2023ನೇ ಆವೃತ್ತಿಯ ಐಪಿಎಲ್ ಭರ್ಜರಿಯಾಗಿ ನಡೆಯುತ್ತಿದ್ದು ಬಹುತೇಕ ಟೂರ್ನಿಯ ಮಧ್ಯಭಾಗದತ್ತ ಹೆಜ್ಜೆ ಹಾಕುತ್ತಿದೆ. ಸಾಕಷ್ಟು ಪೈಪೋಟಿಯ ಪಂದ್ಯಗಳನ್ನು ಈ ಬಾರಿಯ ಐಪಿಎಲ್‌ನಲ್ಲಿ ಅಭಿಮಾನಿಗಳು ಆಸ್ವಾದಿಸಿದ್ದಾರೆ. ಅನೇಕ ದಾಖಲೆಗಳು ಕೂಡ ಸೃಷ್ಟಿಯಾಗಿದ್ದು ತಂಡಗಳ ನಡುವಿನ ಪೈಪೋಟಿ ಹೆಚ್ಚಾಗುತ್ತಿದೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಈ ಐಪಿಎಲ್‌ನಲ್ಲಿ ಸಾಕಷ್ಟು ಪೈಪೊಟಿ ಇರುತ್ತದೆ ಎಂಬುದು ಗೊತ್ತೇ ಇದೆ. ಅದಕ್ಕೆ ಸಾಕ್ಷಿ ಈ ಬಾರಿಯ ಐಪಿಎಲ್‌ನಲ್ಲಿ ಅವಕಾಶ ದೊರೆಯದೆ ಬೆಂಚ್‌ನಲ್ಲಿ ಕಾಯುತ್ತಿರುವ ವಿಶ್ವ ಕ್ರಿಕೆಟ್‌ನ ಕೆಲ ದಿಗ್ಗಜ ಆಟಗಾರರು. ವಿಶ್ವ ಕ್ರಿಕೆಟ್‌ನಲ್ಲಿ ಸಾಕಷ್ಟು ದಾಖಲೆಗಳನ್ನು ಬರೆದು ಸ್ಟಾರ್ ಆಟಗಾರರು ಎನಿಸಿಕೊಂಡಿದ್ದರೂ ಐಪಿಎಲ್‌ನಲ್ಲಿ ಈ ಐವರು ಆಟಗಾರರಿಗೆ ಆಡುವ ಬಳಗದಲ್ಲಿ ಈವರೆಗೆ ಅವಕಾಶ ದೊರೆತಿಲ್ಲ. ಆ ಐವರು ಆಟಗಾರರು ಯಾರು? ಇಲ್ಲಿದೆ ಮಾಹಿತಿ ಮುಂದೆ ಓದಿ..

ಕ್ವಿಂಟನ್ ಡಿಕಾಕ್‌ಗೆ ಇನ್ನೂ ದೊರೆತಿಲ್ಲ ಅವಕಾಶ
ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಟಾರ್ ಆಟಗಾರ ಕ್ವಿಂಟನ್ ಡಕಾಕ್ ಈ ಬಾರಿಯ ಐಪಿಎಲ್‌ಗೆ ತಡವಾಗಿ ಆಗಮಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯ ಹಿನ್ನೆಲೆಯಲ್ಲಿ ಆರಂಭಿಕ ಕೆಲ ಪಂದ್ಯಗಳಿಗೆ ಡಿಕಾಕ್ ಲಭ್ಯವಾಗಲಿಲ್ಲ. ಹಾಗಾಗಿ ಆರಂಭಿಕನಾಗಿ ವೆಸ್ಟ್ ಇಂಡೀಸ್‌ನ ಕೇಲ್ ಮೇಯರ್ಸ್‌ಗೆ ಅವಕಾಶ ದೊರೆಯಿತು. ಈ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡ ಕೇಕಲ್ ಮೇಯರ್ಸ್ ಸ್ಪೋಟಕ ಆಟದ ಮೂಲಕ ತಂಡಕ್ಕೆ ನೆರವಾದರು. ಈ ಪ್ರದರ್ಶನದ ಕಾರಣದಿಂದಾಗಿ ಎಲ್‌ಎಸ್‌ಜಿ ಮ್ಯಾನೇಜ್‌ಮೆಂಟ್ ಕೇಲ್ ಮೇಯರ್ಸ್ ಅವರನ್ನು ಆರಂಭಿಕನಾಗಿ ಮುಂದುವರಿಸುವುದು ಅನಿವಾರ್ಯವಾಯಿತು. ಹೀಗಾಗಿ ಡಿಕಾಕ್‌ಗೆ ಈವರೆಗೆ ಆಡುವ ಬಳಗದಲ್ಲಿ ಅವಕಾಶ ಈವರೆಗೆ ದೊರೆತಿಲ್ಲ.
ಇನ್ನೂ ಐಪಿಎಲ್‌ಗೆ ಪದಾರ್ಪಣೆ ಮಾಡಿಲ್ಲ ಜೋ ರೂಟ್
ಇಂಗ್ಲೆಂಡ್ ತಂಡದ ಮಾಝಿ ನಾಯಕ ಜೋ ರೂಟ್ ಕಳೆದ ಡಿಸೆಂಬರ್‌ನಲ್ಲಿ ಜೊಚ್ಚಲ ಐಪಿಎಲ್ ಕಾಂಟ್ರಾಕ್ಟ್ ಪಡೆದುಕೊಂಡರು. ಈ ಬಲಗೈ ಆಟಗಾರ ಐಪಿಎಲ್‌ನಲ್ಲಿ ಆಲ್‌ರೌಂಡ್ ಆಟಗಾರನಾಗಿ ಉತ್ತಮ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಜೋ ರೂಟ್‌ಗೆ ಆಡುವ ಬಳಗದಲ್ಲಿ ಅವಕಾಶ ಈವರೆಗೆ ದೊರೆತಿಲ್ಲ.
ಆಸಿಸ್ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್
ಆಸ್ಟ್ರೇಲಿಯಾದ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್ ಅವರನ್ನು ಕಳೆದ ಐಪಿಎಲ್‌ನಲ್ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ತಂಡ ಸಾಕಷ್ಟು ಬೆಂಬಲ ನೀಡಿ ಆಡುವ ಬಳಗದಲ್ಲಿ ಅವಕಾಶ ನೀಡಿತ್ತು. ಹಾಗಾಗಿ ಈ ಬಾರಿಯ ಐಪಿಎಲ್‌ನಲ್ಲಿಯೂ ವೇಡ್ ಆಡುವ ಬಳಗದಲ್ಲಿ ಖಚಿತವಾಗಿ ಸ್ಥಾನವನ್ನು ಪಡೆಯುತ್ತಾರೆ ಎಂದು ನಿರೀಕ್ಷಿಸಿದ್ದರು. ಅದರಲ್ಲೂ ಕೇನ್ ವಿಲಿಯಮ್ಸನ್ ಗಾಯಗೊಂಡ ಬಳಿಕ ವೇಡ್‌ಗೆ ಸ್ಥಾನ ಪಕ್ಕಾ ಎನ್ನಲಾಗಿತ್ತು. ಆದರೆ ದೇಶೀಯ ಕ್ರಿಕೆಟ್‌ನ ಆಟಗಾರರು ನೀಡುತ್ತಿರುವ ಅದ್ಭುತ ಪ್ರದರ್ಶನದ ಕಾರಣದಿಂದಾಗಿ ವೇಡ್‌ಗೆ ಈವರೆಗೆ ಆಡುವ ಬಳಗದಲ್ಲಿ ಅವಕಾಶವೇ ದೊರೆತಿಲ್ಲ!
ಶ್ರೀಲಂಕಾ ನಾಯಕ ದಸುನ್ ಶನಕ
ಶ್ರೀಲಂಕಾದ ನಾಯಕ ದಸುನ್ ಶನಕ ಗುಜರಾತ್ ಟೈಟನ್ಸ್ ತಂಡದಲ್ಲಿದ್ದ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ಗಾಯಗೊಂಡ ಬಳಿಕ ಬದಲಿ ಆಟಗಾರನಾಗಿ ಸೇರಿಕೊಂಡರು. ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಶನಕ ಅತ್ಯುತ್ತಮ ಫಿನಿಷರ್‌ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಆದರೆ ಈವರೆಗೆ ದಸುನ್ ಶನಕ ಅವರಿಗೆ ಆಡುವ ಬಳಗದಲ್ಲಿ ಅವಕಾಶ ದೊರೆತಿಲ್ಲ!
ವಿಂಡೀಸ್ ಸ್ಪಿನ್ನರ್ ಅಕೀಲ್ ಹುಸೇನ್
ವೆಸ್ಟ್ ಇಂಡೀಸ್ ತಂಡದ ಪ್ರಮುಖ ಸ್ಪಿನ್ನರ್ ಅಕೀಲ್ ಹುಸೇನ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ವಿಶ್ವದ ಅತ್ಯಂತ ಎಕನಾಮಿಕಲ್ ಬೌಲರ್‌ಗಳಲ್ಲಿ ಅಕೀಲ್ ಹುಸೇನ್ ಕೂಡ ಒಬ್ಬರೆನಿಸಿದ್ದಾರೆ. ಆದರೆ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಈ ಆಟಗಾರನಿಗೆ ಈವರೆಗೆ ಆಡುವ ಬಳಗದಲ್ಲಿ ಅವಕಾಶವೇ ದೊರೆತಿಲ್ಲ.