Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಐಪಿಎಲ್‌ಗಾಗಿ ಸಿಎಸ್‌ಕೆ ನಾಯಕ ಎಂಎಸ್‌ ಧೋನಿ ಬ್ಯಾಟಿಂಗ್ ಅಭ್ಯಾಸ

IPL 2023: The Preparation Has Started For CSK Skipper MS Dhoni Ahead Of IPL

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಆರಂಭಕ್ಕೆ ಇನ್ನೂ ಎರಡು ಎರಡೂವರೆ ತಿಂಗಳಿರುವಾಗಲೇ ಧೋನಿ ಅಭ್ಯಾಸ ಆರಂಭಿಸಿದ್ದಾರೆ. ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದೆ.

2022 ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಐಪಿಎಲ್‌ ಅನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. 2023ರ ಮಿನಿ ಐಪಿಎಲ್‌ನಲ್ಲಿ ಅವರು ಇಂಗ್ಲೆಂಡ್ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿರುವುದು ತಂಡದ ಶಕ್ತಿಯನ್ನು ಹೆಚ್ಚಿಸಿದೆ.

ಕಳೆದ ಆವೃತ್ತಿಯಲ್ಲಿ ರವೀಂದ್ರ ಜಡೇಜಾ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಆದರೆ ಅವರ ನಾಯಕತ್ವದಲ್ಲಿ ಸಿಎಸ್‌ಕೆ ಉತ್ತಮ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲವಾಯಿತು. ಟೂರ್ನಿಯ ಮಧ್ಯದಲ್ಲೇ ರವೀಂದ್ರ ಜಡೇಜಾ ನಾಯಕತ್ವವನ್ನು ತೊರೆದರು, ಮತ್ತೆ ಎಂಎಸ್ ಧೋನಿ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡರು. ಆದರೂ ತಂಡದ ಪ್ರದರ್ಶನ ಸುಧಾರಿಸಲಿಲ್ಲ.

2022 ಆವೃತ್ತಿಯಲ್ಲಿ ಸಿಎಸ್‌ಕೆ ಆಡಿದ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. 2023ರ ಐಪಿಎಲ್‌ ಬಳಿಕ ಧೋನಿ ನಿವೃತ್ತಿ ಘೋಷಿಸಲಿದ್ದು ಕಪ್‌ ಗೆಲ್ಲುವ ಮೂಲಕ ವಿದಾಯ ಹೇಳುವ ಉದ್ದೇಶ ಹೊಂದಿದ್ದಾರೆ.

ಬಲಿಷ್ಠವಾಗಿದೆ ಚೆನ್ನೈ ತಂಡ

2022ರ ಆವೃತ್ತಿಯ ಸೋಲಿನ ನಂತರ ಸಿಎಸ್‌ಕೆ ತಂಡದಲ್ಲಿ ಹಲವು ಬದಲಾವಣೆ ಮಾಡಿದೆ. 2023ರ ಐಪಿಎಲ್‌ ಹರಾಜಿನಲ್ಲಿ ಉತ್ತಮ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಬೆನ್‌ ಸ್ಟೋಕ್ಸ್ ತಂಡಕ್ಕೆ ಸೇರಿದ್ದರಿಂದ ರವೀಂದ್ರ ಜಡೇಜಾ ಜೊತೆಗೆ ಮತ್ತೊಬ್ಬ ಪ್ರಮುಖ ಆಲ್‌ರೌಂಡರ್ ಸಿಕ್ಕಂತಾಗಿದೆ.

ಅಜಿಂಕ್ಯ ರಹಾನೆ, ಬೆನ್‌ ಸ್ಟೋಕ್ಸ್, ಶೈಕ್ ರಶೀದ್, ನಿಶಾಂತ್ ಸಿಂದು, ಕೈಲ್ ಜೇಮಿಸನ್, ಅಜಯ್ ಮಂಡಲ್‌, ಭಗತ್ ವರ್ಮಾ ಹೊಸದಾಗಿ ಸಿಎಸ್‌ಕೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

IPL 2023: The Preparation Has Started For CSK Skipper MS Dhoni Ahead Of IPL

ಹಳೇ ಮಾದರಿಗೆ ಮರಳಿದ ಐಪಿಎಲ್

ಕೊರೊನಾ ಕಾರಣದಿಂದಾಗಿ ಕಳೆದ 3 ಆವೃತ್ತಿಗಳು ಐಪಿಎಲ್‌ ಕೆಲವು ಕ್ರೀಡಾಂಗಣದಲ್ಲಿ ಮಾತ್ರ ಆಯೋಜನೆ ಮಾಡಲಾಗಿತ್ತು. 2020ರ ನಂತರ ಇದೇ ಮೊದಲ ಬಾರಿಗೆ ತವರಿನಲ್ಲಿ ಮತ್ತು ಹೊರಗಡೆ ಪಂದ್ಯಗಳು ನಡೆಯಲಿದೆ. ಸಿಎಸ್‌ಕೆ ಅಭಿಮಾನಿಗಳು ಚೆಪಾಕ್‌ನಲ್ಲಿ ಧೋನಿ ಆಟವನ್ನು ನೋಡಲು ಕಾತರದಿಂದ ಕಾಯುತ್ತಿದ್ದು, ಈ ಬಾರಿ ಅಭಿಮಾನಿಗಳ ಆಸೆ ನೆರವೇರಲಿದೆ.

2023ರ ಐಪಿಎಲ್‌ಗಾಗಿ ಧೋನಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವುದನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಬಾರಿಯ ಕಪ್ ಗೆಲ್ಲಲು ಸಿಎಸ್‌ಕೆ ಸಾಕಷ್ಟು ತಯಾರಿಯನ್ನು ಮಾಡಿಕೊಳ್ಳುತ್ತಿದೆ.

Story first published: Thursday, January 19, 2023, 22:03 [IST]
Other articles published on Jan 19, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+