ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಸತತ ಎರಡು ಗೆಲುವು ಸಾಧಿಸಿರುವ ಆರ್‌ಸಿಬಿ ತಂಡ ತವರಿನಲ್ಲಿ ಮತ್ತೊಂದು ಗೆಲುವು ಕಾಣುವ ಆತ್ಮವಿಶ್ವಾಸದಲ್ಲಿದೆ. ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸೋಲಿನ ಮೇಲೆ ಸೋಲು ಅನುಭವಿಸುತ್ತಿದ್ದು ಈ ಸೋಲಿನ ಸರಪಳಿಯಿಂದ ಹೊರಬರಲು ಆರ್‌ಸಿಬಿ ವಿರುದ್ಧ ಗೆಲುವಿಗಾಗಿ ಎದುರುನೋಡುತ್ತಿದೆ.
ಕಳೆದ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ತಂಡ ಭರ್ಜರಿ ಗೆಲುವು ಸಾಧಿಸಿದ್ದು ಅಂಕಪಟ್ಟಿಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಪ್ರಸ್ತುತ ಆಡಿರುವ 7 ಪಂದ್ಯಗಳಲ್ಲಿ ಆರ್‌ಸಿಬಿ ತಂಡ 4 ಗೆಲುವು ಸಾಧಿಸಿದ್ದು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಆಡಿರುವ 7 ಪಂದ್ಯಗಳಲ್ಲಿ ಕೇವಲ 2 ಪಂದ್ಯದಲ್ಲಿ ಮಾತ್ರವೇ ಗೆದ್ದುಕೊಂಡಿದೆ. ಅದರಲ್ಲೂ ಕಳೆದ ನಾಲ್ಕು ಪಂದ್ಯಗಳಲ್ಲಿ ಕೆಕೆಆರ್ ತಂಡ ಗೆಲುವಿನ ರುಚಿಯನ್ನೇ ಕಂಡಿಲ್ಲ. ಹೀಗಾಗಿ ಈ ಪಂದ್ಯದ ಗೆಲುವು ಕೆಕೆಆರ್ ತಂಡಕ್ಕೆ ಬಹಳ ಮುಖ್ಯವಾಗಿದೆ.

ಅಗ್ರ ಕ್ರಮಾಂಕವನ್ನು ಆಧರಿಸಿದೆ ಆರ್‌ಸಿಬಿ ಬ್ಯಾಟಿಂಗ್ ವಿಭಾಗ
ಆರ್‌ಸಿಬಿ ತಂಡದ ದೊಡ್ಡ ಶಕ್ತೊಯೆಂದರೆ ಬಲಿಷ್ಠ ಅಗ್ರ ಕ್ರಮಾಂಕ. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಈ ಮೂವರಿಂದ ಅದ್ಭುತ ಪ್ರದರ್ಶನ ವ್ಯಕ್ತವಾಗುತ್ತಿದೆ. ಆದರೆ ಈ ಇವರನ್ನು ಹೊರತುಪಡಿಸಿದರೆ ಉಳಿದ ಆಟಗಾರರ ಪ್ರದರ್ಶನ ಅತ್ಯಂತ ಹೀನಾಯವಾಗಿದೆ. ಸಂಪೂರ್ಣವಾಗಿ ಈ ಮೂವರನ್ನು ನೆಚ್ಚಿಕೊಂಡಿರುವುದು ಆರ್‌ಸಿಬಿ ತಂಡದ ದೌರ್ಬಲ್ಯವೂ ಹೌದು. ಹೀಗಾಘಿ ಮಧ್ಯಮ ಕ್ರಮಾಂಕದ ಆಟಗಾರರು ಜವಾಬ್ಧಾರಿ ಹೋರುವುದು ಅನಿವಾರ್ಯವಾಗಿದೆ.
ಬೌಲಿಂಗ್‌ನಲ್ಲಿ ಸಿರಾಜ್‌ಗೆ ಬೇಕು ಮತ್ತಷ್ಟು ಬೆಂಬಲ
ಇನ್ನು ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗದಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಆರ್‌ಸಿಬಿ ತಂಡ ಪವರ್‌ಪ್ಲೇನಲ್ಲಿ ಸತತವಾಗಿ ಯಶಸ್ಸು ಸಾಧಿಸಲು ಇದರಿಂದಾಗಿ ಸಾಧ್ಯವಾಗುತ್ತಿದೆ. ಉಳಿದ ಬೌಲರ್‌ಗಳಿಂದ ಸ್ಥಿರ ಪ್ರದರ್ಶನ ಬಾರದಿರುವುದು ನಾಯಕನ ಚಿಂತೆ ಹೆಚ್ಚಿಸಿದೆ. ಕಳೆದ ಪಂದ್ಯದಲ್ಲಿ ಹರ್ಷಲ್ ಪಟೇಲ್ ಅವರಿಂದ ಅದ್ಭುತ ಪ್ರದರ್ಶನ ಬಂದಿರುವುದು ತಂಡಕ್ಕೆ ಸಮಾಧಾನ ತಂದಿದೆ. ಇನ್ನು ಸ್ಪಿನ್ ವಿಭಾಗದಲ್ಲಿ ಹಸರಂಗ ಅವರಿಂದ ಮತ್ತಷ್ಟು ತೀಕ್ಷ್ಣ ದಾಳಿಯ ಅನಿವಾರ್ಯತೆಯಿದೆ.
ಸಂಘಟಿತ ಪ್ರದರ್ಶನ ನೀಡಲು ವಿಫಲವಾಗುತ್ತಿದೆ ಕೆಕೆಆರ್
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಒಟ್ಟಾರೆಯಾಗಿ ಎಲ್ಲಾ ವಿಭಾಗದಲ್ಲಿಯೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಒಂದು ಸ್ಥೊರವಾದ ಆಡುವ ಬಳಗವನ್ನು ಸಿದ್ಧಪಡಿಸಲು ಮ್ಯಾನೇಜ್‌ಮೆಂಟ್ ವಿಫಲವಾಗಿರುವುದು ಸಹಜವಾಗಿಯೇ ಅಚ್ಚರಿ ಮೂಡಿಸಿದೆ. ಸಾಕಷ್ಟು ಬದಲಾವಣೆಗಳು ಕೂಡ ತಂಡದಲ್ಲಿ ಮಾಡಲಾಗುತ್ತಿದ್ದು ಇದು ಕೂಡ ತಂಡದ ಪ್ರದರ್ಶನದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಮಹಿಪಾಲ್ ಲೋಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಮೈಕೆಲ್ ಬ್ರೇಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಡೇವಿಡ್ ವಿಲ್ಲಿ, ಫಿನ್ ಅಲೆನ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಆಕಾಶ್ ದೀಪ್, ಅವಿನಾಶ್ ಸಿಂಗ್, ಜೋಶ್ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ರಾಜನ್ ಕುಮಾರ್, ಹಿಮಾಂಶು ಶರ್ಮಾ, ಕರ್ಣ್ ಶರ್ಮಾ, ಸೋನು ಯಾದವ್
ಕೊಲ್ಕತ್ತಾ ನೈಟ್ ರೈಡರ್ಸ್: ನಿತೀಶ್ ರಾಣಾ (ನಾಯಕ), ವರುಣ್ ಚಕ್ರವರ್ತಿ, ಲಾಕಿ ಫರ್ಗುಸನ್, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಹರ್ಷಿತ್ ರಾಣಾ, ಅನುಕುಲ್ ರಾಯ್, ಆಂಡ್ರೆ ರಸೆಲ್, ರಿಂಕು ಸಿಂಗ್, ಟಿಮ್ ಸೌಥಿ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ವೈಭವ್ ಅರೋರಾ, ಎನ್ ಜಗದೀಸನ್, ಸುಯಶ್ ಶರ್ಮಾ, ಡೇವಿಡ್ ವೈಸ್, ಕುಲ್ವಂತ್ ಖೆಜ್ರೋಲಿಯಾ, ಲಿಟನ್ ದಾಸ್, ಮನ್‌ದೀಪ್ ಸಿಂಗ್, ಜೇಸನ್ ರಾಯ್, ಆರ್ಯ ದೇಸಾಯಿ