IPL 2023 : ಮುಂಬೈ ಇಂಡಿಯನ್ಸ್ ಖರೀದಿ ಮಾಡಬಹುದಾದ ವಿದೇಶಿ ಬೌಲರ್‌ಗಳು ಇವರು

ಮುಂಬೈ ಇಂಡಿಯನ್ಸ್ 2022ರ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರನ್ನು 8 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತ್ತು. ಅವರು ಗಾಯದಿಂದ ಚೇತರಿಸಿಕೊಳ್ಳದ ಕಾರಣ 2022ರ ಐಪಿಎಲ್‌ನಲ್ಲಿ ಆಡಲಿಲ್ಲ, 2023ರ ಐಪಿಎಲ್ ಆರಂಭದ ವೇಳೆಗೆ ಅವರು ಸಿದ್ಧರಿರುತ್ತಾರೆ ಎಂದು ಮುಂಬೈ ಇಂಡಿಯನ್ಸ್ ಆಶಿಸಿದೆ.
ಜಸ್ಪ್ರೀತ್ ಬುಮ್ರಾ ಜೊತೆ ಆರ್ಚರ್ ಬೌಲಿಂಗ್ ಮಾಡಿದರೆ, ಮುಂಬೈನ ಬೌಲಿಂಗ್ ಸಾಕಷ್ಟು ಶಕ್ತಿಶಾಲಿಯಾಗಿರಲಿದೆ. ಆದರೆ, ಆರ್ಚರ್ ಅಲಭ್ಯತೆಯಿಂದ 2022ರಲ್ಲಿ ಮುಂಬೈ ಇಂಡಿಯನ್ಸ್ ಬೌಲಿಂಗ್ ತುಂಬಾ ದುರ್ಬಲವಾಗಿತ್ತು, ಅವರು ಪಾಯಿಂಟ್ ಪಟ್ಟಿಯಲ್ಲಿ 10 ನೇ ಸ್ಥಾನ ಪಡೆಯುವ ಮೂಲಕ ಮುಖಭಂಗ ಅನುಭವಿಸಿದರು.
ಆರ್ಚರ್ ಬೆನ್ನಿನಲ್ಲಿ ಒತ್ತಡದ ಮುರಿತದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ಅವರು 2023ರ ಐಪಿಎಲ್ ವೇಳೆಗೆ ಚೇತರಿಸಿಕೊಳ್ಳದಿದ್ದರೆ. ಮುಂಬೈ ಇಂಡಿಯನ್ಸ್ ಬೇರೆ ಬೌಲರ್ ಆಯ್ಕೆಯನ್ನು ಹುಡುಕಬೇಕಾಗುತ್ತದೆ. ಬುಮ್ರಾ ಚೇತರಿಸಿಕೊಳ್ಳುವ ಸಾಧ್ಯತೆ ಇದ್ದು, ಅವರಿಗೆ ಸಾಥ್ ಕೊಡುವ ಬೌಲರ್ ತಂಡಕ್ಕೆ ಬೇಕಾಗುತ್ತದೆ. ಮಿನಿ ಹರಾಜಿನಲ್ಲಿ ಮುಂಬೈ ಈ ಮೂವರು ವಿದೇಶಿ ಬೌಲರ್ ಗಳಲ್ಲಿ ಒಬ್ಬರನ್ನು ಖರೀದಿ ಮಾಡಲು ಚಿಂತನೆ ಮಾಡಬಹುದು.

ಲಂಕಾ ವೇಗದ ಬೌಲರ್ ದುಷ್ಮಂತ ಚಮೀರ
ದುಷ್ಮಂತ ಚಮೀರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಐಪಿಎಲ್ ವೇಳೆಗೆ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಅವರು ಶ್ರೀಲಂಕಾ ತಂಡದ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಕಳೆದ ಬಾರಿ ಲಕ್ನೋ ಸೂರ್ ಜೈಂಟ್ಸ್ ತಂಡಕ್ಕಾಗಿ ಆಡಿದ್ದರು. 12 ಪಂದ್ಯಗಳಲ್ಲಿ 9 ವಿಕೆಟ್ ಪಡೆದು ಮಿಂಚಿದ್ದರು. ಆದರೂ, ಲಕ್ನೋ ಚಮೀರಾ ಅವರನ್ನು ಬಿಡುಗಡೆ ಮಾಡಿದ್ದು, ಮುಂಬೈ ಇಂಡಿಯನ್ಸ್ ಅವರನ್ನು ಖರೀದಿ ಮಾಡಲು ಚಿಂತಿಸಬಹುದು.
ಭಾರತ vs ನ್ಯೂಜಿಲೆಂಡ್: ಬೀಳುತ್ತಿದ್ದ ಟ್ರೋಫಿ ಕಾಪಾಡಿದ ಕೇನ್ ವಿಲಿಯಮ್ಸನ್!: ವಿಡಿಯೋ

ಆಸ್ಟ್ರೇಲಿಯಾ ವೇಗಿ ನಾಥನ್ ಕೌಲ್ಟರ್-ನೈಲ್
ನಾಥನ್ ಕೌಲ್ಟರ್-ನೈಲ್ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರಷ್ಟು ವೇಗವನ್ನು ಹೊಂದಿಲ್ಲ. ಆದರೆ, 2020ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆದ ತಂಡದ ಭಾಗವಾಗಿದ್ದರು. ಅವರು ಭಾರತದ ಪರಿಸ್ಥಿತಿಗಳಲ್ಲಿ ಆಡಿರುವ ಅನುಭವ ಹೊಂದಿದ್ದಾರೆ.
ಬುಮ್ರಾ ಮತ್ತು ಟ್ರೆಂಟ್ ಬೌಲ್ಟ್ ಜೊತೆ ಕೌಲ್ಟರ್ ನೈಲ್ ಅವರ ಬೌಲಿಂಗ್ ಲಾಭವನ್ನು ಮುಂಬೈ ಪಡೆದುಕೊಳ್ಳಲು ಯೋಚಿಸಬಹುದು. ರಾಜಸ್ಥಾನ ರಾಯಲ್ಸ್ ಅವರನ್ನು ಬಿಡುಗಡೆ ಮಾಡಿದ್ದು ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಮ್ಮ ತಂಡದ ಮಾಜಿ ಆಟಗಾರನ ಖರೀದಿಸಲು ಆಸಕ್ತಿ ತೋರಿಸಬಹುದು.

ಆಲ್‌ರೌಂಡರ್ ಜೇಸನ್ ಹೋಲ್ಡರ್
ಲಕ್ನೋ ಸೂಪರ್ ಜೈಂಟ್ಸ್ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಜೇಸನ್ ಹೋಲ್ಡರ್ ಅವರನ್ನು ಬಿಡುಗಡೆ ಮಾಡಿದ ನಿರ್ಧಾರ ಅನೇಕರಿಗೆ ಅಚ್ಚರಿ ಮೂಡಿಸಿದೆ. ಟಿ20 ಮಾದರಿಯಲ್ಲಿ ಹೋಲ್ಡರ್ ಅತ್ಯುತ್ತಮ ಆಟಗಾರ, ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಕೌಶಲ್ಯ ಹೊಂದಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಖರೀದಿಸುವ ಬಗ್ಗೆ ಯೋಚನೆ ಮಾಡಬಹುದು. ಬೌಲಿಂಗ್ ಆಯ್ಕೆ ಜೊತೆ ಬ್ಯಾಟಿಂಗ್ ವಿಭಾಗ ಕೂಡ ಶಕ್ತಿಯುತವಾಗಲಿದೆ. ಪವರ್ ಪ್ಲೇನಲ್ಲಿ ಕೂಡ ಹೋಲ್ಡರ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್‌ನಲ್ಲಿ ಫಿನಿಶರ್ ಆಗಿ ಬೌಂಡರಿಗಳನ್ನು ಸಿಡಿಸುವ ಕೌಶಲ್ಯವನ್ನು ಪರಿಗಣಿಸಿ ಐಪಿಎಲ್ ಮಿನಿ ಹರಾಜಿನಲ್ಲಿ ಅವರನ್ನು ಖರೀದಿ ಮಾಡಲು ಆಸಕ್ತಿ ತೋರಿಸುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications