತ್ತೋರ್ವ ಕೆರಿಬಿಯನ್ ದಾಂಡಿಗ ಆಂಡ್ರೆ ರಸೆಲ್ 72 ಇನ್ನಿಂಗ್ಸ್‌ನಲ್ಲಿ 150 ಐಪಿಎಲ್ ಸಿಕ್ಸರ್ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ.

kl rahul

3. ಕೆ ಎಲ್ ರಾಹುಲ್ 95 ಇನ್ನಿಂಗ್ಸ್‌ನಲ್ಲಿ 150 ಸಿಕ್ಸರ್ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಹಾಗೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಎನಿಸಿಕೊಂಡಿದ್ದಾರೆ.
4. ಡೇವಿಡ್ ವಾರ್ನರ್ 109 ಇನ್ನಿಂಗ್ಸ್‌ನಲ್ಲಿ 150 ಐಪಿಎಲ್ ಸಿಕ್ಸರ್ ಚಚ್ಚಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

5. ಎಬಿ ಡಿವಿಲಿಯರ್ಸ್ 111 ಇನ್ನಿಂಗ್ಸ್‌ನಲ್ಲಿ 150 ಸಿಕ್ಸರ್ ಬಾರಿಸಿ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ
6. ಶೇನ್ ವಾಟ್ಸನ್ 113 ಇನ್ನಿಂಗ್ಸ್‌ನಲ್ಲಿ 150 ಸಿಕ್ಸರ್ ಬಾರಿಸಿ ಆರನೇ ಸ್ಥಾನದಲ್ಲಿದ್ದಾರೆ.

ಈ ದಾಖಲೆ ಮಾತ್ರವಲ್ಲದೇ ಕೆಎಲ್ ರಾಹುಲ್ ವೇಗವಾಗಿ 7000 ಟಿ 20 ರನ್ ಗಳಿಸಿದ ಆಟಗಾರರ ದಾಖಲೆಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ‌. ಈ ಕುರಿತ ಮಾಹಿತಿ ಮುಂದಿದೆ..

ಅತಿ ವೇಗವಾಗಿ 7000 ಟಿ20 ರನ್ ಬಾರಿಸಿದ ವಿಶ್ವ ಕ್ರಿಕೆಟಿಗರು ( ಅಂತರರಾಷ್ಟ್ರೀಯ ಹಾಗೂ ಫ್ರಾಂಚೈಸಿ ಲೀಗ್‌ಗಳು ಸೇರಿದಂತೆ )

1. ಬಾಬರ್ ಅಜಮ್ - 187 ಇನ್ನಿಂಗ್ಸ್
2. ಕ್ರಿಸ್ ಗೇಲ್ - 192 ಇನ್ನಿಂಗ್ಸ್
3. ಕೆಎಲ್ ರಾಹುಲ್ - 197 ಇನ್ನಿಂಗ್ಸ್
4. ವಿರಾಟ್ ಕೊಹ್ಲಿ - 212 ಇನ್ನಿಂಗ್ಸ್
5. ಆರನ್ ಫಿಂಚ್ - 222 ಇನ್ನಿಂಗ್ಸ್

ಅತಿ ವೇಗವಾಗಿ 7000 ಟಿ20 ರನ್ ಬಾರಿಸಿದ ಭಾರತೀಯ ಕ್ರಿಕೆಟಿಗರು ( ಅಂತರರಾಷ್ಟ್ರೀಯ ಹಾಗೂ ಫ್ರಾಂಚೈಸಿ ಲೀಗ್‌ಗಳು ಸೇರಿದಂತೆ )

1. ಕೆಎಲ್ ರಾಹುಲ್ - 197 ಇನ್ನಿಂಗ್ಸ್
2. ವಿರಾಟ್ ಕೊಹ್ಲಿ - 212 ಇನ್ನಿಂಗ್ಸ್
3. ಶಿಖರ್ ಧವನ್ - 246 ಇನ್ನಿಂಗ್ಸ್
4. ಸುರೇಶ್ ರೈನಾ - 251 ಇನ್ನಿಂಗ್ಸ್
5. ರೋಹಿತ್ ಶರ್ಮಾ - 258 ಇನ್ನಿಂಗ್ಸ್

Story first published: Monday, April 24, 2023, 22:41 [IST]
Other articles published on Apr 24, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+