For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 8: ಮುಂಬೈ ಬುಟ್ಟಿಗೆ ವಿನಯ್ ಕುಮಾರ್

ಮುಂಬೈ, ನ. 5 : ಕರ್ನಾಟಕದ ಆರ್. ವಿನಯ್ ಕುಮಾರ್ ಮತ್ತು ದೆಹಲಿಯ ಬ್ಯಾಟ್ಸ್ ಮನ್ ಉನ್ಮುಕ್ತ್‌ ಚಾಂದ್‌ ಐಪಿಎಲ್-8 ರಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಆಡಲಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಎಂಟನೇ ಆವೃತ್ತಿ 2015ರ ಏಪ್ರಿಲ್‌ 8 ರಿಂದ ಮೇ 24ರವರೆಗೆ ನಡೆಯಲಿದ್ದು ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದಲ್ಲಿದ್ದ ಆರ್‌.ವಿನಯ್‌ ಕುಮಾರ್‌ ಮತ್ತು ರಾಜಸ್ಥಾನ ರಾಯಲ್ಸ್‌ ತಂಡದಲ್ಲಿದ್ದ ಉನ್ಮುಕ್ತ್‌ ಚಾಂದ್‌ ಸೇರಿಕೊಂಡಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ತಿಳಿಸಿದ್ದಾರೆ.[ವಿಜಯ್ ಹಜಾರೆ ಟ್ರೋಫಿಗೆ ಬಲಿಷ್ಠ ಕರ್ನಾಟಕ ತಂಡ]

vinay kumar

ಅಕ್ಟೋಬರ್ 6ರಂದು ಆಟಗಾರರ ವಗರ್ಗಾವಣೆ ಪ್ರಕ್ರಿಯೆಗೆ ಅವಕಾಶ ನೀಡಲಾಗಿತ್ತು. ಇದೆ ಮೊದಲ ಬಾರಿಗೆ ಎರಡು ಆಟಗಾರರು ವರ್ಗಾವಣೆಗೊಂಡಿದ್ದು ಡಿಸೆಂಬರ್ 12 ರವರೆಗೆ ಆಟಗಾರರ ಬದಲಾವಣೆಗೆ ಅವಕಾಶವಿದೆ. 2015 ರ ವಿಶ್ವಕಪ್ ಮುಗಿದ 10 ದಿನಗಳ ನಂತರ ಚುಟುಕು ಕ್ರಿಕೆಟ್ ಕದನ ಆರಂಭವಾಗಲಿದೆ.

ಮುಂಬೈ ಇಂಡಿಯನ್ಸ್ ತಂಡದಿಂದ ಮೈಕಲ್‌ ಹಸ್ಸಿ ಮತ್ತು ಪ್ರವೀಣ್‌ ಕುಮಾರ್‌ ಅವರನ್ನು ತಂಡದಿಂದ ಕೈಬಿಡಲಾಗಿದ್ದು ಅವರ ಜಾಗದಲ್ಲಿ ವಿನಯ್‌ ಮತ್ತು ಚಾಂದ್‌ಗೆ ಸ್ಥಾನ ಕಲ್ಪಿಸಲಾಗಿದೆ.[ಸಚಿನ್ ಚಾಪೆಲ್ ರನ್ನು 'ರಿಂಗ್ ಮಾಸ್ಟರ್' ಅಂದಿದ್ದು ಯಾಕೆ?]

ಅಲ್ಲದೇ 2016 ಮತ್ತು 2017 ಐಪಿಎಲ್ ವೇಳಾಪಟ್ಟಿಯನ್ನು ಇದೇ ವೇಳೆ ಬಿಡುಗಡೆ ಮಾಡಲಾಗಿದೆ. 2016ರ (9ನೇ) ಆವೃತ್ತಿಯ ಪಂದ್ಯಗಳು ಏಪ್ರಿಲ್‌ 8ಕ್ಕೆ ಆರಂಭವಾಗಿ ಮೇ 30ಕ್ಕೆ ಕೊನೆಗೊಂಡರೆ, 2017ರ (10ನೇ) ಆವೃತ್ತಿಯ ಟೂರ್ನಿಯು ಏಪ್ರಿಲ್‌ 5ರಿಂದ ಮೇ 21ರವರೆಗೆ ನಡೆಯಲಿದೆ ಎಂದು ಪಾಟೀಲ್ ತಿಳಿಸಿದ್ದಾರೆ.

Story first published: Wednesday, January 3, 2018, 10:12 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+