ನಿನ್ನ ಕಥೆ ಮುಗಿಯಿತು ಎಂದವರಿಗೆ ಸರಿಯಾಗಿ ಉತ್ತರ ನೀಡಿದೆ: ಸಹೋದರನ ಕುರಿತು ಕೃನಾಲ್ ಪಾಂಡ್ಯ ಸಂದೇಶ

ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ಐಪಿಎಲ್ 2022ರ ಸೀಸನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, ಆತನ ಸಹೋದರ ಕೃನಾಲ್ ಪಾಂಡ್ಯ ಭಾವುಕರಾಗಿ ಸಹೋದರನನ್ನ ಹೊಗಳಿ ಟ್ವೀಟ್ ಮಾಡಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಲ್‌ರೌಂಡರ್ ಕೃನಾಲ್ ಪಾಂಡ್ಯ ತನ್ನ ಸಹೋದರನ ಯಶಸ್ಸಿನ ಹಿನ್ನೆಲೆಯಲ್ಲಿ ಹಾರ್ದಿಕ್ ಅನುಭವಿಸಿದ ಕಷ್ಟಗಳನ್ನು ಅವರು ನೆನಪಿಸಿಕೊಂಡರು. ಐಪಿಎಲ್ 2022 ರ ಸೀಸನ್‌ಗೆ ಮೊದಲು, ಹಾರ್ದಿಕ್ ಪಾಂಡ್ಯ ಸತತ ಗಾಯಗಳಿಂದ ಬಳಲುತ್ತಿದ್ದರು ಮತ್ತು ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡರು.
ಈ ಸಂದರ್ಭದಲ್ಲಿ ಆತನ ಕಥೆ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು. ಇದಾದ ಬಳಿಕ ಗುಜರಾತ್ ಟೈಟನ್ಸ್ ಅವರನ್ನು ನಾಯಕರನ್ನಾಗಿ ನೇಮಿಸುವಲ್ಲಿ ಎಡವಿದೆ. ಯಾವುದೇ ಹಂತದ ಕ್ರಿಕೆಟ್‌ನಲ್ಲಿ ನಾಯಕತ್ವದ ಅನುಭವ ಇಲ್ಲದ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಿರುವುದು ಹುಚ್ಚುತನದ ನಿರ್ಧಾರ ಎಂದು ಟೀಕಿಸಿದ್ದರು. ಆದ್ರೆ ಈ ಟೀಕೆ ಮಾಡಿದವರಿಗೆಲ್ಲ ನನ್ನ ಸಹೋದರ ಸರಿಯಾದ ಉತ್ತರ ನೀಡಿದ್ದಾನೆ ಎಂದು ಕೃನಾಲ್ ಪಾಂಡ್ಯ ಭಾವುಕರಾಗಿ ಸಂದೇಶ ರವಾನಿಸಿದ್ದಾರೆ.
ಆಟದ ಮೂಲಕವೇ ಉತ್ತರ ನೀಡಿದ ಹಾರ್ದಿಕ್
ಆದರೆ ಈ ಟೀಕೆಗಳಿಗೆ ಹಾರ್ದಿಕ್ ತಮ್ಮ ಆಟದ ಮೂಲಕ ಉತ್ತರಿಸಿದರು. ಅವರು ನಾಯಕನಾಗಿ ಮಿಂಚಿದರು ಮತ್ತು ವೈಯಕ್ತಿಕ ಪ್ರದರ್ಶನದೊಂದಿಗೆ ಪ್ರಶಸ್ತಿಯನ್ನು ಗೆದ್ದರು. ತಾವು ಝೀರೋ ಅಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಅವಕಾಶ ಸಿಕ್ಕರೆ ಟೀಂ ಇಂಡಿಯಾವನ್ನು ಮುನ್ನಡೆಸುವ ಸಾಮರ್ಥ್ಯ ಅವರಲ್ಲಿದೆ. ಈ ಸಮಯದಲ್ಲಿ ಅವರ ಸಹೋದರ ಕೃನಾಲ್ ಪಾಂಡ್ಯ ಟ್ವಿಟರ್‌ನಲ್ಲಿ ವಿಮರ್ಶಕರನ್ನು ಗುರಿಯಾಗಿಟ್ಟುಕೊಂಡು ಸುದೀರ್ಘ ಪೋಸ್ಟ್ ಅನ್ನು ಬರೆದಿದ್ದಾರೆ.
'ಸಹೋದರ.. ನಿನ್ನ ಯಶಸ್ಸಿನ ಹಿಂದಿರುವ ಕಷ್ಟ ನಿನಗೆ ಮಾತ್ರ ಗೊತ್ತು. ನಾವು ಬೆಳಿಗ್ಗೆ ಹಲವು ಗಂಟೆಗಳ ಕಾಲ ಶ್ರಮಿಸಿದ್ದೇವೆ. ತರಬೇತಿ, ಶಿಸ್ತು, ಮಾನಸಿಕ ಗಟ್ಟಿತನ.. ಇವೆಲ್ಲವೂ ನಿಮ್ಮ ಯಶಸ್ಸಿನ ಮೆಟ್ಟಿಲುಗಳು.. ಈಗ ಟ್ರೋಫಿ ಎತ್ತಿ ಹಿಡಿದರೆ ಅದೆಲ್ಲವೂ ನಿಮ್ಮ ಶ್ರಮಕ್ಕೆ ಸಿಕ್ಕ ಪ್ರತಿಫಲದಂತೆ ಕಾಣುತ್ತಿದೆ'' ಎಂದಿದ್ದಾರೆ.
2008ರಲ್ಲೇ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೆ, ಆದ್ರೆ ಸಚಿನ್ ತಡೆದ್ರು: ವೀರೇಂದ್ರ ಸೆಹ್ವಾಗ್
ಟೀಕೆ ಮಾಡಿದವರಿಗೆ ಇತಿಹಾಸ ಬರೆಯುವಂತೆ ಮಾಡಿದ್ದೀರಿ!
''ನೀವು ಈ ಯಶಸ್ಸಿಗೆ ನೂರು ಪ್ರತಿಶತ ಅರ್ಹರು. ನಿನ್ನ ಕೆಲಸ ಮುಗಿಯಿತು.. ಆಟಕ್ಕೆ ನೀನು ನಿಷ್ಪ್ರಯೋಜಕ ಎಂದು ಬಹಳಷ್ಟು ಜನ ಹೇಳಿದರು. ಆದರೆ ನೀವು ಅವರನ್ನು ತಪ್ಪು ಎಂದು ಸಾಬೀತುಪಡಿಸಿ ನಿಮ್ಮ ಇತಿಹಾಸವನ್ನು ಬರೆಯುವಂತೆ ಮಾಡಿದ್ದೀರಿ. ಲಕ್ಷಾಂತರ ಜನ ನಿನ್ನ ನಾಮಸ್ಮರಣೆ ಮಾಡುತ್ತಿದ್ದಾಗ ನಾನಿದ್ದೆ. ನಿಮ್ಮ ಯಶಸ್ಸನ್ನು ಕಂಡಿದ್ದೇನೆ..'' ಎಂದು ಕೃನಾಲ್ ಭಾವುಕರಾಗಿ ಬರೆದಿದ್ದಾರೆ.
ಸುಮಾರು ಐದು ವರ್ಷಗಳ ಕಾಲ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ ಹಾರ್ದಿಕ್ ಪಾಂಡ್ಯ-ಕೃನಾಲ್ ಪಾಂಡ್ಯ ಈ ಋತುವಿನಲ್ಲಿ ಎರಡು ವಿಭಿನ್ನ ಫ್ರಾಂಚೈಸಿಗಳಿಗಾಗಿ ಕಣಕ್ಕೆ ಇಳಿದಿದ್ದಾರೆ. ಕಳೆದ ಟಿ20 ವಿಶ್ವಕಪ್‌ನಲ್ಲೂ ಸಹ ಹಾರ್ದಿಕ್ ಫಾರ್ಮ್ ವೈಫಲ್ಯ ಅನುಭವಿಸಿದ್ದರು. ಜೊತೆಗೆ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಿದ್ದರು.
ಚೆಕ್ ಬೌನ್ಸ್ ಪ್ರಕರಣ: ಎಂ.ಎಸ್ ಧೋನಿ ಸೇರಿದಂತೆ 7 ಮಂದಿಯ ವಿರುದ್ಧ ಎಫ್‌ಐಆರ್ ದಾಖಲು

ಎರಡು ಹೊಸ ತಂಡಗಳಿಗೆ ಆಡಿದ ಸಹೋದರರು
ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ವಹಿಸಿದ್ರೆ, ಕೃನಾಲ್ ಲಕ್ನೋ ಸೂಪರ್ ಜೈಂಟ್ಸ್ ಪರ ಸ್ಪಿನ್ಆಲ್ ರೌಂಡರ್ ಆಗಿ ಆಡಿದರು. ಈ ಋತುವಿನ ಆರಂಭದಲ್ಲಿ ಗಾಯಗೊಂಡಿದ್ದ ಹಾರ್ದಿಕ್, ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ದೊಡ್ಡ ಪರಿಣಾಮ ಬೀರಲು ವಿಫಲವಾದ ನಂತರ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಇದರೊಂದಿಗೆ ಮುಂಬೈ ಇಂಡಿಯನ್ಸ್ ಕೂಡ ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಟ್ಟಿತು. ಇದರೊಂದಿಗೆ ಹಾರ್ದಿಕ್ ಕೆರಿಯರ್ ಮುಗಿದೇ ಹೋಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಪಾಂಡ್ಯ ಪುಟಿದೇಳುವ ಮೂಲಕ ತಮ್ಮ ಸಾಮರ್ಥ್ಯ ತೋರಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications