IPL 2023: ಲಕ್ನೋ vs ಗುಜರಾತ್ ಮ್ಯಾಚ್ ಫಿಕ್ಸಿಂಗ್? ಅನುಮಾನ ಹುಟ್ಟುಹಾಕಿತು ಆ ಓವರ್‌ಗಳು!

ಸದ್ಯ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 30 ಹಾಗೂ 31ನೇ ಪಂದ್ಯಗಳು ನಿನ್ನೆ ( ಏಪ್ರಿಲ್ 22 ) ಜರುಗಿದವು. ಮಧ್ಯಾಹ್ನ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗುಜರಾತ್ ಟೈಟನ್ಸ್ 7 ರನ್‌ಗಳ ಗೆಲುವನ್ನು ದಾಖಲಿಸಿತು.
ಬಳಿಕ ರಾತ್ರಿ ಮುಂಬೈನ ವಾಂಖೆಡೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 13 ರನ್‌ಗಳ ಭರ್ಜರಿ ಜಯ ಸಾಧಿಸಿತು. ಇನ್ನು ಒಂದೇ ದಿನ ನಡೆದ ಈ ಎರಡು ಪಂದ್ಯಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಹೈ ಸ್ಕೋರಿಂಗ್ ಮ್ಯಾಚ್ ಆಗಿದ್ದರೆ, ಗುಜರಾತ್ ಟೈಟನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯ ಲೋ ಸ್ಕೋರಿಂಗ್ ಪಂದ್ಯವಾಗಿತ್ತು.
ಇನ್ನು ಗುಜರಾತ್ ಟೈಟನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ನಡೆದ ಪಂದ್ಯ ಈ ಬಾರಿಯ ಟೂರ್ನಿಯ ಅತಿ ನೀರಸ ಪಂದ್ಯ ಎನಿಸಿಕೊಂಡಿತು. ಎರಡೂ ತಂಡಗಳೂ ಸಹ ರನ್ ಕಲೆ ಹಾಕಲಾಗದೇ ಪರದಾಡಿದವು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾಟ್ ಟೈಟನ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 135 ರನ್‌ಗಳನ್ನು ಗುಜರಾತ್ ಟೈಟನ್ಸ್ ಕಲೆಹಾಕಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲ್ಲಲು 136 ರನ್‌ಗಳ ಸುಲಭ ಗುರಿಯನ್ನು ನೀಡಿತ್ತು.
ಲಕ್ನೋ ಸೂಪರ್ ಜೈಂಟ್ಸ್ ಈ ಅಲ್ಪಮೊತ್ತದ ಗುರಿಯನ್ನೂ ಸಹ ಬೆನ್ನತ್ತಲಾಗದೇ ಮಕಾಡೆ ಮಲಗಿತು. 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 128 ರನ್ ಕಲೆಹಾಕಿದ ಲಕ್ನೋ ಸೂಪರ್ ಜೈಂಟ್ಸ್ ತವರಿನ ಸ್ಟೇಡಿಯಂನಲ್ಲಿಯೇ ಇಷ್ಟೊಂದು ಕಡಿಮೆ ಗುರಿಯನ್ನು ಬೆನ್ನತ್ತಲಾಗದೇ ಮುಖಭಂಗ ಅನುಭವಿಸಿತು. ಹೀಗೆ ಈ ಕಡಿಮೆ ಮೊತ್ತವನ್ನೂ ಸಹ ಬೆನ್ನತ್ತಲಾಗದೇ ಸೋತ ಕಾರಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದು ಫಿಕ್ಸಿಂಗ್ ಮ್ಯಾಚ್ ಎಂಬ ಟ್ರೆಂಡಿಂಗ್ ಶುರುವಾಗಿದೆ.
ಇನ್ನು ಈ ಪಂದ್ಯದ ಹಲವಾರು ಅಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ನೆಟ್ಟಿಗರು ಪಂದ್ಯದ ಮೇಲೆ ಫಿಕ್ಸಿಂಗ್ ಆರೋಪ ಮಾಡಿದ್ದಾರೆ. ಮೊದಲನೆಯದಾಗಿ 57 ಎಸೆತಕ್ಕೆ 53 ಬೇಕಿತ್ತು, ಕೈನಲ್ಲಿ 9 ವಿಕೆಟ್ ಇತ್ತು. ಹೀಗಿದ್ದ ಪಂದ್ಯ ಕೊನೆಗೆ 6 ಎಸೆತಗಳಲ್ಲಿ 12 ರನ್ ಬಾರಿಸಬೇಕಾದ ಪರಿಸ್ಥಿತಿಗೆ ಬಂತು. ಅಲ್ಲದೇ ಕೊನೆಗೆ 7 ವಿಕೆಟ್‌ಗಳೂ ಸಹ ಉರುಳಿದವು. ಹೀಗೆ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹೇಗೆ ಸೋತರು ಎಂದು ಅನುಮಾನ ಹೊರಹಾಕಿದ್ದಾರೆ.

ಅಲ್ಲದೇ ಬಹುತೇಕ ನೆಟ್ಟಿಗರು ಲಕ್ನೋ ಸೂಪರ್ ಜೈಂಟ್ಸ್ ಆಡಿದ ಕೊನೆಯ 6 ಓವರ್‌ಗಳ ಬಗ್ಗೆ ತೀವ್ರ ಸಂಶಯ ವ್ಯಕ್ತಪಡಿಸಿದ್ದಾರೆ. ಹೌದು, ಲಕ್ನೋ ಸೂಪರ್ ಜೈಂಟ್ಸ್ ಕೊನೆಯ 36 ಎಸೆತಗಳಲ್ಲಿ ಗೆಲ್ಲಲು 31 ರನ್ ಬಾರಿಸಬೇಕಾಗಿತ್ತು. ಆದರೆ ಆ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ಯಾವ ಓವರ್‌ನಲ್ಲಿಯೂ 6 ರನ್ ರೇಟ್‌ಗಿಂತ ಹೆಚ್ಚಿನ ಸ್ಕೋರ್ ಮಾಡಲೇ ಇಲ್ಲ.
15ನೇ ಓವರ್‌ನಲ್ಲಿ ಕೇವಲ 1 ರನ್, 16ನೇ ಓವರ್‌ನಲ್ಲಿ 3 ರನ್, 17ನೇ ಓವರ್‌ನಲ್ಲಿ 4 ರನ್, 18ನೇ ಓವರ್‌ನಲ್ಲಿ 6 ರನ್, 19ನೇ ಓವರ್‌ನಲ್ಲಿ 5 ರನ್ ಹಾಗೂ 20ನೇ ಓವರ್‌ನಲ್ಲಿ 4 ರನ್. ಡೆತ್ ಓವರ್‌ಗಳಲ್ಲಿ ಇಂತಹ ರನ್ ಗಳಿಕೆಯನ್ನು ಚೇಸಿಂಗ್ ಸಮಯದಲ್ಲಿ ಯಾವ ಪಿಚ್ ಆದರೂ ಸಹ ಯಾರು ತಾನೇ ಮಾಡ್ತಾರೆ ಎಂದು ನೆಟ್ಟಿಗರು ಟ್ವೀಟ್ ಮೂಲಕ ಅನುಮಾನ ಹೊರಹಾಕಿದ್ದಾರೆ. ಇದು ಫಿಕ್ಸಿಂಗ್ ಮ್ಯಾಚ್ ಎಂದು ಬರೆದುಕೊಳ್ಳುತ್ತಿದ್ದಾರೆ.
ಇನ್ನು ಇದಕ್ಕೆ ವಿರುದ್ಧವಾಗಿ ಕೆಲ ನೆಟ್ಟಿಗರು ದನಿ ಎತ್ತಿದ್ದಾರೆ. ಏಕನ ಕ್ರೀಡಾಂಗಣದ ಪಿಚ್ ಸ್ಲೋ ಇದ್ದ ಕಾರಣ ಹೆಚ್ಚಿನ ರನ್ ಹರಿದುಬಂದಿಲ್ಲ, ಇದಕ್ಕಾಗಿ ಪಂದ್ಯವನ್ನು ಫಿಕ್ಸಿಂಗ್ ಎನ್ನುವುದು ಸರಿ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications