IPL 2023ರ ಸೀಸನ್‌ಗೆ ಈ ಐವರನ್ನು ರೀಟೈನ್ ಮಾಡಿಕೊಳ್ಳಲಿದೆ ಮುಂಬೈ ಇಂಡಿಯನ್ಸ್

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನಲ್ಲಿ ಹೀನಾಯವಾಗಿ ಸೋಲನ್ನ ಅನುಭವಿಸಿದ ಮುಂಬೈ ಇಂಡಿಯನ್ಸ್ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲೇ ಉಳಿದು ಟೂರ್ನಿಯಿಂದ ನಿರ್ಗಮಿಸಿತು. ಸತತ ಪಂದ್ಯಗಳಿಂದ ಸೋತು ಕಂಗೆಟ್ಟ ಮುಂಬೈ, ಅಂತಿಮ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಕಾಣುವ ಮೂಲಕ ಟೂರ್ನಿಯಿಂದ ನಿರ್ಗಮಿಸಿತು.
ಐಪಿಎಲ್ 2023ರ ಸೀಸನ್ ಗಮನದಲ್ಲಿಟ್ಟುಕೊಂಡು ಬಲಿಷ್ಠವಾಗಿ ಕಂಬ್ಯಾಕ್ ಮಾಡಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಈಗಿನಿಂದಲೇ ಯೋಜನೆ ರೂಪಿಸುತ್ತಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐವರು ಆಟಗಾರರನ್ನು ತನ್ನ ಬಳಿಕ ಉಳಿಸಿಕೊಳ್ಳಬಹುದು.
ಆರು ಫೈನಲ್‌ನಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಮುಂದಿನ ಸೀಸನ್‌ಗೆ ರೀಟೈನ್ ಮಾಡಿಕೊಳ್ಳಬಹುದಾದ ಐವರು ಆಟಗಾರರು ಯಾರು ಎಂಬುದನ್ನ ಈ ಕೆಳಗೆ ಕಾಣಬಹುದು.

ರೋಹಿತ್ ಶರ್ಮಾ
ಮುಂಬೈ ಇಂಡಿಯನ್ಸ್‌ನ ಮೊದಲ ಆಧ್ಯತೆ ತಂಡವನ್ನ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕ ರೋಹಿತ್ ಶರ್ಮಾ. 2011ರಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸೇರಿದ ಹಿಟ್‌ಮ್ಯಾನ್ ಅಂದಿನಿಂದಲೂ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಹೀಗಾಗಿ ಯಾವುದೇ ಅನುಮಾನವಿಲ್ಲ ಮುಂಬೈ ಇಂಡಿಯನ್ಸ್‌ನ ಮೊದಲ ಆಯ್ಕೆ ರೋಹಿತ್ ಶರ್ಮಾ ಆಗಿದ್ದಾರೆ.
ನಿನ್ನ ಕಥೆ ಮುಗಿಯಿತು ಎಂದವರಿಗೆ ಸರಿಯಾಗಿ ಉತ್ತರ ನೀಡಿದೆ: ಸಹೋದರನ ಕುರಿತು ಕೃನಾಲ್ ಪಾಂಡ್ಯ ಸಂದೇಶ

ಜಸ್ಪ್ರೀತ್ ಬುಮ್ರಾ
ಮುಂಬೈ ಇಂಡಿಯನ್ಸ್ ಬೆಸ್ಟ್ ಡೆತ್ ಬೌಲರ್ ಹಾಗೂ ಪ್ರಮುಖ ಬೌಲಿಂಗ್ ಅಸ್ತ್ರ ಜಸ್ಪ್ರೀತ್ ಬುಮ್ರಾನನ್ನು ಮುಂಬೈ ಮತ್ತೆ ರೀಟೈನ್ ಮಾಡುವುದರಲ್ಲಿ ಯಾವುದೇ ಅನುಮಾನವೇ ಇಲ್ಲ. ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್‌ಗಳನ್ನೇ ತನ್ನ ಖೆಡ್ಡಾದಲ್ಲಿ ಕೆಡವುವ ಬುಮ್ರಾ, ತನ್ನ ವಿಭಿನ್ನ ಬೌಲಿಂಗ್ ಆಕ್ಷನ್ ಜೊತೆಗೆ ವೇರಿಯೇಷನ್ ಹಾಗೂ ಯಾರ್ಕರ್‌ಗಳ ಮೂಲಕ ಬ್ಯಾಟ್ಸ್‌ಮನ್‌ಗಳನ್ನ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತದ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ವೇಳಾಪಟ್ಟಿ ಸಿದ್ಧ: ಜುಲೈ 22ರಿಂದ ಆರಂಭವಾಗಲಿದೆ ಸರಣಿ
ಬುಮ್ರಾ, 2013ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಸೇರಿದ್ದಾಗಿನಿಂದಲೂ ತನ್ನ ಅಬ್ಬರದ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನ ತಪ್ಪು ಮಾಡುವಂತೆ ಮಾಡಿದ್ದಾರೆ. ಮುಂಬೈನ ಗೆಲುವಿನ ಹಿಂದೆ ಬುಮ್ರಾ ಕೊಡುಗೆ ಸಾಕಷ್ಟಿದೆ.

ಕಿರಾನ್ ಪೊಲಾರ್ಡ್
ಐಪಿಎಲ್ 2022ರ ಸೀಸನ್‌ನಲ್ಲಿ ಕೆಟ್ಟ ಫಾರ್ಮ್‌ನಿಂದಾಗಿ ಕೊನೆಗೆ ಬೆಂಚ್ ಕಾದಿದ್ದ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಕಿರಾನ್ ಪೊಲಾರ್ಡ್ 2010ರ ಐಪಿಎಲ್ ಸೀಸನ್‌ನಿಂದಲೂ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಹೀಗಾಗಿಯೇ ಈತನನ್ನ ಪ್ರತಿ ಸೀಸನ್‌ನಲ್ಲೂ ರೀಟೈನ್ ಮಾಡಿಕೊಂಡು ಬರಲಾಗಿದೆ.
ಕಳೆದ 12 ವರ್ಷಗಳಿಂದ ಮುಂಬೈ ಇಂಡಿಯನ್ಸ್‌ನ ಕೀ ಪ್ಲೇಯರ್ ಆಗಿರುವ ಪೊಲಾರ್ಡ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅಷ್ಟು ಸುಲಭವಾಗಿ ಬಿಟ್ಟು ಕೊಡದಿರದು. ಹೀಗಾಗಿ ಮುಂದಿನ ಸೀಸನ್‌ನಲ್ಲೂ ಪೊಲಾರ್ಡ್ ಮುಂಬೈ ಜರ್ಸಿ ತೊಡುವುದರಲ್ಲಿ ಅನುಮಾನವಿಲ್ಲ.
2021ರ ಸಿಡ್ನಿ ಟೆಸ್ಟ್ ವೇಳೆ ನಡೆದಿದ್ದ ಜನಾಂಗೀಯ ನಿಂದನೆ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರಹಾನೆ

ಸೂರ್ಯಕುಮಾರ್ ಯಾದವ್
ಭಾರತದ 360 ಡಿಗ್ರಿ ಪ್ಲೇಯರ್ ಆಗಿರುವ ಸೂರ್ಯಕುಮಾರ್ ಯಾದವ್, 2018ರಲ್ಲಿ ಕೆಕೆಆರ್ ತಂಡದಿಂದ ಮುಂಬೈ ಇಂಡಿಯನ್ಸ್ ತಂಡವನ್ನ ಸೇರಿಕೊಂಡರು. ಅಂದಿನಿಂದಲೂ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಮುಂಬೈನ ಪ್ರಮುಖ ಬ್ಯಾಟರ್ ಆಗಿರುವ ಸೂರ್ಯ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲರು.
ಐಪಿಎಲ್ 2022ರ ಸೀಸನ್‌ನಲ್ಲಿ 303ರನ್ ಕಲೆಹಾಕಿದ ಸೂರ್ಯ 43.29ರ ಸರಾಸರಿ ಮತ್ತು 145.67ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಆಡಿದ ಕಡಿಮೆ ಪಂದ್ಯದಲ್ಲೇ ಮಿಂಚಿದ ಈ ಪ್ಲೇಯರ್ ಐಪಿಎಲ್ ಮಧ್ಯದಲ್ಲೇ ಗಾಯಾಳುವಾಗಿ ತಂಡದಿಂದ ಹೊರನಡೆದರು. ಆದ್ರೂ ಮುಂದಿನ ಸೀಸನ್‌ನಲ್ಲಿ ಈತ ಮುಂಬೈ ಪರ ಆಡುವುದು ಪಕ್ಕಾ ಆಗಿದೆ.

ಇಶಾನ್ ಕಿಶನ್
ಐಪಿಎಲ್ 2022ರ ಸೀಸನ್‌ನ ಹರಾಜಿನಲ್ಲಿ ಅತಿ ದುಬಾರಿ ಆಟಗಾರನಾಗಿರುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್, ಮುಂಬೈ ಇಂಡಿಯನ್ಸ್ ತಂಡಕ್ಕೆ ಬರೋಬ್ಬರಿ 15.25 ಕೋಟಿ ರೂಪಾಯಿಗೆ ಹರಾಜಾದ್ರು. ಈ ಮೂಲಕ ಸೀಸನ್‌ನ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೂ ಕಿಶನ್ ಪಾತ್ರರಾಗಿದ್ದಾರೆ.
14 ಪಂದ್ಯಗಳಲ್ಲಿ 32.83ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಇಶಾನ್ ಕಿಶನ್ 418 ರನ್ ಕಲೆಹಾಕುವ ಮೂಲಕ ಮೂರು ಅರ್ಧಶತಕ ಸಹ ಗಳಿಸಿದರು. ಆರಂಭಿಕ ಪಂದ್ಯಗಳಲ್ಲಿ ಮಿಂಚಿದ್ದ ಈ ಪ್ಲೇಯರ್ ಆನಂತರ ಮಂಕಾದರು. ಆದ್ರೂ ಕೂಡ ಯುವ ಪ್ರತಿಭಾನ್ವಿತ ವಿಕೆಟ್ ಕೀಪರ್ ಬ್ಯಾಟರ್ ಅನ್ನು ಮುಂಬೈ ಇಂಡಿಯನ್ಸ್ ತನ್ನಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications