For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ, ತೆಂಡೂಲ್ಕರ್ ಸಮಕ್ಕೆ ಏರಬಲ್ಲ ಆಟಗಾರ ಈತ: ಯುವ ಕ್ರಿಕೆಟಿಗನ ಬಗ್ಗೆ ಕನ್ನಡಿಗ ಉತ್ತಪ್ಪ ಭವಿಷ್ಯ

ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿ ಕೊನೆಯ ಘಟ್ಟವನ್ನು ತಲುಪಿದೆ. ಇನ್ನು ಕೇವಲ ಬೆರಳೆಣಿಕೆಯ ಪಂದ್ಯಗಳು ಮಾತ್ರವೇ ಈ ಐಪಿಎಲ್‌ನಲ್ಲಿ ಬಾಕಿಯಿದೆ. ಈ ಹಂತದಲ್ಲಿ ಪ್ರತಿ ಪಂದ್ಯದ ಫಲಿತಾಂಶ ಕೂಡ ನಿರ್ಣಾಯಕವಾಗಿದ್ದು ಕುತೂಹಲ ಹೆಚ್ಚಿಸಿದೆ. ಆದರೆ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ ಮಾತ್ರ ಈಗಾಗಲೇ ಪ್ಲೇ ಸುತ್ತಿನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು ಸತತ ಎರಡನೇ ಆವೃತ್ತಿಯಲ್ಲಿಯೂ ಪಾರಮ್ಯ ಮೆರೆದಿದೆ.

ಈ ಸಂದರ್ಭದಲ್ಲಿ ಗುಜರಾತ್ ಟೈಟನ್ಸ್ ತಂಡದ ಓರ್ವ ಯುವ ಆಟಗಾರನ ಬಗ್ಗೆ ಕನ್ನಡಿಗ ರಾಬಿನ್ ಉತ್ತಪ್ಪ ವಿಶೇಷ ಮಾತುಗಳನ್ನಾಡಿದ್ದು ಭವಿಷ್ಯದ ಸೂಪರ್ ಸ್ಟಾರ್ ಎಂದಿದ್ದಾರೆ. ಈ ಯುವ ಆಟಗಾರ ಭಾರತ ಕ್ರಿಕೆಟ್‌ನ ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಏರಿರುವ ಸ್ಥಾನಕ್ಕೆ ತಲುಪುವ ಸಾಮರ್ಥ್ಯ ಹೊಂದಿರುವ ಆಟಗಾರ ಎಂದಿದ್ದಾರೆ ರಾಬಿನ್ ಉತ್ತಪ್ಪ.

IPL 2023: Robin Uthappa praises Shubman Gill said he will be big player like Sachin Tendulkar and Virat Kohli

ಉತ್ತಪ್ಪ ಹೇಳಿದ ಆ ಯುವ ಆಟಗಾರ ಯಾರು?

ರಾಬಿನ್ ಉತ್ತಪ್ಪ ಹೇಳಿದ ಆ ಯುವ ಆಟಗಾರ ಬೇರೆ ಯಾರೂ ಅಲ್ಲ. ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಆಟಗಾರ ಶುಬ್ಮನ್ ಗಿಲ್. ಈ ವರ್ಷ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿಯೂ ಅಮೋಘ ಪ್ರದರ್ಶನ ನೀಡಿರುವ ಶುಬ್ಮನ್ ಗಿಲ್ ತಮ್ಮ ಫಾರ್ಮ್‌ಅನ್ನು ಐಪಿಎಲ್‌ನಲ್ಲಿಯೂ ಮುಂದುವರಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಪರವಾಗಿ ಭರ್ಜರಿ ಶತಕ ಸಿಡಿಸಿದ ಗಿಲ್ ಐಪಿಎಲ್‌ನಲ್ಲಿ ಜಿಟಿ ಪರವಾಗಿ ಶತಕ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ದಿಗ್ಗಜ ಆಟಗಾರರ ಸ್ಥಾನಕ್ಕೇರುವ ಸಾಮರ್ಥ್ಯವಿದೆ

ಇನ್ನು ಈ ಸಂದರ್ಭದಲ್ಲಿ ಶುಬ್ಮನ್ ಗಿಲ್ ಆಟದ ಬಗ್ಗೆ ಮಾತನಾಡಿದ ರಾಬಿನ್ ಉತ್ತಪ್ಪ ಯುವ ಆಟಗಾರ ಭಾರತದ ಕ್ರಿಕೆಟ್ ದಿಗ್ಗಜರು ಎನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಏರಿರುವ ಸ್ಥಾನವನ್ನು ಏರುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ ಎಂದಿದ್ದಾರೆ ಉತ್ತಪ್ಪ. "ಖಮಡಿತವಾಗಿಯೂ ಶುಬ್ಮನ್ ಗಿಲ್ ಅವರಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಏರಿರುವ ಸ್ಥಾನವನ್ನು ಏರುವ ಸಾಮರ್ಥ್ಯವನ್ನು ನಾನು ನೋಡುತ್ತಿದ್ದೇನೆ. ಆತನಲ್ಲಿ ಅಂಥಾ ಸಾಮರ್ಥ್ಯ ಖಂಡಿತಾ ಇದೆ. ಆತನೋರ್ವ ಅದ್ಭುತವಾದ ಆಟಗಾರನಾಗಿದ್ದು ಆತನ ಫಾರ್ಮ್ ಹಾಗೂ ಕೌಶಲ್ಯ ಕೂಡ ವಿಶೇಷವಾಗಿದೆ" ಎಂದಿದ್ದಾರೆ ಶುಬ್ಮನ್ ಗಿಲ್.

ಇವರಿಬ್ಬರು ಭವಿಷ್ಯದ ದೊಡ್ಡ ಆಟಗಾರರು

ಇನ್ನು ಇದೇ ಸಂದರ್ಭದಲ್ಲಿ ರಾಬಿನ್ ಉತ್ತಪ್ಪ ಯಶಸ್ವಿ ಜೈಸ್ವಾಲ್ ಬಗ್ಗೆಯೂ ವಿಶೇಷ ಮಾತುಗಳನ್ನಾಡಿದ್ದಾರೆ. ಯಶಸ್ವಿ ಜೈಸ್ವಾಲ್ ಹಾಗೂ ಶುಬ್ಮನ್ ಗಿಲ್ ಇಬ್ಬರು ಕೂಡ ಭವಿಷ್ಯದ ಬಲಿಷ್ಠ ಆಟಗಾರರಾಗುವ ಸಾಮರ್ಥ್ಯಹೊಂದಿರುವ ಕ್ರಿಕೆಟಿಗರು ಎಂದಿದ್ದಾರೆ. ಯಶಸ್ವಿ ಜೈಸ್ವಾಲ್ ಕೂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನಿಡುತ್ತಿದ್ದು ಆರ್‌ಆರ್ ಪರವಾಗಿ ಅತ್ಯಂತ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ವರ್ಷದ ಮೊದಲಾರ್ಧದಲ್ಲಿ ಅಬ್ಬರಿಸಿದ್ದಾರೆ ಗಿಲ್

ಇನ್ನು ಈ ಕ್ಯಾಲೆಂಡರ್ಸ್ ವರ್ಷದಲ್ಲಿಶುಬ್ಮನ್ ಗಿಲ್ ಅದೆಂಥಾ ಅದ್ಭುತ ಫಾರ್ಮ್‌ನಲ್ಲಿದ್ದಾರೆಂದರೆ ಎಂಬುದನ್ನು ಈ ಅಂಕಿಅಂಶಗಳೇ ಹೆಳುತ್ತಿವೆ. ಈ ವರ್ಷದ ಮೊದಲ ಐದೂವರೆ ವರ್ಷದಲ್ಲಿ ಗಿಲ್ ಬರೊಬ್ಬರಿ ಆರು ಶತಕ ಸಿಡಿಸಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಮಾದರಿಯಲ್ಲಿ ಮೂರು ಶತಕ ಸಿಡಿಸಿದ್ದರೆ ಒಂದು ಶತಕ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ದಾಖಲಾಗಿದೆ. ಇನ್ನೊಂದು ಶತಕ ಟೆಸ್ಟ್ ಮಾದರಿಯಲ್ಲಿ ದಾಖಲಿಸಿರುವ ಗಿಲ್ ಇದೀಗ ಟಿ20 ಮಾದರಿಯಲ್ಲಿಯೂ ಅಬ್ಬರಿಸಿದ್ದಾರೆ.

Story first published: Thursday, May 18, 2023, 11:24 [IST]
Other articles published on May 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+