Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023 Ticket Booking: ಐಪಿಎಲ್ ಪಂದ್ಯಗಳ ಟಿಕೆಟ್ ಬೆಲೆ, ಯಾವಾಗ ಮತ್ತು ಎಲ್ಲಿ ಖರೀದಿಸಬೇಕು ಸಂಪೂರ್ಣ ವಿವರ

IPL 2023 Ticket Booking: Know Starting Date, Ticket Price, When and Where to Buy IPL Tickets Online

ಮಾರ್ಚ್ 31ರಿಂದ ಐಪಿಎಲ್ 2023ರ ಆವೃತ್ತಿಗೆ ಅದ್ದೂರಿ ಚಾಲನೆ ಸಿಗಲಿದೆ. ದೇಶಾದ್ಯಂತ 12 ಕ್ರೀಡಾಂಗಣಗಳು ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ನ ಪಂದ್ಯಗಳಿಗೆ ಆತಿಥ್ಯ ವಹಿಸುತ್ತಿವೆ. ಐಪಿಎಲ್‌ 2023ರ ಆವೃತ್ತಿಯ ಮೊದಲನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್‌ ಮುಖಾಮುಖಿಯಾಗಲಿವೆ.

ಕೋರೊನಾ ಸಾಂಕ್ರಾಮಿಕದ ಕಾರಣ ಕಳೆದ ಮೂರು ಆವೃತ್ತಿಗಳಲ್ಲಿ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಎರಡು ಆವೃತ್ತಿಗಳು ಯಾವುದೇ ಪ್ರೇಕ್ಷಕರಿಲ್ಲದೆ ಯುಎಇಯಲ್ಲಿ ನಡೆದಿದ್ದವು. ಕಳೆದ ಬಾರಿ ಕೆಲವು ಪಂದ್ಯಗಳಿಗೆ ಮಾತ್ರ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿತ್ತು.

ಆದರೆ, 2023ರ ಆವೃತ್ತಿಯಲ್ಲಿ ಗತ ವೈಭವ ಮರಳಲಿದ್ದು, ತವರಿನಲ್ಲಿ ಮತ್ತು ಹೊರಗಿನ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಚಿನ್ನಸ್ವಾಮಿ ಅಂಗಳದಲ್ಲಿ ಪಂದ್ಯಗಳನ್ನು ವೀಕ್ಷಿಸಬಹುದಾಗಿದ್ದು, ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲ ನೀಡಬಹುದು.

2023ರ ಐಪಿಎಲ್‌ ವೀಕ್ಷಣೆ ಮಾಡಲು ಸಾವಿರಾರು ಅಭಿಮಾನಿಗಳು ಕಾಯುತ್ತಿರುವುದರಿಂದ, ಈ ಬಾರಿ ಟಿಕೆಟ್ ಖರೀದಿ ಮಾಡಲು ಸಾಕಷ್ಟು ಪೈಪೋಟಿ ಇರುತ್ತದೆ. ಐಪಿಎಲ್ ಪಂದ್ಯಗಳ ಟಿಕೆಟ್ ದರ, ಟಿಕೆಟ್ ಬುಕ್ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.

ಟಿಕೆಟ್ ಖರೀದಿ ಮಾಡುವ ವಿಧಾನ

ಟಿಕೆಟ್ ಖರೀದಿ ಮಾಡುವ ವಿಧಾನ

ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿ ಮಾಡಲು ಈ ಬಾರಿ ಸಾಕಷ್ಟು ವೆಬ್‌ಸೈಟ್‌ಗಳಿವೆ. ಟಿಕೆಟ್ ಮಾರಾಟ ಯಾವಾಗ ಆರಂಭವಾಗುತ್ತದೆ ಎಂದು ಸದ್ಯಕ್ಕೆ ತಿಳಿದಿಲ್ಲವಾದರೂ, ಅಧಿಕೃತ ಟಿಕೆಟ್ ಬುಕಿಂಗ್‌ ವೆಬ್‌ಸೈಟ್‌ಗಳಿಗೆ ಸೈನ್‌ಇನ್ ಮಾಡಿದರೆ, ಟಿಕೆಟ್ ಮಾರಾಟ ಆರಂಭವಾದಾಗ ನೀವು ಅಧಿಸೂಚನೆಗಳನ್ನು ಪಡೆಯಬಹುದಾಗಿದೆ.

ಪೇಟಿಎಂ, ಬುಕ್‌ಮೈಶೋ ಆಪ್‌ನಲ್ಲಿ ನೀವು ಸುಲಭವಾಗಿ ಐಪಿಎಲ್‌ ಪಂದ್ಯಗಳ ಟಿಕೆಟ್‌ಗಳನ್ನು ಬುಕ್‌ ಮಾಡಬಹುದಾಗಿದೆ. ಈ ಕೆಳಗಿನ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ, ಮುಖಪುಟದ ಟಿಕೆಟ್ ಬುಕಿಂಗ್ ಲಿಂಕ್ ಅನ್ನು ಆಯ್ಕೆ ಮಾಡಿಕೊಳ್ಳಿ, ಆಟವನ್ನು ವೀಕ್ಷಿಸಲು ಬಯಸುವ ಕ್ರೀಡಾಂಗಣ ಮತ್ತು ಕ್ರೀಡಾಂಗಣದ ವಿಭಾಗವನ್ನು ಆಯ್ಕೆಮಾಡಿ. ಚೆಕ್‌ಔಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮತ್ತು ಯುಪಿಐ, ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಪಾವತಿಸಿ. ನಿಮ್ಮ ಟಿಕೆಟ್‌ಗಳನ್ನು ನೀವು ಸ್ವೀಕರಿಸುತ್ತೀರಿ, ಕ್ರೀಡಾಂಗಣಕ್ಕೆ ಪ್ರವೇಶಿಸುವ ಮುನ್ನ ನೀವು ಆನ್‌ಲೈನ್ ಟಿಕೆಟ್‌ಗಳನ್ನು ತೋರಿಸಬೇಕಾಗುತ್ತದೆ.

ಬುಕ್‌ ಮೈ ಶೋ - https://in.bookmyshow.com/sports
ಪೇಟಿಎಂ - https://paytm.com/offer/ipl-offers/
ಇನ್‌ಸೈಡರ್.ಇನ್- https://insider.in/indian-premier-league-ipl
ಟಿಕೆಟ್‌ಜೆನಿ - https://ticketgenie.in
ಇವೆಂಟ್ಸ್‌ನೌ - https://www.eventsnow.com/

ಐಪಿಎಲ್‌ನ ಕನಿಷ್ಠ ಗರಿಷ್ಠ ಬೆಲೆ

ಐಪಿಎಲ್‌ನ ಕನಿಷ್ಠ ಗರಿಷ್ಠ ಬೆಲೆ

2023ರ ಐಪಿಎಲ್‌ ಟಿಕೆಟ್‌ಗಳ ದರ ಕನಿಷ್ಠ 500 ರುಪಾಯಿಂದ 40 ಸಾವಿರ ರೂಪಾಯಿಗಳವರೆಗೆ ನಿಗದಿಪಡಿಸಲಾಗಿದೆ. ಮುಂಭಾಗ ಮತ್ತು ಕೆಳಗಿನ ಸ್ಟ್ಯಾಂಡಿಂಗ್ (D1, G1 ಅಥವಾ H1) ಪ್ರವೇಶಕ್ಕೆ 800 - 900 ರುಪಾಯಿ ಇರುತ್ತದೆ. ಮೇಲಿನ ಸ್ಥಾನಗಳು (B1, C1 ಅಥವಾ D1) ಟಿಕೆಟ್ ದರವನ್ನು 1000-3000 ನಿಗದಿಪಡಿಸುವ ಸಾಧ್ಯತೆ ಇದೆ.

ಮೇಲ್ಮನೆ ಕ್ಲಬ್ ಪ್ರದೇಶದಲ್ಲಿ ಪಂದ್ಯ ವೀಕ್ಷಿಸಲು 4000 ರುಪಾಯಿಗಳನ್ನು ನೀಡಬೇಕಾಗುತ್ತದೆ. ವಿಐಪಿ ಬಾಕ್ಸ್ ಸ್ಥಳದಲ್ಲಿ ನೋಡಲು ಕನಿಷ್ಠ 20,000 ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ. ಕಾರ್ಪೊರೇಟ್ ಬಾಕ್ಸ್ ಪ್ರದೇಶದ ಟಿಕೆಟ್‌ಗಳು 30,000 ದಿಂದ 40 ಸಾವಿರದವರೆಗೆ ನಿಗದಿಪಡಿಸಲಾಗಿದೆ. ಪಂದ್ಯಗಳು, ಕ್ರೀಡಾಂಗಣವನ್ನು ಆಧರಿಸಿ ಟಿಕೆಟ್ ದರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ.

ಯಾವ ಸ್ಥಳಗಳಲ್ಲಿ ಪಂದ್ಯ ನಿಗದಿ

ಯಾವ ಸ್ಥಳಗಳಲ್ಲಿ ಪಂದ್ಯ ನಿಗದಿ

ಅಹಮದಾಬಾದ್‌ನ ನರೆಂದ್ರ ಮೋದಿ ಕ್ರೀಡಾಂಗಣ, ಮೊಹಾಲಿಯಾ ಐಎಸ್ ಬಿಂದ್ರಾ ಸ್ಟೇಡಿಯಮ್, ಲಕ್ನೋದ ಏಕಾನಾ ಸ್ಪೋರ್ಟ್ಸ್ ಸಿಟಿ, ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ, ನವದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂ, ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣ, ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮತ್ತು ಮುಂಬೈನ ವಾಂಖೆಡೆ ಸ್ಟೇಡಿಯಂ, ಜೈಪುರದ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂ, ಧರ್ಮಶಾಲಾದ ಹೆಚ್‌ಪಿಸಿಯ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.

Story first published: Thursday, February 23, 2023, 16:41 [IST]
Other articles published on Feb 23, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+