IPL 2023 ಮಿನಿ-ಹರಾಜು: ಎಲ್ಲಾ 10 ತಂಡಗಳ ಸಂಭಾವ್ಯ ಉಳಿಸಿಕೊಂಡ ಆಟಗಾರರ ಸಂಪೂರ್ಣ ಪಟ್ಟಿ

2023ರ ಐಪಿಎಲ್ ಮೆಗಾ ಹರಾಜಿಗೆ ಇನ್ನೊಂದು ವರ್ಷವಿದೆ. ಅದಕ್ಕೂ ಮೊದಲು ಇದೇ ಡಿಸೆಂಬರ್‌ನಲ್ಲಿ ಮಿನಿ ಹರಾಜು ನಡೆಯಲಿದ್ದು, ನವೆಂಬರ್ 15ರ ಸಂಜೆಯೊಳಗೆ ಬಿಡುಗಡೆಯಾದ ಮತ್ತು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಸಲ್ಲಿಸುವಂತೆ ಬಿಸಿಸಿಐ ಎಲ್ಲಾ 10 ತಂಡಗಳನ್ನು ಸೂಚಿಸಿದೆ.

ಸಾಮಾನ್ಯವಾಗಿ ಹಿಂದಿನ ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರರನ್ನು ಐಪಿಎಲ್ ತಂಡಗಳು ಬಿಡುಗಡೆ ಮಾಡುತ್ತವೆ. ಆದಾಗ್ಯೂ, ಕೆಲವು ಆಟಗಾರರು ತಮ್ಮ ಹೆಚ್ಚಿನ ಬೆಲೆಗಳಿಂದಾಗಿ ತಮ್ಮ ಒಪ್ಪಂದಗಳನ್ನು ಕಳೆದುಕೊಂಡಿದ್ದಾರೆ ಮತ್ತು ಕೆಲವು ದೊಡ್ಡ ಆಟಗಾರರನ್ನು ಉಳಿಸಿಕೊಂಡಿವೆ.

IPL 2023: ಪೋಲಾರ್ಡ್ ಕೈಬಿಡುವ ಮುನ್ನ ಮುಂಬೈ ಇಂಡಿಯನ್ಸ್ ಸ್ವಲ್ಪ ಯೋಚಿಸಲಿ; ಮಾಜಿ ಕ್ರಿಕೆಟರ್IPL 2023: ಪೋಲಾರ್ಡ್ ಕೈಬಿಡುವ ಮುನ್ನ ಮುಂಬೈ ಇಂಡಿಯನ್ಸ್ ಸ್ವಲ್ಪ ಯೋಚಿಸಲಿ; ಮಾಜಿ ಕ್ರಿಕೆಟರ್

ಮೆಗಾ ಹರಾಜಿನಲ್ಲಿ ಗರಿಷ್ಠ ನಾಲ್ಕು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದಾಗಿತ್ತು. ಆದರೆ ಅದಕ್ಕಿಂತ ಭಿನ್ನವಾಗಿ, ಫ್ರಾಂಚೈಸಿಯವರು ಯಾವ ಆಟಗಾರನನ್ನು ಉಳಿಸಿಕೊಳ್ಳಲು ಬಯಸುತ್ತಾರೆ ಮತ್ತು ಯಾವ ಆಟಗಾರನನ್ನು ಬಿಡಲು ಬಯಸುತ್ತಾರೆ ಎಂಬುದನ್ನು ನಿರ್ಧರಿಸುತ್ತಾರೆ. ಅವರು ಒಬ್ಬ ಆಟಗಾರನನ್ನು ಮತ್ತೊಂದು ತಂಡದ ಆಟಗಾರನೊಂದಿಗೆ ವಿನಿಮಯ ಮಾಡಬಹುದು. ಎಲ್ಲಾ 10 ತಂಡಗಳ ಸಂಭಾವ್ಯ ಉಳಿಸಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ.

ಎಲ್ಲಾ ತಂಡಗಳಿಂದ ಸಂಭವನೀಯ ಉಳಿದುಕೊಳ್ಳಲಿರುವ ಆಟಗಾರರ ಪಟ್ಟಿ

ಎಲ್ಲಾ ತಂಡಗಳಿಂದ ಸಂಭವನೀಯ ಉಳಿದುಕೊಳ್ಳಲಿರುವ ಆಟಗಾರರ ಪಟ್ಟಿ

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಸಂಭಾವ್ಯ ಪಟ್ಟಿ: ಎಂಎಸ್ ಧೋನಿ, ರವೀಂದ್ರ ಜಡೇಜಾ, ಮೊಯಿನ್ ಅಲಿ, ಶಿವಂ ದುಬೆ, ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮುಖೇಶ್ ಚೌಧರಿ, ಡ್ವೈನ್ ಪ್ರಿಟೋರಿಯಸ್, ದೀಪಕ್ ಚಾಹರ್.

ಮುಂಬೈ ಇಂಡಿಯನ್ಸ್ (ಎಂಐ) ಸಂಭಾವ್ಯ ಪಟ್ಟಿ: ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೇನಿಯಲ್ ಸಾಮ್ಸ್, ಟಿಮ್ ಡೇವಿಡ್, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಟ್ರಿಸ್ಟಾನ್ ಸ್ಟಬ್ಸ್, ತಿಲಕ್ ವರ್ಮಾ, ಜೇಸನ್ ಬೆಹ್ರೆಂಡಾರ್ಫ್.

ಗುಜರಾತ್ ಟೈಟನ್ಸ್ (ಜಿಟಿ) ಸಂಭಾವ್ಯ ಪಟ್ಟಿ: ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ಶುಭಮನ್ ಗಿಲ್, ಅಭಿನವ್ ಮನೋಹರ್, ವೃದ್ಧಿಮಾನ್ ಸಹಾ, ರಶೀದ್ ಖಾನ್, ಮೊಹಮ್ಮದ್ ಶಮಿ, ರಾಹುಲ್ ತೆವಾಟಿಯಾ, ರಹಮಾನುಲ್ಲಾ ಗುರ್ಬಾಜ್

ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಸಂಭಾವ್ಯ ಪಟ್ಟಿ

ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಸಂಭಾವ್ಯ ಪಟ್ಟಿ

ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಸಂಭಾವ್ಯ ಪಟ್ಟಿ: ರಿಷಭ್ ಪಂತ್, ಡೇವಿಡ್ ವಾರ್ನರ್, ಪೃಥ್ವಿ ಶಾ, ರೋವ್‌ಮನ್ ಪೊವೆಲ್, ಅಕ್ಷರ್ ಪಟೇಲ್, ಮಿಚೆಲ್ ಮಾರ್ಷ್, ಸರ್ಫರಾಜ್ ಖಾನ್, ಅನ್ರಿಚ್ ನಾರ್ಟ್ಜೆ, ಕುಲದೀಪ್ ಯಾದವ್.

ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಸಂಭಾವ್ಯ ಪಟ್ಟಿ: ಶಿಖರ್ ಧವನ್, ಜಾನಿ ಬೈರ್‌ಸ್ಟೋವ್, ಭಾನುಕಾ ರಾಜಪಕ್ಸೆ, ಅರ್ಶ್‌ದೀಪ್ ಸಿಂಗ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ಕಗಿಸೊ ರಬಾಡ, ನಾಥನ್ ಎಲ್ಲಿಸ್, ರಾಹುಲ್ ಚಾಹರ್, ಸಂದೀಪ್ ಶರ್ಮಾ

ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಸಂಭಾವ್ಯ ಪಟ್ಟಿ: ಕೆಎಲ್ ರಾಹುಲ್, ಕ್ವಿಂಟನ್ ಡಿ ಕಾಕ್, ಎವಿನ್ ಲೂಯಿಸ್, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ರವಿ ಬಿಷ್ಣೋಯ್, ಜೇಸನ್ ಹೋಲ್ಡರ್, ಅವೇಶ್ ಖಾನ್, ಮೊಹ್ಸಿನ್ ಖಾನ್, ಆಯುಷ್ ಬದೋನಿ

ಆರ್‌ಸಿಬಿ ಸಂಭಾವ್ಯ ಪಟ್ಟಿ

ಆರ್‌ಸಿಬಿ ಸಂಭಾವ್ಯ ಪಟ್ಟಿ

ರಾಜಸ್ಥಾನ ರಾಯಲ್ಸ್ (ಆರ್ಆರ್) ಸಂಭಾವ್ಯ ಪಟ್ಟಿ: ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಶಿಮ್ರಾನ್ ಹೆಟ್ಮೆಯರ್, ಟ್ರೆಂಟ್ ಬೌಲ್ಟ್, ಜೇಮ್ಸ್ ನೀಶಮ್, ಪ್ರಸಿದ್ಧ್ ಕೃಷ್ಣ, ಒಬೆದ್ ಮೆಕಾಯ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸಂಭಾವ್ಯ ಪಟ್ಟಿ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಶಹಬಾಜ್ ಅಹ್ಮದ್, ರಜತ್ ಪಾಟಿದಾರ್. ಜೋಶ್ ಹೇಜಲ್‌ವುಡ್

For Quick Alerts
ALLOW NOTIFICATIONS
For Daily Alerts
Story first published: Monday, November 14, 2022, 23:43 [IST]
Other articles published on Nov 14, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X