For Quick Alerts
ALLOW NOTIFICATIONS  
For Daily Alerts
 

IPL 2023: ಕೊಹ್ಲಿ, ಮ್ಯಾಕ್ಸ್‌ವೆಲ್ ಅಲ್ಲ, 2023ರ ಐಪಿಎಲ್‌ನಲ್ಲಿ ಮಿಂಚಬಹುದಾದ ಆರ್‌ಸಿಬಿ ಆಟಗಾರರು ಇವರು

IPL 2023: These 3 Players Can Make Big Impact For RCB In Indian Premier League 2023

2022ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಹೊಂದಿದ್ದಾಗಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ಲೇ ಆಫ್ ಪ್ರವೇಶಿಸಿತ್ತು.

2023ರ ಮಿನಿ ಹರಾಜಿಗೆ ಮುನ್ನ ಆರ್‌ಸಿಬಿ ಯಾವುದೇ ಪ್ರಮುಖ ಬದಲಾವಣೆಯನ್ನು ಮಾಡಿಲ್ಲ. ತಂಡ ಈಗಾಗಲೇ ಸ್ಥಿರವಾಗಿರುವುದರಿಂದ ಮಿನಿ ಹರಾಜಿನಲ್ಲಿ ಕೂಡ ಆರ್‌ಸಿಬಿ ಯಾವ ಆಟಗಾರನನ್ನು ಖರೀದಿ ಮಾಡಲು ಮುಂದಾಗುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.

ಮುಂಬೈ ಇಂಡಿಯನ್ಸ್‌ಗೆ ಜೇಸನ್ ಬೆಹ್ರೆನ್‌ಡಾರ್ಫ್ ಅವರನ್ನು ಟ್ರೇಡ್ ಮಾಡುವುದನ್ನು ಹೊರತುಪಡಿಸಿ, ಆರ್‌ಸಿಬಿ ನಾಲ್ವರು ಆಟಗಾರರನ್ನು ಮಾತ್ರ ಬಿಡುಗಡೆ ಮಾಡಿದೆ. ಫಾಫ್ ಡುಪ್ಲೆಸಿಸ್ ನೇತೃತ್ವದಲ್ಲಿ ತಂಡ ಈಗಾಗಲೇ ಬಲಿಷ್ಠವಾಗಿದೆ. ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿದ್ದಾರೆ, ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಐಪಿಎಲ್ ಆರಂಭಕ್ಕೆ ಮುನ್ನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಿದ್ದಾರೆ.

ಈ ದೊಡ್ಡ ಆಟಗಾರರನ್ನು ಹೊರತುಪಡಿಸಿ ಕೂಡ ತಂಡದಲ್ಲಿ ಇತರೆ ಆಟಗಾರರು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಸ್ಟಾರ್ ಆಟಗಾರರ ಹೊರತಾಗಿ ಈ ಮೂವರು ಆಟಗಾರರು ಅತ್ಯುತ್ತಮ ಪ್ರದರ್ಶನ ಮೂಲಕ ಆರ್‌ಸಿಬಿ ತಂಡದಲ್ಲಿ ಸಾಕಷ್ಟು ಪ್ರಭಾವ ಬೀರುವ ಅವಕಾಶ ಹೊಂದಿದ್ದಾರೆ.

ಫಾರ್ಮ್ ಮುಂದುವರೆಸುವ ವಿಶ್ವಾಸದಲ್ಲಿ ಪಾಟಿದಾರ್

ಫಾರ್ಮ್ ಮುಂದುವರೆಸುವ ವಿಶ್ವಾಸದಲ್ಲಿ ಪಾಟಿದಾರ್

2021 ರಲ್ಲಿ ಆರ್‌ಸಿಬಿ ಪರವಾಗಿ ಕೇವಲ 2 ಪಂದ್ಯಗಳನ್ನು ಆಡಿದ್ದ ರಜತ್ ಪಾಟಿದಾರ್ ಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ ಆಡಿದ್ದರು. 4 ಪಂದ್ಯಗಳಿಂದ ಕೇವಲ 71 ರನ್ ಗಳಿಸಿದ್ದ ಅವರು ಹೆಚ್ಚಿನ ಪ್ರಭಾವ ಬೀರುವಲ್ಲಿ ವಿಫಲವಾಗಿದ್ದರು.

ಅದಾದ ನಂತರ 2022ರ ಐಪಿಎಲ್‌ನಲ್ಲಿ ಗಾಯಾಳು ಲುವ್ನಿತ್ ಸಿಸೋಡಿಯಾಗೆ ಬದಲಾಗಿ 20 ಲಕ್ಷ ರುಪಾಯಿಗೆ ತಂಡಕ್ಕೆ ಸೇರ್ಪಡೆಯಾದರು. ಅದೃಷ್ಟದ ಮೂಲಕ ತಂಡ ಸೇರಿಕೊಂಡ ಪಾಟಿದಾರ್, ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ತಂಡದ ಮುಖ್ಯ ಆಟಗಾರನಿಗೆ ರೂಪುಗೊಂಡರು.

2022ರ ಐಪಿಎಲ್‌ನಲ್ಲಿ ರಜತ್ 8 ಪಂದ್ಯಗಳನ್ನಾಡಿದ್ದು, 55.5 ಸರಾಸರಿಯಲ್ಲಿ ಮತ್ತು 152.75 ರ ಸ್ಟ್ರೈಕ್ ರೇಟ್‌ನಲ್ಲಿ 333 ರನ್ ಗಳಿಸಿದರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಎಲಿಮಿನೇಟರ್‌ನಲ್ಲಿ ಶತಕ ಸಿಡಿಸುವ ಮೂಲಕ ಸಾಮರ್ಥ್ಯ ಸಾಬೀತುಪಡಿಸಿದರು. ದೇಶೀಯ ಕ್ರಿಕೆಟ್‌ನಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿರುವ ರಜತ್ ಪಾಟಿದಾರ್, ಇನ್ನೂ ಭಾರತದ ಪರವಾಗಿ ಆಡುವ ಅವಕಾಶವನ್ನು ಪಡೆದುಕೊಂಡಿಲ್ಲ. 2023ರ ಐಪಿಎಲ್‌ನಲ್ಲಿ ಪಾಟಿದಾರ್ ಪಂದ್ಯವನ್ನು ಗೆಲ್ಲಿಸಿಕೊಡುವ ಪ್ರಮುಖ ಆಟಗಾರನಾಗಲಿದ್ದಾರೆ.

Ind vs Ban 3rd ODI : 227 ರನ್‌ಗಳ ಬೃಹತ್ ಜಯ ಸಾಧಿಸಿದ ಟೀಂ ಇಂಡಿಯಾ

ಪ್ರಮುಖ ಬೌಲರ್ ಆಗಲಿರುವ ಡೇವಿಡ್ ವಿಲ್ಲೇ

ಪ್ರಮುಖ ಬೌಲರ್ ಆಗಲಿರುವ ಡೇವಿಡ್ ವಿಲ್ಲೇ

2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಡೇವಿಡ್ ವಿಲ್ಲೇ ಮೂಲ ಬೆಲೆ 2 ಕೋಟಿ ರುಪಾಯಿಗೆ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾದರು. ಆರಂಭದ 4 ಪಂದ್ಯಗಳಲ್ಲಿ ಆಡಿದ ವಿಲ್ಲೇ, 6.55ರ ಎಕಾನಮಿಯಲ್ಲಿ ಒಂದು ವಿಕೆಟ್ ಪಡೆದರು ಮತ್ತು 18 ರನ್ ಗಳಿಸಿದರು.

ಇಂಗ್ಲೆಂಡ್ ಪರವಾಗಿ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ವಿಲ್ಲೇ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬೆಹ್ರೆನ್‌ಡಾರ್ಫ್ ಮತ್ತು ಚಾಮಾ ಮಿಲಿಂದ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದ ನಂತರ, ಉಳಿದಿರುವ ಏಕೈಕ ಎಡಗೈ ವೇಗಿ ಡೇವಿಡ್ ವಿಲ್ಲೇ, ಬೌಲಿಂಗ್ ಮಾತ್ರವಲ್ಲ ಬ್ಯಾಟಿಂಗ್‌ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ.

ಫಾಫ್ ಡು ಪ್ಲೆಸಿಸ್, ಜೋಶ್ ಹ್ಯಾಜಲ್‌ವುಡ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವನಿಂದು ಹಸರಂಗ ತಂಡದ ಆಡುವ ಬಳಗದಲ್ಲಿ ಇರುವುದು ಖಚಿತವಾದರೂ, ಡೇವಿಡ್ ವಿಲ್ಲೇ ಪ್ರಭಾವಿ ಆಟಗಾರನಾಗಿ ತಂಡಕ್ಕೆ ಉತ್ತಮ ಆಯ್ಕೆಯಾಗಲಿದ್ದಾರೆ. ತಂಡಕ್ಕೆ ಯಾವಾಗಲೂ ಉತ್ತಮ ಬ್ಯಾಕ್ ಅಪ್ ಆಯ್ಕೆಯಾಗಿರುತ್ತಾರೆ.

ಆಲ್‌ರೌಂಡರ್ ಮಹಿಪಾಲ್ ಲೋಮ್ರೋರ್

ಆಲ್‌ರೌಂಡರ್ ಮಹಿಪಾಲ್ ಲೋಮ್ರೋರ್

ಆರ್‌ಸಿಬಿ ತಂಡದ ಪ್ರಮುಖ ಆಲ್‌ರೌಂಡರ್ ಮಹಿಪಾಲ್ ಲೋಮ್ರೋರ್, ಎಡಗೈ ಸ್ಪಿನ್ ಮತ್ತು ಲೆಗ್ ಸ್ಪಿನ್ ವಿರುದ್ಧ ಉತ್ತಮವಾಗಿ ಆಡುವ ಸಾಮರ್ಥ್ಯವನ್ನು ಹೊಂದಿರುವ ಲೋಮ್ರೋರ್ ತಂಡದ ಬಿಗ್‌ ಹಿಟ್ಟರ್ ಗಳಲ್ಲಿ ಒಬ್ಬರಾಗಿದ್ದಾರೆ. ಕಳೆದ ಋತುವಿನಲ್ಲಿ 7 ಪಂದ್ಯಗಳನ್ನಾಡಿದ ಅವರು 150.88 ಸ್ಟ್ರೈಕ್‌ರೇಟ್‌ನಲ್ಲಿ 86 ರನ್ ಗಳಿಸಿದರು.

ದೇಶೀಯ ಕ್ರಿಕೆಟ್‌ನಲ್ಲಿ ರಾಜಸ್ಥಾನದ ಪರವಾಗಿ ಉತ್ತಮ ಪ್ರದರ್ಶನ ನೀಡಿರುವ ಮಹಿಪಾಲ್ ಲೋಮ್ರೋರ್ ಸದ್ಯ ಫಾರ್ಮ್‌ನಲ್ಲಿರುವ ಆಟಗಾರ. ಶಹಬಾಜ್ ಅಹ್ಮದ್‌ಗೆ ತಂಡದಲ್ಲಿ ಮೊದಲ ಪ್ರಾಮುಖ್ಯತೆ ನೀಡಿದರೂ, ಅವರು ವಿಫಲವಾದರೆ, ಲೋಮ್ರೋರ್ ಖಂಡಿತವಾಗಿಯೂ ಉತ್ತಮ ಆಯ್ಕೆಯಾಗಲಿದ್ದಾರೆ. ಲೋಮ್ರೋರ್ ಪಂದ್ಯದ ಫಲಿತಾಂಶವನ್ನೇ ಬದಲಿಸು ಸಾಮರ್ಥ್ಯ ಹೊಂದಿರುವ ಆಟಗಾರ.

Story first published: Saturday, December 10, 2022, 21:43 [IST]
Other articles published on Dec 10, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+