Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಗುಜರಾತ್ ಟೈಟಾನ್ಸ್ ತಂಡಕ್ಕೆ ದೊಡ್ಡ ಹಿನ್ನಡೆ: ಗಾಯಗೊಂಡ ಪ್ರಮುಖ ವೇಗಿ

IPL 2023: Major Setback For Gujarat Titans: Josh Little Is Unlikely To Play Few Matches In IPL 2023

ಇಂಡಿಯನ್ ಪ್ರೀಮಿಯರ್ ಲೀಗ್ ಹಾಲಿ ಚಾಂಪಿಯನ್ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡಕ್ಕೆ 2023ರ ಐಪಿಎಲ್‌ಗೆ ಮುನ್ನವೇ ದೊಡ್ಡ ಹಿನ್ನಡೆ ಎದುರಾಗಿದೆ. ತಂಡದ ಪ್ರಮುಖ ವೇಗದ ಬೌಲರ್ ಗಾಯಗೊಂಡಿದ್ದು, ಈ ಬಾರಿ ಐಪಿಎಲ್‌ನ ಕೆಲವು ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ.

ಐರ್ಲೆಂಡ್‌ನ ವೇಗದ ಬೌಲರ್ ಜೋಶ್ ಲಿಟಲ್ ಗಾಯಗೊಂಡಿದ್ದು 2023ರ ಐಪಿಎಲ್‌ನಲ್ಲಿ ಆಡುವುದು ಅನುಮಾನವಾಗಿದೆ. ಸದ್ಯ ಪಾಕಿಸ್ತಾನ ಸೂಪರ್ ಲೀಗ್ 2023 ನಲ್ಲಿ ಆಡಬೇಕಿದ್ದ ಅವರು ಗಾಯಗೊಂಡಿದ್ದು ಟೂರ್ನಿಯಿಂದ ಹೊರಗುಳಿದಿದ್ದಾರೆ.

IND vs AUS 3rd Test: ಬ್ರೇಕ್ ಬಳಿಕ ಇಂದೋರ್ ತಲುಪಿದ ಟೀಂ ಇಂಡಿಯಾ: ಭಾನುವಾರದಿಂದ ಅಭ್ಯಾಸ

ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಗಾಯಗೊಂಡಿರುವ ಜೋಶ್ ಲಿಟಲ್ ಸದ್ಯ ಚಿಕಿತ್ಸೆ ಪಡೆಯಲು ಐರ್ಲೆಂಡ್‌ಗೆ ತೆರಳಿದ್ದಾರೆ. ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಜೋಶ್ ಲಿಟಲ್‌ರನ್ನು 4.4 ಕೋಟಿ ರುಪಾಯಿ ನೀಡಿ ಗುಜರಾತ್ ಟೈಟಾನ್ಸ್‌ ಖರೀದಿ ಮಾಡಿತ್ತು.

ಎಸ್‌ಎ20 ಟೂರ್ನಿಯಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಪರವಾಗಿ ಆಡುತ್ತಿದ್ದಾಗ ಮಂಡಿರಜ್ಜು ಬಿಗಿತದ ಬಗ್ಗೆ ದೂರು ನೀಡಿದ್ದರು. ಜೋಶ್ ಲಿಟಲ್ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಮುಲ್ತಾನ್ ಸುಲ್ತಾನ್ ತಂಡದ ಪರವಾಗಿ ಆಡಬೇಕಿತ್ತು, ಆದರೆ ಗಾಯದ ಭಯದಿಂದಾಗಿ ಅವರು ತವರಿಗೆ ವಾಪಸ್ ತೆರಳಿದ್ದಾರೆ.

IPL 2023: Major Setback For Gujarat Titans: Josh Little Is Unlikely To Play Few Matches In IPL 2023

ಬಾಂಗ್ಲಾದೇಶದ ವಿರುದ್ಧದ ಸರಣಿ ವೇಳೆಗೆ ಆಯ್ಕೆ

ಮಾರ್ಚ್ ತಿಂಗಳಿನಲ್ಲಿ ಬಾಂಗ್ಲಾದೇಶದಲ್ಲಿ ಐರ್ಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಸರಣಿ ವೇಳೆಗೆ ಅವರು ತಂಡಕ್ಕೆ ವಾಪಸಾಗುವ ಬಗ್ಗೆ ನಿರೀಕ್ಷೆ ಮಾಡಲಾಗಿದೆ. ಒಂದು ವೇಳೆ ಅವರು ಏಕದಿನ ಸರಣಿಗೆ ಆಯ್ಕೆಯಾದರೆ, ಐಪಿಎಲ್‌ನಲ್ಲಿ ಆಡುವ ಸಾಧ್ಯತೆ ಇದೆ.

ಆದರೆ, ಅವರ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರವೇ ಅವರು ಆಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಮಾರ್ಚ್ 18ರಂದು ಐರ್ಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಸರಣಿ ಮಾರ್ಚ್ 18ರಂದು ಪ್ರಾರಂಭವಾಗಲಿದೆ.

IPL 2023: Major Setback For Gujarat Titans: Josh Little Is Unlikely To Play Few Matches In IPL 2023

ಭರವಸೆಯ ವೇಗದ ಬೌಲರ್

ಜೋಶ್ ಲಿಟಲ್ 2016ರಲ್ಲಿ ಐರ್ಲೆಂಡ್‌ ತಂಡದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅವರು ಇದುವರೆಗೂ 25 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳು ಮತ್ತು 53 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.

ಮೇ 2019ರಂದು ಡಬ್ಲಿನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ್ದರು. 45 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದ್ದರು. ಮಾರ್ಚ್ 31ರಿಂದ ಐಪಿಎಲ್ ಪಂದ್ಯಾವಳಿಗೆ ಚಾಲನೆ ಸಿಗಲಿದೆ.

Story first published: Saturday, February 25, 2023, 17:38 [IST]
Other articles published on Feb 25, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+