IPL 2023 RCB Jersey: ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್‌ನಲ್ಲಿ ಹೊಸ ಜೆರ್ಸಿ ಅನಾವರಣ; ಗೇಲ್, ಎಬಿಡಿಗೆ ಗೌರವ

ಬಹುನಿರೀಕ್ಷಿತ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಆವೃತ್ತಿಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಕ್ರಿಕೆಟ್ ಪ್ರೇಮಿಗಳ ಬಹುದಿನದ ಕಾಯುವಿಕೆ ಇದೇ ಮಾರ್ಚ್ 31ರಂದು ನಡೆಯುವ ಉದ್ಘಾಟನಾ ಪಂದ್ಯದೊಂದಿಗೆ ಅಂತ್ಯಗೊಳ್ಳಲಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡುವ ಮೂಲಕ ಐಪಿಎಲ್‌ಗೆ ಚಾಲನೆ ದೊರಕಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಗೆ ಕೇವಲ ಐದು ದಿನಗಳ ಮೊದಲು ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತಮ್ಮ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿತು.
ನಾನು ಭಾರತ ತಂಡದ ಆಯ್ಕೆಗಾರನಾಗಿದ್ದರೆ, ನನಗಿಂತ ಮೊದಲು ಈತನನ್ನು ಆಯ್ಕೆ ಮಾಡುತ್ತೇನೆ; ಶಿಖರ್ ಧವನ್
ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಜೊತೆಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಹೊಸ ಜೆರ್ಸಿ ಅನಾವರಣ ಮಾಡಿದರು. ಆರ್‌ಸಿಬಿ ಫ್ರಾಂಚೈಸಿಯು ಕತಾರ್ ಏರ್‌ವೇಸ್ ಅನ್ನು ಮುಂಬರುವ ಐಪಿಎಲ್ ಋತುವಿನ ಪ್ರಮುಖ ಪ್ರಾಯೋಜಕ ಎಂದು ಘೋಷಿಸಿದೆ.

ಆರ್‌ಸಿಬಿ ತಂಡದ ಜೆರ್ಸಿಯ ಮಾದರಿಯನ್ನು ಸ್ವಲ್ಪ ಬದಲಾಯಿಸಲಾಗಿದ್ದು, ಅದನ್ನು ಹೊರತುಪಡಿಸಿ ಯಾವುದೇ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿಲ್ಲ. ಆರ್‌ಸಿಬಿ ಲೋಗೋ ಗೋಲ್ಡನ್ ಬಣ್ಣದಲ್ಲಿದ್ದು, ಟ್ರ್ಯಾಕ್ ಪ್ಯಾಂಟ್ ಮತ್ತೊಮ್ಮೆ ಕೆಂಪು ಬಣ್ಣದಲ್ಲೇ ಉಳಿಸಿಕೊಳ್ಳಲಾಗಿದೆ.
ಅನ್‌ಬಾಕ್ಸ್ ಇವೆಂಟ್‌ನಲ್ಲಿ ಕ್ರಿಸ್ ಗೇಲ್ ಮತ್ತು ಎಬಿಡಿ ಗೌರವಿಸಿದ ಆರ್‌ಸಿಬಿ
ಹೊಸ ಜೆರ್ಸಿ ಬಿಡುಗಡೆಯ ಹೊರತಾಗಿ ಆರ್‌ಟಿಬಿ ಫ್ರಾಂಚೈಸಿಯು ತನ್ನ ತಂಡದ ಇಬ್ಬರು ಶ್ರೇಷ್ಠ ಆಟಗಾರರನ್ನು ಸನ್ಮಾನಿಸಿತು. ಲೆಜೆಂಡ್ ಕ್ರಿಕೆಟಿಗರಾದ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಆರ್‌ಸಿಬಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡರು.
ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರು ಇಡೀ ತಂಡ ಮತ್ತು ಸಹಾಯಕ ಸಿಬ್ಬಂದಿಗೆ ಮತ್ತು ಭಾನುವಾರ, ಮಾರ್ಚ್ 26ರಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳಿಗೆ ಶುಭಾಶಯ ಕೋರಿದರು.
ಇದರ ಹೊರತಾಗಿ ಆರ್‌ಸಿಬಿ ತಂಡದ ಆಟಗಾರರು ಮೈದಾನದಲ್ಲಿ ಅಭ್ಯಾಸ ಮಾಡುವುದನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳುವ ಅವಕಾಶವೂ ಸಿಕ್ಕಿತು. ನಂತರ, ನಾಯಕ ಫಾಫ್ ಡು ಪ್ಲೆಸಿಸ್ ಅವರು ಅಭಿಮಾನಿಗಳೊಂದಿಗೆ ಸಂವಹನ ನಡೆಸುವುದನ್ನು ಮತ್ತು ಫೋಟೋಗಳನ್ನು ಕ್ಲಿಕ್ ಮಾಡುವುದು ಮತ್ತು ಹಲವು ಅಭಿಮಾನಿಗಳಿಗೆ ಆಟೋಗ್ರಾಫ್ ಹಾಕುವುದು ಕಂಡುಬಂತು.

ಕೋವಿಡ್-19 ರೋಗದ ನಂತರ ಸುಮಾರು ನಾಲ್ಕು ವರ್ಷಗಳ ಬಳಿಕ ಮೊದಲ ಬಾರಿಗೆ ಆರ್‌ಸಿಬಿ ತಂಡ ತವರಿನ ಮೈದಾನ ಎಂ ಚಿನ್ನಸ್ವಾಮಿ ಸ್ಟೇಡಿಯಂಗೆ ಮರಳಿತು. ಇದೇ ವೇಳೆ ವಿರಾಟ್ ಕೊಹ್ಲಿ ಸೇರಿದಂತೆ ಆರ್‌ಸಿಬಿ ಆಟಗಾರರು ಮೈದಾನಕ್ಕೆ ಬರುತ್ತಿದ್ದಂತೆ ಅಭಿಮಾನಿಗಳಿಂದ ಭಾರೀ ಕರತಾಡನ ಮತ್ತು ಹರ್ಷೋದ್ಗಾರ ಕೇಳಿಬಂತು.
ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಪರಸ್ಪರ ಭೇಟಿಯಾದ ನಂತರ ದೀರ್ಘ ಸಮಾಲೋಚನೆ ನಡೆಸಿದರು. ಅವರು ನಗುತ್ತಾ ಮಾತನಾಡುತ್ತಿರುವ ವೀಡಿಯೊ ತಕ್ಷಣವೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು.
ಈ ಮಧ್ಯೆ ಆರ್‌ಸಿಬಿ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದ್ದು, ತಂಡದ ಮ್ಯಾನೇಜ್‌ಮೆಂಟ್ ಎಲ್ಲದರ ನಡುವೆ ಜೋಶ್ ಹ್ಯಾಜಲ್‌ವುಡ್ ಮತ್ತು ರಜತ್ ಪಾಟಿದಾರ್ ಮೇಲೆ ಕಣ್ಣಿಡಬೇಕಾಗಿದೆ. ರಜತ್ ಪಾಟಿದಾರ್ ಪ್ರಸ್ತುತ ಹಿಮ್ಮಡಿ ಗಾಯದಿಂದ ಬಳಲುತ್ತಿದ್ದು, ಕನಿಷ್ಠ 6ರಿಂದ 7 ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಇನ್ನು ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ ಅವರ ಗಾಯದ ಬಗ್ಗೆ ಇನ್ನೂ ಯಾವುದೇ ಅಪ್‌ಡೇಟ್ ಸಿಕ್ಕಿಲ್ಲ. ಹೀಗಾಗಿ ಅವರು ಪಂದ್ಯಾವಳಿ ತಪ್ಪಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.
ಶ್ರೀಲಂಕಾದ ವನಿಂದು ಹಸರಂಗ ಅವರು ರಾಷ್ಟ್ರೀಯ ತಂಡದ ಬದ್ಧತೆಗಳ ಕಾರಣದಿಂದ ಒಂದೆರಡು ಪಂದ್ಯಗಳನ್ನು ಕಳೆದುಕೊಳ್ಳುತ್ತಾರೆ. ಏಪ್ರಿಲ್ ಎರಡನೇ ವಾರದಲ್ಲಿ ಅರ್‌ಸಿಬಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications