IPL Mini Auction 2023 : ಆರ್‌ಸಿಬಿ ಸೇರಿ ಈ 3 ತಂಡಗಳು ಹರಾಜನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ; ಆಕಾಶ್ ಚೋಪ್ರಾ

2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜು ಶುಕ್ರವಾರ, ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ. ಎಲ್ಲಾ 10 ಫ್ರಾಂಚೈಸಿಗಳು ಹೊಸ ಸೀಸನ್‌ಗೆ ಮುಂಚಿತವಾಗಿ ತಮ್ಮ ತಂಡಗಳನ್ನು ಬಲಪಡಿಸಲು ಎದುರು ನೋಡುತ್ತಿವೆ.
ಈ ವರ್ಷದ ಹರಾಜು 2022ರ ಮೆಗಾ ಹರಾಜಿಗಿಂತ ಕಡಿಮೆ ಆಟಗಾರರನ್ನು ಒಳಗೊಂಡಿರುತ್ತದೆ. 991 ಆಟಗಾರರಿಂದ 405 ಆಟಗಾರರಿಗೆ ಶಾರ್ಟ್‌ಲಿಸ್ಟ್ ಆಗಿದೆ. ಇದರಲ್ಲಿ 273 ಭಾರತೀಯರು ಮತ್ತು 132 ವಿದೇಶಿ ಆಟಗಾರರು ಮತ್ತು ಸಹವರ್ತಿ ರಾಷ್ಟ್ರಗಳ ನಾಲ್ವರು ಆಟಗಾರರಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ರಾಜಸ್ಥಾನ ರಾಯಲ್ಸ್ (ಆರ್‌ಆರ್) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಈ ಮೂರು ತಂಡಗಳು ಐಪಿಎಲ್ 2023ರ ಮಿನಿ ಹರಾಜಿನಲ್ಲಿ ಗಂಭೀರ ವ್ಯವಹಾರ ನಡೆಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆರ್‌ಸಿಬಿ ಬಳಿ 8.75 ಕೋಟಿ ರೂ., ರಾಜಸ್ಥಾನ ರಾಯಲ್ಸ್ ಬಳಿ 13.2 ಕೋಟಿ ರೂ. ಮತ್ತು ಕೆಕೆಆರ್ ಬಳಿ 7.05 ಕೋಟಿ ರೂ. ಇರುವುದರಿಂದ ಮಿನಿ ಹರಾಜಿನಲ್ಲಿ ಭರ್ಜರಿ ವ್ಯಾಪಾರ ಮಾಡಲಾಗುವುದಿಲ್ಲ ಎನ್ನುವ ಆಕಾಶ್ ಚೋಪ್ರಾ ಅವರ ಹೇಳಿಕೆಯನ್ನು ಅನೇಕರು ಒಪ್ಪುತ್ತಾರೆ.

"ಆರ್‌ಸಿಬಿ, ಆರ್‌ಆರ್ ಮತ್ತು ಕೆಕೆಆರ್ ತಂಡಗಳು ದೊಡ್ಡ ಮೊತ್ತದ ಆಟಗಾರರತ್ತ ಗಮನ ಹರಿಸುವುದಿಲ್ಲ. ಅವರು ಯಾರನ್ನಾದರೂ ಖರೀದಿಸಲು ಬಯಸಿದ್ದರೂ ಸಹ, ಹೆಚ್ಚಿನ ಬಜೆಟ್ ಹೊಂದಿಲ್ಲದ ಕಾರಣ ಅವರಿಗೆ ಸಾಧ್ಯವಿಲ್ಲ," ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.
ಇನ್ನು ಆರ್‌ಸಿಬಿ ತಂಡದ ಕುರಿತು ಮಾತನಾಡಿದ ಆಕಾಶ್ ಚೋಪ್ರಾ, ಈಗಾಗಲೇ ಕಳೆದ ಋತುವಿನಿಂದ ಮಹಿಪಾಲ್ ಲೊಮ್ರೋರ್, ರಜತ್ ಪಾಟಿದಾರ್ ಮತ್ತು ಶಹಬಾಜ್ ಅಹ್ಮದ್ ಅವರಂತಹ ಸ್ಟಾರ್ ಯುವ ಆಟಗಾರರನ್ನು ಹೊಂದಿದ್ದಾರೆ. ಅಲ್ಲದೆ ಅವರು ಐಪಿಎಲ್ 2022ರ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆಂದರು.
ಇತರ ತಂಡಗಳು ಮತ್ತು ಆಟಗಾರರ ಬಗ್ಗೆ ಹೇಳುವುದಾದರೆ, ಕ್ಯಾಮರೂನ್ ಗ್ರೀನ್, ಬೆನ್ ಸ್ಟೋಕ್ಸ್ ಮತ್ತು ಸ್ಯಾಮ್ ಕರ್ರಾನ್ ಅವರಂತಹ ಪ್ರಮುಖ ಆಲ್‌ರೌಂಡರ್‌ಗಳು ಕೆಲವು ಫ್ರಾಂಚೈಸಿಗಳ ಆದ್ಯತೆಯ ಪಟ್ಟಿಯಲ್ಲಿರುತ್ತಾರೆ ಎಂದು ಆಕಾಶ್ ಚೋಪ್ರಾ ತಿಳಿಸಿದರು.

ಇದೇ ವೇಳೆ ಕಡಿಮೆ ಬಜೆಟ್ ಹೊಂದಿರುವ ತಂಡಗಳನ್ನು ಆಕರ್ಷಿಸುವ ಕೆಲವು ಅನ್‌ಕ್ಯಾಪ್ಡ್ ಆಲ್‌ರೌಂಡರ್‌ಗಳು ಇದ್ದಾರೆ. ಒಟ್ಟು 87 ಆಟಗಾರರು ವಿವಿಧ ಫ್ರಾಂಚೈಸಿಗಳ ಸ್ಲಾಟ್‌ಗಳನ್ನು ತುಂಬಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications