RCB IPL 2023 Tickets: ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಪಂದ್ಯಗಳ ಟಿಕೆಟ್ ದರ ಪ್ರಕಟ; ಇಲ್ಲಿದೆ ವೇಳಾಪಟ್ಟಿ

ಬಹುನಿರೀಕ್ಷಿತ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಋತುವಿನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಮಾರ್ಚ್ 31ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯದ ಮೂಲಕ ಅದ್ಧೂರಿ ಚಾಲನೆ ಸಿಗಲಿದೆ.
2023ರ ಐಪಿಎಲ್ ವಿಶೇಷವಾಗಿದೆ. ಏಕೆಂದರೆ, ನಾಲ್ಕು ವರ್ಷಗಳ ಬಳಿಕ ಎಲ್ಲಾ ಹತ್ತು ತಂಡಗಳು ತಮ್ಮ ತವರಿನ ಮತ್ತು ಎದುರಾಳಿ ತಂಡಗಳ ಮೈದಾನದಲ್ಲಿ ಪಂದ್ಯಗಳನ್ನು ಆಡಲಿವೆ. ಇದು ಕ್ರಿಕೆಟ್ ಪ್ರೇಕ್ಷಕರನ್ನು ಕ್ರೀಡಾಂಗಣಕ್ಕೆ ಸೆಳೆಯಲಿದೆ.
ಈ ಬಾರಿಯೂ ಫೈನಲ್ ಪಂದ್ಯಕ್ಕೆ ಮೊದಲು ಎಲ್ಲಾ ತಂಡಗಳ ನಡುವೆ 70 ಲೀಗ್ ಪಂದ್ಯಗಳನ್ನು ಹೊಂದಿರುತ್ತದೆ. ಇದೇ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ತವರಿನ ಪಂದ್ಯಗಳ ಟಿಕೆಟ್ ದರ ಪಟ್ಟಿ ಪ್ರಕಟಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ಎದುರು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡುವ ಮೂಲಕ ಅಭಿಯಾನ ಪ್ರಾರಂಭಿಸಲಿದೆ.
IPL 2023: ಪಂದ್ಯದ ಗತಿ ಬದಲಿಸಬಲ್ಲ ಇಬ್ಬರು ಮುಂಬೈ ಇಂಡಿಯನ್ಸ್ ಆಟಗಾರರನ್ನು ಹೆಸರಿಸಿದ ಸುನಿಲ್ ಗವಾಸ್ಕರ್
2022ರ ಐಪಿಎಲ್‌ನಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡವು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು ಮತ್ತು ನಂತರ, ಎರಡನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತು ಹೊರ ಬಿತ್ತು.
ಆರ್‌ಸಿಬಿ ತಂಡವನ್ನು ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ ಮತ್ತು ಐಪಿಎಲ್ 2023ರ ಫೈನಲ್ ಮೇ 28ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಸಾಧ್ಯತೆ ಇದೆ.

ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಪಂದ್ಯಗಳ ಟಿಕೆಟ್ ದರ ಪಟ್ಟಿ
2,310 ರೂ.
3,300 ರೂ.
4,840 ರೂ.
6,049 ರೂ.
9,075 ರೂ.
9,679 ರೂ.
10,890 ರೂ.
24,200 ರೂ.
42,350 ರೂ.

IPL 2023ರ ಟಿಕೆಟ್ ಖರೀದಿಸುವ ಹಂತಗಳ ಪ್ರಕ್ರಿಯೆ
ಹಂತ 1: IPL 2023ರ ಪಂದ್ಯಕ್ಕಾಗಿ ಟಿಕೆಟ್ ಬುಕ್ ಮಾಡಲು ಸರಳವಾದ ಮಾರ್ಗವೆಂದರೆ Paytm ಇನ್‌ಸೈಡರ್ ವೆಬ್‌ಸೈಟ್ ಅಥವಾ BookMyShow ಗೆ ಭೇಟಿ ಮಾಡುವುದು.
ಹಂತ 2: IPL 2023ರಲ್ಲಿ ಆಡುತ್ತಿರುವ ಹತ್ತು ತಂಡಗಳ ಹೆಸರುಗಳು ಮತ್ತು ಲೋಗೋಗಳೊಂದಿಗೆ ವೇಳಾಪಟ್ಟಿಯನ್ನು ಕಾಣಬಹುದು.
ಹಂತ 3: ಪಂದ್ಯವನ್ನು ವೀಕ್ಷಿಸಲು ಬಯಸುವ ತಂಡದ ಐಕಾನ್ ಮೇಲೆ ಕ್ಲಿಕ್ ಮಾಡುವುದು ಮುಂದಿನ ಹಂತವಾಗಿದೆ. ಇದು ನಿಮ್ಮನ್ನು ವೀಕ್ಷಿಸುವ ಪಂದ್ಯಗಳ ಪಟ್ಟಿಯೊಂದಿಗೆ ಹೊಸ ಪುಟಕ್ಕೆ ಕರೆದೊಯ್ಯುತ್ತದೆ.
ಹಂತ 4: ನಂತರ ಪಂದ್ಯವನ್ನು ವೀಕ್ಷಿಸಲು ಬಯಸುವ ದಿನಾಂಕವನ್ನು ಆಯ್ಕೆ ಮಾಡಬೇಕು. ಆಯ್ಕೆ ಮಾಡಿದ ಐಪಿಎಲ್ 2023ರ ಪಂದ್ಯದ ಸಮಯ ಮತ್ತು ಸ್ಥಳವನ್ನು ಪರೀಕ್ಷಿಸಬೇಕು. ನಂತರ, ಬೆಲೆ ಶ್ರೇಣಿಯ ಆಧಾರದ ಮೇಲೆ ಟಿಕೆಟ್ ಆಯ್ಕೆ ಮಾಡಬೇಕು. UPI ಅಥವಾ ನೆಟ್ ಬ್ಯಾಂಕಿಂಗ್ ಬಳಸಿ ಹಣ ಪಾವತಿಸಿ, ಟಿಕೆಟ್ ಬುಕ್ಕಿಂಗ್ ಮಾಡಬಹುದು.

ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ
1) ಆರ್‌ಸಿಬಿ vs ಮುಂಬೈ ಇಂಡಿಯನ್ಸ್- ಎಪ್ರಿಲ್ 2, ಬೆಂಗಳೂರು
2) ಆರ್‌ಸಿಬಿ vs ಲಕ್ನೋ ಸೂಪರ್ ಜೈಂಟ್ಸ್ - ಎಪ್ರಿಲ್ 10, ಬೆಂಗಳೂರು
3) ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ - ಎಪ್ರಿಲ್ 15, ಬೆಂಗಳೂರು
4) ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್ - ಎಪ್ರಿಲ್ 17, ಬೆಂಗಳೂರು
5) ಆರ್‌ಸಿಬಿ vs ರಾಜಸ್ಥಾನ ರಾಯಲ್ಸ್ - ಎಪ್ರಿಲ್ 23, ಬೆಂಗಳೂರು
6) ಆರ್‌ಸಿಬಿ vs ಕೋಲ್ಕತ್ತಾ ನೈಟ್ ರೈಡರ್ಸ್ - ಎಪ್ರಿಲ್ 26, ಬೆಂಗಳೂರು
7) ಆರ್‌ಸಿಬಿ vs ಗುಜರಾತ್ ಟೈಟನ್ಸ್ - ಮೇ 21, ಬೆಂಗಳೂರು

IPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪೂರ್ಣ ತಂಡ
ಫಾಫ್ ಡು ಪ್ಲೆಸಿಸ್ (ನಾಯಕ), ಫಿನ್ ಅಲೆನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಅನುಜ್ ರಾವತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ಸೋನು ಯಾದವ್, ಮನೋಜ್ ಭಾಂಡಗೆ, ಆಕಾಶ್ ದೀಪ್, ಜೋಶ್ ಹ್ಯಾಝಲ್‌ವುಡ್, ಸಿದ್ದಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಅವಿನಾಶ್ ಸಿಂಗ್, ರಾಜನ್ ಕುಮಾರ್, ರೀಸ್ ಟೋಪ್ಲೆ, ಹಿಮಾಂಶು ಶರ್ಮಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications