For Quick Alerts
ALLOW NOTIFICATIONS  
For Daily Alerts
 

IPL 2024: ಗುಜರಾತ್ ವಿರುದ್ಧ ಏಕಾಂಗಿಯಾಗಿ ಪಂಜಾಬ್ ಗೆಲ್ಲಿಸಿದ ಶಶಾಂಕ್ ಸಿಂಗ್ ಯಾರು?

2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಯಲ್ಲಿ ಹೊಸ ಪ್ರತಿಭೆಗಳು ಪಂದ್ಯ-ವಿಜೇತ ಪ್ರದರ್ಶನದೊಂದಿಗೆ ದೇಶದಾದ್ಯಂತ ಸದ್ದು ಮಾಡುತ್ತಿದ್ದಾರೆ.

ಗುರುವಾರ, ಏಪ್ರಿಲ್ 4ರಂದು ಪಂಜಾಬ್ ಕಿಂಗ್ಸ್ ತಂಡದ ಪ್ರತಿಭೆ ಶಶಾಂಕ್ ಸಿಂಗ್ ವಿಶ್ವದಾದ್ಯಂತ ಕ್ರಿಕೆಟ್ ಪ್ರೇಕ್ಷಕರಿಗೆ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ರಸದೌತಣ ನೀಡಿದರು.

IPL 2024 Punjab s Accidental Batting Pick Becomes Match Winner Know Who is Shashank Singh

ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ 200 ರನ್‌ಗಳ ಬೃಹತ್ ಮೊತ್ತ ಚೇಸ್ ಮಾಡುವಾಗ ಬ್ಯಾಟ್‌ನೊಂದಿಗೆ ಹೋರಾಡಿದ ಪಂಜಾಬ್ ಕಿಂಗ್ಸ್ ತಂಡದ ಕೆಲವೇ ಬ್ಯಾಟರ್‌ಗಳಲ್ಲಿ 32 ವರ್ಷದ ಶಶಾಂಕ್ ಸಿಂಗ್ ಕೂಡ ಒಬ್ಬರು.

ಛತ್ತೀಸ್‌ಗಢ ಮೂಲದ ಆಟಗಾರನಿಗೆ 2024ರ ಐಪಿಎಲ್ ಬ್ರೇಕ್‌ಔಟ್ ಆವೃತ್ತಿಯಾಗಿದೆ. 2024ರ ಐಪಿಎಲ್‌ಗಾಗಿ ನಡೆದ ಮಿನಿ ಸಮಯದಲ್ಲಿ ಅವರ ಹೆಸರಿನ ಬಗ್ಗೆ ಗೊಂದಲವು ಅವರ ಕನಸನ್ನು ಕೊನೆಗೊಳಿಸಿದ್ದರಿಂದ ಶಶಾಂಕ್ ಸಿಂಗ್‌ಗೆ ಇದು ಸುಲಭದ ಪ್ರಯಾಣವಾಗಿರಲಿಲ್ಲ.

ದೇಶೀಯ ಕ್ರಿಕೆಟ್ ಬಲ್ಲ ಅಭಿಮಾನಿಗಳು ಶಶಾಂಕ್ ಸಿಂಗ್‌ ಅವರ ಪ್ರತಿಭೆಯನ್ನು ತಿಳಿದಿದ್ದಾರೆ. ವಿಶೇಷವಾಗಿ ಟಿ20 ಸ್ವರೂಪಗಳಲ್ಲಿ ಅವರ ಆಟವು ಅತ್ಯುತ್ತಮವಾಗಿದೆ. ಎಲ್ಲಾ ಅಡೆತಡೆಗಳ ಹೊರತಾಗಿಯೂ, ಶಶಾಂಕ್ ಸಿಂಗ್‌ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಐಪಿಎಲ್‌ನಂತಹ ದೊಡ್ಡ ವೇದಿಕೆಯನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ.

IPL 2024 Punjab s Accidental Batting Pick Becomes Match Winner Know Who is Shashank Singh

ಐಪಿಎಲ್ 2024: ಶಶಾಂಕ್ ಸಿಂಗ್ ಹೆಸರಿನ ಬಗ್ಗೆ ಗೊಂದಲ

ಕಳೆದ ಡಿಸೆಂಬರ್‌ನಲ್ಲಿ ನಡೆದ 2024ರ ಐಪಿಎಲ್ ಹರಾಜು ಸಂದರ್ಭದಲ್ಲಿ ಪಂಜಾಬ್ ಕಿಂಗ್ಸ್ ಟೇಬಲ್‌ನಲ್ಲಿ ಅವ್ಯವಸ್ಥೆ ಕಂಡುಬಂತು. ಫ್ರಾಂಚೈಸಿ ಸಹ-ಒಡತಿ ಪ್ರೀತಿ ಜಿಂಟಾ ಅವರು ತಾನು ತಪ್ಪಾದ ಆಟಗಾರನನ್ನು ಆರಿಸಿದ್ದೇನೆ ಎಂದು ಹೇಳಲು ಹರಾಜುದಾರನ ಕಡೆಗೆ ನೋಡಿದಳು. ಆ ಆಟಗಾರ ಬೇರೆ ಯಾರೂ ಅಲ್ಲ ಇದೇ ಶಶಾಂಕ್ ಸಿಂಗ್.

ಐಪಿಎಲ್‌ನ ಭಾಗವಾಗಲು ಶಶಾಂಕ್ ಸಿಂಗ್ ಅವರ ಆಶಯಗಳು ಮತ್ತು ಆಕಾಂಕ್ಷೆಗಳು ಬಹುತೇಕ ಕೊನೆಯಾದಂತೆ ಕಂಡಿತ್ತು. ಆಗ ಬಿಡ್ ರದ್ದಾಗುವ ಸಾಧ್ಯತೆಯಿದೆ ಮತ್ತು ಇದು ಕ್ರೂರ ನಿರ್ಣಯವಾಗಿದೆ ಎಂದು ಉಳಿದವರೆಲ್ಲ ಗೊಣಗುತ್ತಿದ್ದರು. ಹರಾಜಿನ ವೇಳೆ ಬಂಗಾಳದ ಅದೇ ಹೆಸರಿನ ಮತ್ತೊಬ್ಬ ಆಟಗಾರ ಪಂಜಾಬ್ ಕಿಂಗ್ಸ್ ಗೆ ಆಯ್ಕೆಯಾಗಬೇಕೆಂದು ಭಾವಿಸಲಾಗಿತ್ತು.

ಅಂತಿಮವಾಗಿ ಇದೇ ಶಶಾಂಕ್ ಸಿಂಗ್ ಅವರನ್ನು ಆಯ್ಕೆ ಮಾಡಲಾಯಿತು ಮತ್ತು ಮೂಲ ಬೆಲೆ 20 ಲಕ್ಷ ರೂಪಾಯಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಂಡರು.

IPL 2024 Punjab s Accidental Batting Pick Becomes Match Winner Know Who is Shashank Singh

ಐಪಿಎಲ್ 2024ರಲ್ಲಿ ಶಶಾಂಕ್ ಸಿಂಗ್ ಆರ್‌ಸಿಬಿ ವಿರುದ್ಧ ತ್ವರಿತ 21 ರನ್ ಗಳಿಸುವ ಮೊದಲು ಪಂಜಾಬ್ ಕಿಂಗ್ಸ್‌ನೊಂದಿಗೆ ತಮ್ಮ ಐಪಿಎಲ್ ವೃತ್ತಿಜೀವನವನ್ನು ಡಕ್‌ನೊಂದಿಗೆ ಆರಂಭಿಸಿದರು. ಆರ್‌ಸಿಬಿ ವಿರುದ್ಧದ ಸೋಲಿನ ಪಂದ್ಯದಲ್ಲಿ ಆ ಸಣ್ಣ ಅತಿಥಿ ಪಾತ್ರದಲ್ಲಿಯೂ ಸಹ ಬ್ಯಾಟಿಂಗ್ ಪ್ರದರ್ಶನದಲ್ಲಿ ಸಾಕಷ್ಟು ಪ್ರತಿಭೆ ಇತ್ತು.

ಇನ್ನು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 200 ರನ್‌ಗಳನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡವನ್ನು ಗೆಲ್ಲಿಸಲು ಶಶಾಂಕ್ ಸಿಂಗ್ ಅವರಿಂದ ದೊಡ್ಡ ಇನ್ನಿಂಗ್ಸ್ ಹೊರಂಬಂದಿತು. ಕೇವಲ 29 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಸಮೇತ ಅಜೇಯ 61 ರನ್ ಬಾರಿಸಿದರು.

ಎಲ್ಲಾ ಪ್ರಮುಖ ಬ್ಯಾಟರ್‌ಗಳು ಪೆವಿಲಿಯನ್‌ಗೆ ಮರಳಿದರು ಮತ್ತು ಬೇಕಾದ ರನ್ ರೇಟ್ ಏರುತ್ತಿರುವಾಗ, ಶಶಾಂಕ್ ಸಿಂಗ್ ತಮ್ಮ ಸಾಮರ್ಥ್ಯವನ್ನು ತೋರಿಸಲು ಮುಂದಾದರು. ಶಶಾಂಕ್ ಸಿಂಗ್ ಅವರು ತಮ್ಮ ತಂಡವನ್ನು ಕೊನೆಯ ಓವರ್‌ನಲ್ಲಿ ರೋಚಕವಾಗಿ ಗೆಲ್ಲಿಸಲು ಸಹಾಯ ಮಾಡಿದರು.

ಗುಜರಾತ್ ಟೈಟನ್ಸ್ vs ಪಂಜಾಬ್ ಕಿಂಗ್ಸ್ ಪಂದ್ಯ ವಿವರ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಟೈಟನ್ಸ್ ತಂಡ ಶುಭ್ಮನ್ ಗಿಲ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್‌ಗಳನ್ನು ಕಲೆಹಾಕಿತ್ತು.

200 ರನ್‌ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡ ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ಸಾಹಸದ ನೆರವಿನಿಂದ 19.5 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ನಿಗದಿತ ಗುರಿ ತಲುಪಿ ಅಮೋಘ ಗೆಲುವು ದಾಖಲಿಸಿತು.

Story first published: Friday, April 5, 2024, 11:59 [IST]
Other articles published on Apr 5, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+