ಬ್ಯಾಟಿಂಗ್ ಮರೆತು ಸೋತ್ರಾ ಪ್ರೀತಿ ಹುಡುಗರು!
ಪುಣೆ, ಏ. 11 : ಬಲಾಡ್ಯ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ಕಿಂಗ್ಸ್ ಇಲವೆನ್ ಪಂಜಾಬ್ ಮೊದಲ ಪಂದ್ಯದಲ್ಲಿ 26 ರನ್‌ಗಳ ಸೋಲು ಅನುಭವಿಸಿದೆ. ರಾಜಸ್ಥಾನ ರಾಯಲ್ಸ್ ನೀಡಿದ್ದ 163 ರನ್‌ಗಳ ಗುರಿಯನ್ನು ತಲುಪಲು ಪಂಜಾಬ್ ವಿಫಲವಾಯಿತು.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ರಾಜಸ್ಥಾನ ರಾಯಲ್ಸ್, ಆರಂಭಿಕ ವೈಫಲ್ಯದ ಹೊರತಾಗಿಯೂ 20 ಓವರ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 162 ರನ್‌ಗಳಿಸಿ, ಪಂಜಾಬ್‌ಗೆ 163 ರನ್‌ಗಳ ಗುರಿ ನೀಡಿತು. [ಐಪಿಎಲ್ 2015ಗೂ ತಟ್ಟಿದ ಫಿಕ್ಸಿಂಗ್ ಭೂತದ ಕಾಟ]
ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಹೊಂದಿದ್ದರೂ ರಾಜಸ್ಥಾನದ ಶಿಸ್ತಿನ ದಾಳಿಗೆ ತಕ್ಕ ಉತ್ತರ ನೀಡಲು ಪಂಜಾಬ್ ವಿಫಲವಾಯಿತು. 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 136 ರನ್‌ಗಳಿಸಿ ಸೋಲೊಪ್ಪಿಕೊಂಡಿತು. ರಾಜಸ್ಥಾನ ಗೆಲವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತು. [ಆರ್ ಸಿಬಿ vs ಹೈದರಾಬಾದ್ ಕದನಕ್ಕೆ ಸೌರಶಕ್ತಿ]
ಅಂದಹಾಗೆ ಏ.11ರ ಶನಿವಾರ ಚೆನ್ನೈ ಸೂಪರ್ ಕಿಂಗ್ಸ್-ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಮಧ್ಯಾಹ್ನ 4 ಗಂಟೆಗೆ ಮತ್ತು ಕೋಲ್ಕತ್ತಾ-ಬೆಂಗಳೂರು ನಡುವಿನ ಪಂದ್ಯ ರಾತ್ರಿ 8 ಗಂಟೆಗೆ ನಡೆಯಲಿದೆ. [ಪಿಟಿಐ ಚಿತ್ರಗಳು]

ಮೊದಲ ಪಂದ್ಯದಲ್ಲಿ ಸೋತ ಪ್ರೀತಿ ಹುಡುಗರು
ಬಲಾಡ್ಯ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ಕಿಂಗ್ಸ್ ಇಲವೆನ್ ಪಂಜಾಬ್ ಐಪಿಎಲ್ 8ನೇ ಅವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ 26ರನ್‌ಗಳ ಸೋಲು ಅನುಭವಿಸಿದೆ. ರಾಜಸ್ಥಾನ ರಾಯಲ್ಸ್ ನೀಡಿದ್ದ 163 ರನ್‌ಗಳ ಗುರಿಯನ್ನು ತಲುಪಲು ಪಂಜಾಬ್ ವಿಫಲವಾಯಿತು.

163 ರನ್ ಟಾರ್ಗೆಟ್ ನೀಡಿದ ರಾಜಸ್ಥಾನ
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ರಾಜಸ್ಥಾನ ರಾಯಲ್ಸ್, ಆರಂಭಿಕ ವೈಫಲ್ಯದ ಹೊರತಾಗಿಯೂ 20 ಓವರ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 162 ರನ್‌ಗಳಿಸಿ, ಪಂಜಾಬ್‌ಗೆ 163 ರನ್‌ಗಳ ಗುರಿ ನೀಡಿತು.

ನಿರೀಕ್ಷೆ ಹುಸಿ ಮಾಡಿದ ಪ್ರೀತಿ ಹುಡುಗರು
ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ಪಂಜಾಬ್ ಆಟಗಾರರು ನಿರಾಸೆ ಮೂಡಿಸಿದರು. ವೀರೇಂದ್ರ ಸೆಹ್ವಾಗ್ ಡಕ್ ಔಟ್ ಆದರು, ಮ್ಯಾಕ್ಸ್‌ವೆಲ್ ಕೇವಲ 7 ರನ್ ಗಳಿಸಿದರು. ಮುರಳಿ ವಿಜಯ್ (37), ವೃದ್ಧಿಮಾನ್ ಸಹಾ (7), ಅಕ್ಷರ್ ಪಟೇಲ್ (24), ಡೇವಿಡ್ ಮಿಲ್ಲರ್ (23), ಜಾರ್ಜ್ ಬೈಲಿ (24) ರನ್ ಗಳಿಸಿದರೂ ತಂಡ ಜಯಗಳಿಸಲಿಲ್ಲ.

ಮಿಂಚಿದ ಜೇಮ್ಸ್ ಫಾಲ್ಕನರ್
ರಾಜಸ್ಥಾನ ತಂಡಕ್ಕೆ ಜೇಮ್ಸ್ ಫಾಲ್ಕನರ್ ಆಸರೆಯಾದರು. 75ಕ್ಕೆ 5 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ಜೇಮ್ಸ್ ಫಾಲ್ಕನರ್ (46) ಹಾಗೂ ದೀಪರ್ ಹೂಡಾ (30) 36 ಎಸೆತಗಳಲ್ಲಿ 51 ರನ್ ಜತೆಯಾಟ ನಡೆಸಿ ತಂಡಕ್ಕೆ ಬಲ ತುಂಬಿದರು. ಬಿರುಸಿನ ಆಟವಾಡಿದ ಫಾಲ್ಕನರ್ 33 ಬಾಲ್‌ಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿದರು.

ಬೌಲಿಂಗ್‌ನಲ್ಲಿ ಪಂಜಾಬ್ ಪರಾಕ್ರಮ
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ರಾಜಸ್ಥಾನ್ ಅನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ತಂತ್ರ ರೂಪಿಸಿತ್ತು. ಅದರಂತೆ ಅನುರೀತ್ ಸಿಂಗ್ 3, ಮಿಚೆಲ್ ಜಾನ್ಸನ್ 4 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications